ಬೀದರ್: ಇಂದು ಜಿಲ್ಲೆಯ 14 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 298ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಲೇ ಇದ್ದು, ಬಸವಕಲ್ಯಾಣ ತಾಲೂಕಿನಲ್ಲೇ ಇಂದು 14 ಪ್ರಕರಣ ಪತ್ತೆಯಾಗಿವೆ. ಬಸವಕಲ್ಯಾಣ ತಾಲೂಕಿನ ಘಾಟಹಿಪ್ಪರಗಾಂವ್ ತಾಂಡಾದಲ್ಲಿ 4, ಬಸವಕಲ್ಯಾಣ ನಗರದ ಕೈಕಾಡಿಗಲ್ಲಿ 1, ಹೊಸಪೇಟ ಗಲ್ಲಿಯಲ್ಲಿ 02, ಧನ್ನೂರವಾಡಿಯಲ್ಲಿ 2, ಕಿಟ್ಟಾದಲ್ಲಿ 4 ಹಾಗೂ ರಾಜೇಶ್ವರ ಗ್ರಾಮದಲ್ಲಿ ಒಂದು ಪ್ರಕರಣ ದೃಢವಾಗಿದೆ.
ಸದ್ಯ ಪ್ರಾಥಮಿಕ ಹಾಗೂ ಎರಡನೇ ಹಂತದ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಇಂದು 14 ಜನ ವಲಸೆ ಕಾರ್ಮಿಕರಿಗೆ ಕೊರೊನಾ ಸೋಂಕು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 298ಕ್ಕೆ ಏರಿಕೆಯಾಗಿದೆ. 181 ಜನ ಮಹಾಮಾರಿಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನೂ 111 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾಮಾರಿಗೆ ಜಿಲ್ಲೆಯಲ್ಲಿ 6 ಜನ ಬಲಿಯಾಗಿದ್ದಾರೆ. ಮುಂಬೈ ಕಂಟಕ ಜಿಲ್ಲೆಯನ್ನು ಬಿಟ್ಟು ಬಿಡದೆ ಕಾಡುತ್ತಿದೆ.