ಬೀದರ್ : ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ನಾಲ್ವರ ಬಲಿಯೊಂದಿಗೆ ಕೊರೊನಾ ಮಹಾಮಾರಿ ತನ್ನ ಸಾವಿನ ರಣಕೇಕೆ ಹಾಕಿದೆ. ಬೀದರ್ ತಾಲೂಕಿನ 75 ಹಾಗೂ 69 ವರ್ಷದ ವೃದ್ಧರು ಹಾಗೂ ಬಸವಕಲ್ಯಾಣ ಪಟ್ಟಣದ 55 ವರ್ಷದ ವ್ಯಕ್ತಿ ಹಾಗೂ ಔರಾದ್ ತಾಲೂಕಿನ 80 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದಾರೆ.
Advertisement
ಉಸಿರಾಟದ ಸಮಸ್ಯೆ ಹಾಗೂ ಜ್ವರದಿಂದ ಬಳಲುತ್ತಾ ಸಾವನ್ನಪ್ಪಿದ ನಾಲ್ಕು ಜನಕ್ಕೆ ಇಂದು ಕೊರೊನಾ ಪಾಸಿಟಿವ್ ಧೃಡವಾಗಿದೆ. ನಾಲ್ವರ ಬಲಿಯೊಂದಿಗೆ ಇಂದು ಮತ್ತೆ 70 ಜನಕ್ಕೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಭಾಲ್ಕಿ 25, ಹುಮ್ನಾಬಾದ್ 18, ಔರಾದ್ 13, ಬೀದರ್ 11, ಬಸವಕಲ್ಯಾಣದಲ್ಲಿ ಮೂವರಿಗೆ ಕೊರೊನಾ ಸೋಂಕು ಧೃಡವಾಗಿದೆ.
Advertisement
Advertisement
ಪ್ರಾಥಮಿಕ ಹಾಗೂ ಕಂಟೈನ್‍ಮೆಂಟ್ ಏರಿಯಾ ಸಂಪರ್ಕದಿಂದಾಗಿ ಸೋಂಕು ಧೃಡವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,913ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 1,894 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ್ದಾರೆ. ಇನ್ನು 918 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 97 ಜನರನ್ನು ಮಹಾಮಾರಿ ಬಲಿ ಪಡೆದಿದೆ. ಅನ್ಯ ಕಾರಣದಿಂದಾಗಿ 4 ಜನ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.