ಬೀದರ್: ದಿನೇ ದಿನೇ ಗಡಿ ಜಿಲ್ಲೆ ಬೀದರ್‍ನಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಜ್ವರದಿಂದ ಬಳಲುತ್ತಿದ್ದ 26 ವರ್ಷದ ಯುವಕನನ್ನು ಕೊರೊನಾ ಮಾಹಾಮಾರಿ ಇಂದು ಬಲಿ ತೆಗೆದುಕೊಂಡಿದೆ.
ಜೂನ್ 10 ಅನಾರೋಗ್ಯ ಕಾರಣ ಬ್ರೀಮ್ಸ್ ಗೆ ದಾಖಲಾಗಿದ್ದ ಯುವಕ ಜೂನ್ 15 ರಂದು ಚಿಕಿತ್ಸೆ ಫಲಕಾರಿಯಾಗದೆ ಬ್ರೀಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿದ ಬಳಿಕ ಗಂಟಲು ದ್ರವ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಅದರ ವರದಿ ಇಂದು ಬಂದಿದ್ದು ಯುವಕನಿಗೆ ಕೊರೊನಾ ಪಾಸಿಟಿವ್ ಸೋಂಕು ಇರುವುದು ಧೃಡವಾಗಿದೆ.
ಇಂದು ಕೂಡ ಗಡಿ ಜಿಲ್ಲೆ ಬೀದರ್ ನಲ್ಲಿ 12 ಮಂದಿಯಲ್ಲಿ ಕೊರೊನಾ ಧೃಡವಾಗಿದೆ. ಬಸವಕಲ್ಯಾಣ, ಔರಾದ್, ಬೀದರ್ ತಾಲೂಕಿನ ಒಂದು ವರ್ಷದ ಮಗು ಸೇರಿದಂತೆ 11 ಜನಕ್ಕೆ ಸೋಂಕು ಧೃಡವಾಗಿದೆ. ಒಟ್ಟು 12 ಪಾಸಿಟಿವ್ ಕೇಸ್ ನಲ್ಲಿ ಮುಂಬೈ ಕಂಟಕದಿಂದ 11 ಜನರಿಗೆ ಸೋಂಕು ಧೃಡವಾಗಿದ್ದು ಈ ಮೂಲಕ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 395ಕ್ಕೆ ಏರಿಕೆಯಾಗಿದೆ.
ಅದರಲ್ಲಿ 239 ಜನ ಗುಣಮುಖರಾಗಿ ಬಿಡುಗಡೆಯಾದ್ರೆ, 148 ಜನರಿಗೆ ಮಹಾಮಾರಿ ಇನ್ನೂ ಜೀವಂತವಾಗಿದೆ. ಇಂದು ಮೊತ್ತೊಂದು ಬಲಿ ಪಡೆಯುವ ಮೂಲಕ ಮಹಾಮಾರಿ 8 ಜನರನ್ನು ಬಲಿ ಪಡೆದಂತಾಗಿದೆ.