– ಕೊನೆಯಲ್ಲಿ ಅಬ್ಬರಿಸಿದ ಕಮ್ಮಿನ್ಸ್
ಅಬುಧಾಬಿ: ಮುಂಬೈ ಇಂಡಿಯನ್ಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಟೂರ್ನಿಯ ಮೊದಲ ಪಂದ್ಯದಲ್ಲೇ ಸೋಲುಂಡಿದೆ. ಈ ಮೂಲಕ ಮುಂಬೈ ಐಪಿಎಲ್-2020ಯಲ್ಲಿ ತನ್ನ ಮೊದಲ ಗೆಲುವನ್ನು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ ಅವರು ರೋಚಕ ಅರ್ಧಶತಕ ಮತ್ತು ಸೂರ್ಯಕುಮಾರ್ ಯಾದವ್ ಅವರು ಮಿಂಚಿನ ಆಟದಿಂದ ನಿಗದಿತ 20 ಓವರಿನಲ್ಲಿ 195 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭದಿಂದಲೇ ಕುಂಟುತ್ತಾ ಸಾಗಿತ್ತು. ಪರಿಣಾಮ ನಿಗದಿತ 20 ಓವರಿನಲ್ಲಿ 9 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿ 49 ರನ್ ಅಂತರದಲ್ಲಿ ಸೋಲನ್ನು ಒಪ್ಪಿಕೊಂಡಿತು.
Advertisement
Advertisement
ಬೂಮ್ರಾ, ಬೌಲ್ಟ್ ಮಾರಕ ದಾಳಿ
ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವೇಗದ ಬೌಲರ್ ಗಳು ನೈಟ್ ರೈಡರ್ಸ್ ಗಳ ಮೇಲೆ ಸವರಿ ಮಾಡಿದರು. ಮೊದಲ ಓವರಿನಿಂದಲೇ ಒತ್ತಡ ಹಾಕಲು ಶುರು ಮಾಡಿದ ಟ್ರೆಂಟ್ ಬೌಲ್ಟ್ 4 ಓವರ್ ಮಾಡಿ 30 ರನ್ ನೀಡಿ ಎರಡು ವಿಕೆಟ್ ಪಡೆದರು. ಅಂತಯೇ ಜಸ್ಪ್ರೀತ್ ಬುಮ್ರಾ ಅವರು ನಾಲ್ಕು ಓವರ್ ಮಾಡಿ ಒಂದೇ ಓವರಿನಲ್ಲಿ ಎರಡು ಪ್ರಮುಖ ವಿಕೆಟ್ ಕಿತ್ತು ಕೋಲ್ಕತ್ತಾ ತಂಡವನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.
Advertisement
Advertisement
ಕೋಲ್ಕತ್ತಾ ನೈಟ್ ರೈಡರ್ಸ್ ಆಟಗಾರರ ಮೇಲೆ ಟ್ರೆಂಟ್ ಬೌಲ್ಟ್ ಆರಂಭದಿಂದಲೇ ಪ್ರಭಾವ ಬೀರಿದರು. ಇನ್ನಿಂಗ್ಸ್ ಮೊದಲ ಓವರ್ ಅನ್ನೇ ಮೇಡನ್ ಓವರ್ ಮಾಡಿದ ಬೌಲ್ಟ್ ತಾವು ಮಾಡಿದ ಎರಡನೇ ಓವರಿನಲ್ಲಿ ಯುವ ಆಟಗಾರ ಶುಭಮನ್ ಗಿಲ್ ಅವರನ್ನು ಔಟ್ ಮಾಡಿದರು. ನಾಲ್ಕನೇ ಓವರಿನಲ್ಲಿ ಜೇಮ್ಸ್ ಪ್ಯಾಟಿನ್ಸನ್ ಅವರ ಬೌನ್ಸರ್ ಗೆ ಸುನಿಲ್ ನರೈನ್ ಅವರು ಕೀಪರ್ ಕ್ಯಾಚ್ ಕೊಟ್ಟು ಔಟ್ ಆಗಿ ಹೊರನಡೆದರು.
That's that from Match 5 as the Mumbai Indians win by 49 runs.
Scorecard – https://t.co/xDQdI54h5N #KKRvMI pic.twitter.com/j58dPCYVQl
— IndianPremierLeague (@IPL) September 23, 2020
ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸಿದ ಮುಂಬೈ ಬೌಲರ್ ಗಳು ಕೋಲ್ಕತ್ತಾವನ್ನು ಪವರ್ ಪ್ಲೇನಲ್ಲಿ ಕೇವಲ 33 ರನ್ ಒಳಗೆ ಕಟ್ಟಿ ಹಾಕಿದರು. ಜೊತೆಗೆ ಕೋಲ್ಕತ್ತಾ 6 ಓವರ್ ಮುಕ್ತಾಯದ ವೇಳೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತ್ತು. ಇದಾದ ನಂತರ ನಾಯಕ ದಿನೇಶ್ ಕಾರ್ತಿಕ್ ಮತ್ತು ನಿತೀಶ್ ರಾಣಾ ಉತ್ತಮ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದ್ದರು. ಆದರೆ 10ನೇ ಓವರಿನ ಮೊದಲ ಬಾಲಿನಲ್ಲಿ 30 ರನ್ ಗಳಿಸಿ ಆಡುತ್ತಿದ್ದ ಕಾರ್ತಿಕ್ ಔಟ್ ಆದರು.
A big wicket for Chahar and the @mipaltan.#KKR lose the wicket of their Skipper.
Live – https://t.co/xDQdI5lRXl #Dream11IPL #KKRvMI pic.twitter.com/C6ygLufIQS
— IndianPremierLeague (@IPL) September 23, 2020
24 ರನ್‍ಗಳಿಸಿ ತಾಳ್ಮೆಯಿಂದ ಆಟವಾಡುತ್ತಿದ್ದ ನಿತೀಶ್ ರಾಣಾ ಬೌಂಡರಿಯಲ್ಲಿ ಹಾರ್ದಿಕ್ ಪಾಂಡ್ಯ ಹಿಡಿದ ಸೂಪರ್ ಕ್ಯಾಚಿಗೆ ಬಲಿಯಾದರು. ನಂತರ ಜಸ್ಪ್ರೀತ್ ಬುಮ್ರಾರ ಬೌಲಿಂಗ್ ಬೆಚ್ಚಿಬಿದ್ದ ಆಂಡ್ರೆ ರಸ್ಸೆಲ್ ಅವರು ಕ್ಲೀನ್ ಬೌಲ್ಡ್ ಆದರು. ಇದಾದ ಬಳಿಕ ಆದೇ ಓವರಿನಲ್ಲಿ ಇಯೊನ್ ಮೋರ್ಗಾನ್ ಅವರಿಗೂ ಕೂಡ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದರು. ನಂತರ ಬಂದ ನಿಖಿಲ್ ನಾಯಕ್ ಅವರು ಟ್ರೆಂಟ್ ಬೌಲ್ಟ್ ಅವರಿಗೆ ವಿಕೆಟ್ ಒಪ್ಪಿಸಿದರು.
Karthik and Rana steady ship for @KKRiders after the loss of two early wickets.
After 10 overs #KKR are 71/2 https://t.co/xDQdI5lRXl #Dream11IPL #KKRvMI pic.twitter.com/63usOIghxP
— IndianPremierLeague (@IPL) September 23, 2020
ನಂತರ ಪ್ಯಾಟ್ ಕಮ್ಮಿನ್ಸ್ ಸ್ವಲ್ಪ ಅಬ್ಬರದ ಆಟವಾಡಿ 12 ಬಾಲಿಗೆ 33 ರನ್ ಚಚ್ಚಿದರು. ಇದರಲ್ಲಿ ನಾಲ್ಕು ಭರ್ಜರಿ ಸಿಕ್ಸರ್ ಕೂಡ ಸೇರಿದ್ದವು. ಆದರೆ 18ನೇ ಓವರಿನಲ್ಲಿ ಜೇಮ್ಸ್ ಪ್ಯಾಟಿನ್ಸನ್ ಕಮ್ಮಿನ್ಸ್ ಔಟ್ ಆದರು.