ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪನವರು ಮತ್ತೆ ನಾಲಿಗೆ ಹರಿಬಿಟ್ಟಿದ್ದು, ಕಾಂಗ್ರೆಸ್‍ನವರು ಕುಡುಕ…….ಮಕ್ಕಳು ಎಂದು ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವಿಧಾನಸೌಧದಲ್ಲಿ ಈಶ್ವರಪ್ಪನವರು ಮಾಧ್ಯಮಗಳ ಜೊತೆ ಮಾತನಾಡುವಾಗ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡುವ ಭರದಲ್ಲಿ ಅಶ್ಲೀಲ ಪದ ಬಳಸಿದ್ದಾರೆ. ಕಾಂಗ್ರೆಸ್‍ನವರು ಕುಡುಕ ….. ಮಕ್ಕಳು’ ಎಂದು ಹೇಳಿದ್ದಾರೆ. ಈಶ್ವರಪ್ಪನವರು ಹೆಸರು ಬದಲಾಯಿಸಿಕೊಳ್ಳಲಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕರಗೆ ತಿರುಗೇಟು ನೀಡುವ ಭರದಲ್ಲಿ ಅಶ್ಲೀಲವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಈಶ್ವರಪ್ಪಗೆ ಮಂಡೆ ಸರಿ ಇಲ್ಲ, ಬಿಜೆಪಿ ಶೀಘ್ರ ಚಿಕಿತ್ಸೆ ಕೊಡಿಸಲಿ: ವಿನಯ್ ಕುಮಾರ್ ಸೊರಕೆ ಸಲಹೆ
ಈ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಈಶ್ವರಪ್ಪನಿಗೆ ಸಂಸ್ಕೃತಿ ಇಲ್ಲ, ಸಂಸ್ಕೃತಿ, ಸಂಸ್ಕಾರ ಇಲ್ಲದವರು ಮಾತ್ರ ಹೀಗೆ ಮಾತನಾಡುತ್ತಾರೆ. ಅವರು ಬಂದಿರುವ ದಾರಿಯೇ ಅಂಥದ್ದು, ಅವರಿಂದ ಒಳ್ಳೆದಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಸಾರ್ವಜನಿಕ ಜೀವನದಲ್ಲಿರುವವರಿಗೆ ಟೀಕೆ, ಟಿಪ್ಪಣಿ ಇರುತ್ತವೆ. ಅಧಿಕಾರದಲ್ಲಿರುವವರು ಸಹಿಸಿಕೊಳ್ಳಬೇಕು. ಸಂಸ್ಕೃತಿ ಇಲ್ಲದವರು ಈ ತೀತಿ ಮಾತನಾಡುತ್ತಾರೆ. ನಾನು ಸರ್ಕಾರದಲ್ಲಿದ್ದೇನೆ, ಮಂತ್ರಿಯಾಗಿದ್ದೇನೆ ಎಂಬ ಜವಾಬ್ದಾರಿ ಈಶ್ವರಪ್ಪನವರಿಗೆ ಇಲ್ಲ, ಬೇಜವಾಬ್ದಾರಿ, ಸಂಸ್ಕೃತಿ ಇಲ್ಲದಿರುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಈಶ್ವರಪ್ಪ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ: ಧ್ರುವನಾರಾಯಣ
ಅಶ್ಲೀಲ ಪದ ಬಳಸಿದ ಮಂತ್ರಿ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಈಶ್ವರಪ್ಪ ಒಬ್ಬ ಅನಾಗರಿಕ, ಮೆದುಳಿನ ಸಮತೋಲನ ತಪ್ಪಿದೆ. ಅವರಿಗೆ ಮೆದುಳು ಪರೀಕ್ಷೆ ಮಾಡಬೇಕು ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
ಸಚಿವ ಈಶ್ವರಪ್ಪ ಪದೇ ಪದೇ ನಾಲಗೆ ಹರಿಬಿಡುತ್ತಿದ್ದು, ಈ ಹಿಂದೆ ಶಿವಮೊಗ್ಗದಲ್ಲಿ ಬಿಜೆಪಿ ನಗರ ಕಾರ್ಯಕಾರಣಿ ಸಭೆಯಲ್ಲಿ ಒಂದಕ್ಕೆ ಎರಡು ತೆಗೆದುಬಿಡಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಈ ವೇಳೆ ಸಹ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಬಾಯಿಗೆ ಬಂದಂತೆ ಮಾತಾಡಿ ಬಳಿಕ ಮಾಧ್ಯಮಗಳ ವಿರುದ್ಧ ಮಾತಾಡುವುದು ಮಂತ್ರಿ ಈಶ್ವರಪ್ಪ ರೂಢಿಸಿಕೊಂಡಿರುವ ಪದ್ಧತಿ. ಇವತ್ತೂ ಈಶ್ವರಪ್ಪನವರು ಇದನ್ನೇ ಮಾಡಿದ್ದು, ಅಶ್ಲೀಲ ಪದ ಬಳಕೆ ನಂತರ, ಪ್ರತಿಕ್ರಿಯಿಸಿದ್ದು, ನನ್ನ ಮಾತನ್ನು ವಾಪಸ್ ಪಡೆಯುತ್ತೇನೆ. ಮಾಧ್ಯಮದವರು ಇಂತಹದ್ದನ್ನೇ ಹುಡುಕುತ್ತಿರುತ್ತೀರಿ ಎಂದರು.