ಬೆಂಗಳೂರು: ಕೊರೊನಾ ಹೊಡೆತಕ್ಕೆ ಹೋಟೆಲ್ ಉದ್ಯಮಗಳು ನಷ್ಟದಲ್ಲಿದ್ದು, ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಹೋಟೆಲ್‍ಗಳು ಆಸ್ಪತ್ರೆಗಳಾಗಿ ಬದಲಾಗುತ್ತಿವೆ.
ಬೆಂಗಳೂರಲ್ಲೇ ಸಾವಿರಕ್ಕೂ ಹೆಚ್ಚು ಹೋಟೆಲ್‍ಗಳು ಮಾರಾಟಕ್ಕೆ ಸಜ್ಜಾಗಿವೆ. 50ಕ್ಕೂ ಹೆಚ್ಚು ಹೋಟೆಲ್‍ಗಳು ಆಸ್ಪತ್ರೆಗಳಾಗಿ ಬದಲಾವಣೆಯಾಗಿವೆ. ಐಟಿ ಕಚೇರಿಗಳ ಬಳಿಯಿದ್ದ ಬಹುತೇಕ ಹೋಟೆಲ್‍ಗಳು ಸ್ಥಗಿತಗೊಂಡಿವೆ.
ಬೆಂಗಳೂರಲ್ಲಿ ಕೊರೊನಾ ಹೊಡೆತಕ್ಕೆ ಸಿಲುಕಿ ಈಗಾಗಲೇ ಮೂರು ಹೋಟೆಲ್‍ಗಳು ಆಸ್ಪತ್ರೆಗಳಾಗಿ ಬದಲಾಗಿವೆ. ಶೇಷಾದ್ರಿಪುರಂ ಸರ್ಕಲ್‍ನಲ್ಲಿದ್ದ ಹೋಟೆಲ್ ಈಗ ಟ್ರಿನಿಟಿ ಆಸ್ಪತ್ರೆಯಾಗಿ ಬದಲಾಗಿದೆ. ಇನ್‍ಫ್ಯಾಂಟ್ರಿ ರಸ್ತೆಯಲ್ಲಿದ್ದ `ಮಿಂಟ್ ಮಸಾಲಾ’ ಹೋಟೆಲ್‍ಗೆ ಆಸ್ಪತ್ರೆಯ ರೂಪ ಕೊಡಲಾಗಿದೆ. ಇದನ್ನೂ ಓದಿ: ದೊಡ್ಮನೆ ಪ್ರಣಯ ಪಕ್ಷಿಗಳ ನಡುವೆ ಮುನಿಸು – ಡಿಯು ಜೊತೆ ಮಾತು ಬಿಟ್ಟ ಅರವಿಂದ್
ಮಂತ್ರಿ ಮಾಲ್ ಬಳಿ ಇದ್ದ ಎಂಟಿಆರ್ ಹೋಟೆಲ್ ಪಕ್ಕದ ವಸತಿಗೃಹ ಆಸ್ಪತ್ರೆಯಾಗಿ ಬದಲಾಗಿವೆ. ಐಟಿ ಕಚೇರಿಗಳ ಬಳಿಯಿದ್ದ ಬಹುತೇಕ ಹೋಟೆಲ್‍ಗಳು ಸ್ಥಗಿತಗೊಂಡಿವೆ. ಐಟಿ ಕಂಪನಿಗಳಲ್ಲಿ ವರ್ಕ್ ಫ್ರಂ ಹೋಂ ಇರುವುದರಿಂದ ಗ್ರಾಹಕರ ಕೊರತೆ ಇದೆ. ವೈಟ್‍ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ ಬಳಿಯ ಸಣ್ಣ ಹೋಟೆಲ್‍ಗಳು ಬಂದ್ ಆಗಿವೆ.
ಇನ್‍ಫೋಸಿಸ್ ಪಕ್ಕದಲ್ಲೇ ಇದ್ದ 15-20 ಹೋಟೆಲ್‍ಗಳು ಕ್ಲೋಸ್ ಆಗಿದ್ದು, ವಿಪ್ರೋ ಕಂಪನಿ ಬಳಿಯಿದ್ದ ಸುಮಾರು 15 ಹೋಟೆಲ್‍ಗಳು ಬಂದ್ ಆಗಿವೆ. ಬಾಡಿಗೆ, ತೆರಿಗೆ, ಕಾರ್ಮಿಕರಿಗೆ ವೇತನ ಕಟ್ಟಲಾಗದೆ ನಷ್ಟದಲ್ಲಿರುವ 1 ಸಾವಿರ ಹೋಟೆಲ್‍ಗಳು ಮಾರಾಟಕ್ಕೆ ಸಜ್ಜಾಗಿವೆ.