ಬೆಂಗಳೂರು: ತಣ್ಣಗಿದ್ದ ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕೊರೊನಾ ಸ್ಫೋಟವಾಗುವ ಸಾಧ್ಯತೆಗಳು ದಟ್ಟವಾಗಿವೆ. ನಗರದಲ್ಲಿ ಇಂದು ಮತ್ತೆ 7 ಪ್ರಕರಣಗಳು ಪತ್ತೆಯಾಗುವ ಸಂಭವವಿದೆ.
ವಿದೇಶದಿಂದ ಬಂದವರಲ್ಲಿ ಇಬ್ಬರಿಗೆ, ಪುಟ್ಟೆನಹಳ್ಳಿಯಲ್ಲಿ 3, ಪಾದಾರಾಯನ ಪುರ ಹಾಗೂ ನಾಗರಬಾವಿಯಲ್ಲಿ ತಲಾ 1 ಪ್ರಕರಣ ಇಂದು ಪತ್ತೆಯಾಗಲಿದ್ದು, ಈ ಮೂಲಕ ಇಂದು ಬೆಂಗಳೂರಿನಲ್ಲಿ 7 ಪ್ರಕರಣ ಬೆಳಕಿಗೆ ಬರುವ ಶಂಕೆ ವ್ಯಕ್ತವಾಗುತ್ತಿದೆ. ಆರೋಗ್ಯಾಧಿಕಾರಿಗಳು ಇಂದು ಬೆಳಗ್ಗಿನ ಬುಲೆಟಿನ್ ನಲ್ಲಿ ಪ್ರಕಟ ಮಾಡಲಿದ್ದಾರೆ.
ನಾಗರಾಬಾವಿಯಲ್ಲಿ 57 ವರ್ಷದ ಮಹಿಳೆಯಲ್ಲಿ ಸೊಂಕು ಪತ್ತೆಯಾಗಿದೆ. ಇವರು ಕ್ವಾರಂಟೈನ್ ನಲ್ಲಿ ಇದ್ದರು. ಈ ಮಹಿಳೆ ಎಲ್ಲಿ ಹೋಗಿದ್ರು, ಎಲ್ಲಿ ಬಂದರು ಎಂಬುದು ಗೊತ್ತಿಲ್ಲ. ಹೀಗಾಗಿ ಆರೋಗ್ಯಾಧಿಕಾರಿಗಳು ಸೊಂಕಿನ ಮೂಲ ಪತ್ತೆಹಚ್ಚುತ್ತಿದ್ದಾರೆ.
ಪಾದರಾಯನಪುರ ಚೈನ್‍ಲಿಂಕ್‍ಗೆ ಬ್ರೇಕ್ ಬೀಳುತ್ತಿಲ್ಲ. ಹೀಗಾಗಿ ಕೊರೊನಾ ಹಾಟ್‍ಸ್ಪಾಟ್ ಪಾದರಾಯನಪುರದಲ್ಲಿ ರ‍್ಯಾಂಡಮ್ ಟೆಸ್ಟ್ ರಿಸಲ್ಟ್ ಮತ್ತಷ್ಟು ಆತಂಕ ಹೆಚ್ಚಿಸಿದೆ. ಇನ್ನೂ 500 ಜನರ ರಿಪೋರ್ಟ್ ಮುಂದಿನ ನಾಲ್ಕು ದಿನಗಳಲ್ಲಿ ಬರಲಿದೆ. ನಿನ್ನೆ ಪಾದರಾಯನಪುರದ 30 ವರ್ಷ ಮಹಿಳೆಗೆ ಸೋಂಕು ದೃಢಪಟ್ಟಿತ್ತು. ಆದರೆ ಆರೋಗ್ಯ ಇಲಾಖೆಗೆ ಪಾಸಿಟಿವ್ ಮಹಿಳೆಯ ಟ್ರಾವಲ್ ಹಿಸ್ಟರಿ ತಲೆನೋವಾಗಿದೆ.
ಪುಟ್ಟೇನಹಳ್ಳಿಯಲ್ಲಿ ಸೋಂಕಿತನಿಂದ ಪತ್ನಿ, ಇಬ್ಬರು ಮಕ್ಕಳಿಗೆ ಸೋಂಕು ಹರಡಿರುವ ಶಂಕೆ ವ್ಯಕ್ತವಾಗುತ್ತಿದೆ. ತಮಿಳುನಾಡಿನಿಂದ ಬಂದಿದ್ದ ಸೋಂಕಿತ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿದ್ದರು. ಇಂದಿನ ಹೆಲ್ತ್ ಬುಲೆಟಿನ್‍ನಲ್ಲಿ ಪುಟ್ಟೇನಹಳ್ಳಿ, ಪಾದರಾಯನಪುರ ಕೇಸ್ ಘೋಷಣೆಯಾಗುವ ಸಾಧ್ಯತೆ ಇದೆ.