ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿಯೂ ಒಂದು ಪ್ರಕರಣದಲ್ಲಿ ಕೊರೊನಾ ಕುಲಾಂತರಿ ಸೋಂಕು ಡೆಲ್ಟಾ ಪ್ಲಸ್ ಕಂಡುಬಂದಿದೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಕೇಸ್ ಡೆಲ್ಟಾ ಪ್ಲಸ್ ಅಂತ ಗುರುತಿಸಲಾಗಿದೆ. ಈ ಕೇಸ್ ಗಳ ಪರಿಶೀಲನೆ ಮಾಡಿದಾಗ ಬಹಳ ಹಿಂದೆಯೇ ರಾಜ್ಯ ಸರ್ಕಾರದ ಮಟ್ಟದಲ್ಲಿ ಜಿನೋಮ್ ಸೀಕ್ವೆನ್ಸ್ ಸಹ ಮಾಡಲಾಗಿತ್ತು. ಆ ಮೂಲಕ ಇದು ಗುರುತಿಸಲಾಗಿದೆ. ಇಡೀ ದೇಶದಲ್ಲಿಯೇ ಮ್ಯೂಟೆಂಟ್ ವೈರೆಸ್ ಡೆಲ್ಟಾ ಪ್ಲಸ್ ಎಂದು ಪ್ರತ್ಯೇಕಿಸಿ ಈ ಕೇಸ್ ಗುರುತಿಸಲಾಗಿದೆ. ಡೆಲ್ಟಾ ಗಿಂತ ಸ್ವಲ್ಪ ಭಿನ್ನವಾದ ವೆರೆಯಂಟ್ ಅಂತ ಪ್ರತ್ಯೇಕಿಸಿ ಇಡಲಾಗಿತ್ತು. ಈಗ ಇದಕ್ಕೆ ಡೆಲ್ಟಾ ಪ್ಲಸ್ ಎಂದು ಹೆಸರಿಸಲಾಗಿದೆ ಎಂದರು.
Advertisement
ಬಹಳ ಹಿಂದೆ ಆಗಿರುವ ಪ್ರಕರಣ ಆದ್ದರಿಂದ ಈ ವ್ಯಕ್ತಿ ಈಗ ಗುಣಮುಖರಾಗಿದ್ದಾರೆ. ಇವರ ಸಂಪರ್ಕದಲ್ಲಿದ್ದ ಕುಟುಂಬಸ್ಥರು ಸಹ ಗುಣಮುಖರಾಗಿದ್ದಾರೆ. ನಗರದಲ್ಲಿಯೂ ಜಿನೋಮ್ ಸೀಕ್ವೆನ್ಸಿಂಗ್ ಬಗ್ಗೆ ಹೆಚ್ಚು ಒತ್ತು ಕೊಡಲಾಗುತ್ತದೆ ಎಂದರು.
Advertisement
ಆರ್ ಟಿ ಪಿಸಿಆರ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಾಗ, ಯಾವ ವೈರಸ್ ವೆರೆಯಂಟ್ ಎಂಬ ಬಗ್ಗೆಯೂ ಚೆಕ್ ಮಾಡಲಾಗುತ್ತದೆ. ಇದು ಹೊಸ ಕೆಲಸ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡಲಾಗುತ್ತದೆ ಎಂದರು. ಈ ಡೆಲ್ಟಾ ಪ್ಲಸ್ ವೈರಸ್ ಹಾಗೂ ಡೆಲ್ಟಾ ವೈರಸ್ ನ ನಡುವೆ ಇರುವ ವ್ಯತ್ಯಾಸ, ಗುಣಲಕ್ಷಣಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ ಎಂದರು. ತಜ್ಞರ ಸಲಹೆ ಮೇರೆಗೆ ಕ್ರಮಕೈಗೊಳ್ಳಲಾಗುತ್ತದೆ ಎಂದರು.
Advertisement
Advertisement
ಇನ್ನು ಬಿಬಿಎಂಪಿ ನಡೆಸಿರುವ ಡೆತ್ ಆಡಿಟ್ ರಿಪೋರ್ಟ್ ವಿಚಾರವಾಗಿ ಮಾತನಾಡಿದ ಗೌರವ್ ಗುಪ್ತಾ, ಈ ವಿಶ್ಲೇಷಣೆ ಪಡೆಯಲಾಗಿದೆ. ಈ ಪ್ರಕರಣಗಳಲ್ಲಿ 6 ಲಕ್ಷಕ್ಕಿಂತ ಹೆಚ್ಚು ಮಂದಿ ಹೋಂ ಐಸೋಲೇಷನ್ ನಲ್ಲಿದ್ದರು. ಎರಡೂ ಅಲೆಯಲ್ಲಿ 15 ಲಕ್ಷ ಕೇಸ್ ಈಗಾಗಲೇ ವರದಿಯಾಗಿದೆ. ಈ ಪೈಕಿ ಶೇ.90 ರಷ್ಟು ಜನರು ಹೋಂ ಐಸೂಲೇಷನ್ ನಲ್ಲಿದ್ದರು. ಶೇ.1 ಕ್ಕಿಂತ ಕಡಿಮೆ ಹೋಂ ಐಸೋಲೇಷನ್ ಡೆತ್ ಆಗಿದೆ. ಇದನ್ನು ಇನ್ನೂ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ನಿನ್ನೆ ನಗರದಲ್ಲಿ ಗಾಳಿಪಟದ ದಾರದಿಂದ ಕತ್ತು ಕೊಯ್ದು ವ್ಯಕ್ತಿಯೊಬ್ಬರಿಗೆ ತೀವ್ರ ಗಾಯವಾಗಿರುವ ವಿಚಾರವಾಗಿ ಮಾತನಾಡಿ, ಗಾಳಿಪಟ ಮಾಂಜಾ ದಾರ ಬ್ಯಾನ್ ಆಗಿದೆ. ಇದನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.