ಬುಲೆಟ್ ಏರಿ ಮದುವೆ ಮಂಟಪಕ್ಕೆ ಬಂದ ವಧು!

Public TV
1 Min Read
mng 1 1

ಮಂಗಳೂರು: ಮದುವೆ ಮಂಟಪಕ್ಕೆ ಮದುಮಗಳು ಬುಲೆಟ್‍ನಲ್ಲಿ ಸೋಲೋ ರೈಡ್ ಮೂಲಕ ಎಂಟ್ರಿ ಕೊಟ್ಟು ಮದುವೆಗೆ ಬಂದಿದ್ದವರನ್ನು ಹುಬ್ಬೇರಿಸುವಂತೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದೆ.

mng2ಮಂಗಳೂರಿನ ಸುರತ್ಕಲ್ ಮೂಲದ ಪೂಜಾ, ಆಕಾಶ್ ಎಂಬ ವರನನ್ನು ಇತ್ತೀಚೆಗೆ ಮದುವೆಯಾಗಿದ್ದಾರೆ. ಮದುವೆ ಸಮಯದಲ್ಲಿ ಮಂಟಪಕ್ಕೆ ಬುಲೆಟ್ ಮೂಲಕ ಎಂಟ್ರಿ ಕೊಟ್ಟ ಮದುಮಗಳ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

mng4ವಧು ಪೂಜಾ ಅವರಿಗೆ ಬುಲೆಟ್ ಎಂದರೆ ಸಖತ್ ಇಷ್ಟ. ಪೂಜಾ ಸಿಂಗಾರಗೊಂಡಿದ್ದ ಕಾರನ್ನು ಹತ್ತಿ ಬರುವ ಬದಲು ತನ್ನ ಸ್ವಂತ ಬುಲೆಟ್ ಓಡಿಸಿಕೊಂಡು ಮದುವೆ ಮಂಟಪಕ್ಕೆ ಎಂಟ್ರಿಯಾಗಿದ್ದಾರೆ. ಕಾಸರಗೋಡು ಮೂಲದ ಮ್ಯಾಚ್ ಫ್ರೇಮ್ ವೆಡ್ಡಿಂಗ್ ಸಂಸ್ಥೆಯ ಕ್ಯಾಮೆರಾಮೆನ್ಸ್ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

mng3ಮದುವೆಯಲ್ಲಿ ವಿಭಿನ್ನವಾಗಿ ಕಾಣಿಸಕೊಳ್ಳಬೇಕು ಎಂದು ಪ್ರತಿಯೊಬ್ಬ ವಧು-ವರನೂ ಅಂದುಕೊಳ್ಳುತ್ತಾರೆ. ಆದರೆ ಪೂಜಾರ ಹೊಸದೊಂದು ಪ್ರಯತ್ನ ಮದುವೆ ಮನೆಯಲ್ಲಿ ನೆರೆದಿದ್ದವರಲ್ಲಿ ಆಶ್ಚರ್ಯ, ಖುಷಿ ಒಟ್ಟೊಟ್ಟಿಗೆ ಅಗುವಂತೆ ಮಾಡಿದೆ. ಬುಲೆಟ್ ರಾಣಿ ವಧುವಿನ ಈ ವಿಡಿಯೋ ಇದೀಗ ಸೋಷಿಯಲ್ ಮಿಡೀಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

Share This Article