ಶಿವಮೊಗ್ಗ: ತೊಂಭತ್ತರ ದಶಕದಲ್ಲಿ ಆರಂಭವಾದ ಸಾಗರದ ವನಶ್ರೀ ವಸತಿ ಶಾಲೆ, ಬಡ ಮಕ್ಕಳು, ಬುಡಕಟ್ಟು, ಹಾಗೂ ಅನಾಥ ಮಕ್ಕಳಿಗೆ ಉಚಿತ ವಸತಿ ಶಿಕ್ಷಣ ನೀಡುತ್ತಿರುವುದ್ದಕ್ಕಾಗಿ ರಾಷ್ಟ್ರ ಪ್ರಸಿದ್ಧಿ ಪಡೆದಿತ್ತು. ಆದರೆ ,ಇದೀಗ ಕೊರೊನಾದಿಂದಾಗಿ ಈ ಶಾಲೆ ಸಂಕಷ್ಟಕ್ಕೆ ಸಿಲುಕಿದೆ.
ಶಾಲೆಯಲ್ಲಿ ಹೈಸ್ಕೂಲ್‍ವರೆಗೆ ಆಂಗ್ಲ ಮಾಧ್ಯಮ ವಿದ್ಯಾಭ್ಯಾಸ, ಯೋಗ-ಸಂಗೀತ, ಆಧ್ಯಾತ್ಮ, ದುಂಡು ಮೇಜಿನ ಪರಿಷತ್ ತರಹ ವಿಶಿಷ್ಟ ಬೋಧನೆ, ಜೀವನ ಪಾಠಗಳು, ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಬೆರಗುಗೊಳಿಸಿದ್ದ ಈ ಶಾಲೆ ಕೊರೊನಾ ಸಂಕಷ್ಟಕ್ಕೆ ಸಿಲುಕಿದೆ. ಭಾರತೀಯ ಪರಂಪರೆ ಧ್ಯೋತಕದಂತಿದ್ದ ಈ ವಸತಿ ಶಾಲೆ ದಾನಿಗಳ ನೆರವಿಲ್ಲದಿದ್ದರೆ ನಡೆಸೋದು ಕಷ್ಟ ಎನ್ನುತ್ತಾರೆ ವನಶ್ರೀ ಶಾಲೆ ಸಂಸ್ಥಾಪಕರು. ಇದನ್ನೂ ಓದಿ: ಮಾಸ್ಕ್ ವಿಚಾರಕ್ಕೆ ಕಿರಿಕ್ – ದೊಣ್ಣೆಯಿಂದ ಮಹಿಳೆಗೆ ಬಡಿದ ಯುವತಿ
Advertisement
Advertisement
ಶಾಲೆ ಆರಂಭವಾದ ದಿನದಿಂದ ಮೇಘಾಲಯದ ನೂರಾರು ಬುಡಕಟ್ಟು ಮಕ್ಕಳಿಗೆ ವಿದ್ಯಾದಾನ ಮಾಡಿದ ಕೀರ್ತಿ ಈ ವಸತಿ ಶಾಲೆಗೆ ಸಲ್ಲುತ್ತದೆ. ಅರುಣಾಚಲ ಪ್ರದೇಶ, ಮಣಿಪುರದ ಬಡವ, ಅನಾಥ ಮಕ್ಕಳಿಗೂ ಈ ಶಾಲೆ ಭವಿಷ್ಯರೂಪಿಸಿದೆ. ಈ ಶಾಲೆಯಲ್ಲಿ ಸದ್ಯ 50 ಮಕ್ಕಳಿದ್ದು, ಇದರಲ್ಲಿ 12 ಮಕ್ಕಳು ಮೇಘಾಲಯದವರು. ಇಲ್ಲೇ ಹೈಸ್ಕೂಲ್ ಮುಗಿಸಿ ಕಾಲೇಜಿಗೂ ಹೋಗುತ್ತಿದ್ದಾರೆ. ಕೊರೊನಾದಿಂದ ಈ ಮಕ್ಕಳು ಅನಾಥರಾಗದಂತೆ ತಡೆಯಬೇಕಿದೆ ಎಂದು ಶಾಲೆ ಸಂಸ್ಥಾಪಕರು ಮನವಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಆಸ್ತಿಗಾಗಿ ಅಣ್ಣನನ್ನೇ ಕೊಂದ ತಮ್ಮ
ದಶಕಗಳ ಕಾಲ ಕಟ್ಟಿ ಬೆಳೆಸಿದ ಸಂಸ್ಥೆಗೆ ಆರ್ಥಿಕ ಸಂಕಷ್ಟ ಬಂದಿರುವುದನ್ನ ಕಂಡು ಮರುಗಿರುವ ಸಂಸ್ಥಾಪಕ ಮಂಜಪ್ಪನವರು, ದಾನಿಗಳಿಂದ ನೆರವು ಬೇಡಿದ್ದಾರೆ. ನಮ್ಮ ದೇಶದ ಹದಿನಾಲ್ಕು ರಾಜ್ಯದ ಮಕ್ಕಳು ಇಲ್ಲಿ ಓದಿದ್ದಾರೆ. ರಾಜ್ಯದ ನಾನಾ ಮೂಲೆಯಿಂದ ಬಂದ ಮಕ್ಕಳು ಇಲ್ಲಿ ಶಿಕ್ಷಣ ಪಡೆದಿದ್ದಾರೆ. ನಾವು ತುಳಿತಕ್ಕೊಳಗಾದ, ಬಡತನದಲ್ಲಿರುವ, ಪೋಷಕರಿಲ್ಲದ ಮಕ್ಕಳಿಗೆ ಉಚಿತ ವಸತಿ ವಿದ್ಯಾದಾನ ಮಾಡುತ್ತಾ ಬಂದಿದ್ದೇವೆ. ಇಲ್ಲಿ ಓದಿದ ಮಕ್ಕಳು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಇದನ್ನೂ ಓದಿ: ಹಂತ ಹಂತವಾಗಿ ಅನ್‍ಲಾಕ್ – ಯಾವ ಸೇವೆ ಯಾವಾಗ ಆರಂಭ?
Advertisement
Advertisement
ಇಷ್ಟು ವರ್ಷಗಳ ಕಾಲ ಸಂಸ್ಥೆಯನ್ನ ನಡೆಸಿಕೊಂಡು ಬಂದಿದೆ. ಆದರೆ ಕಳೆದ ಎರಡು ವರ್ಷಗಳಲ್ಲಿ ತೀವ್ರ ತೆರನಾದ ಆರ್ಥಿಕ ಸಂಕಷ್ಟ ಎದುರಾಗಿದೆ. ಆದರೂ ಯಾವ ಮಕ್ಕಳನ್ನೂ ಉಪವಾಸ ಕೆಡವಿಲ್ಲ. ಕೋವಿಡ್ ಸಂಕಷ್ಟದಲ್ಲೂ ಮಕ್ಕಳನ್ನ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದೇವೆ. ಈಗ ಅವರನ್ನ ಬಿಟ್ಟರೆ ಜೀವನ ರೂಪಿಸಿಕೊಳ್ಳುವುದು ಕಷ್ಟವಾಗಲಿದೆ. ದಯವಿಟ್ಟು ನೆರವು ನೀಡಿ ಎಂದು ಶಾಲೆಯ ಸಂಸ್ಥಾಪಕ ಮಂಜಪ್ಪ ದಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.