ಬೀದರ್: ಜಿಲ್ಲೆಯಲ್ಲಿ ಮಹಾಮಾರಿಯ ಅಟ್ಟಹಾಸಕ್ಕೆ ಕೊನೆಯೇ ಇಲ್ಲದಂತಾಗಿದ್ದು, ಇಂದು ಕೂಡ ಇಬ್ಬರು ವೃದ್ಧರನ್ನು ಬಲಿ ಪಡೆಯುವ ಮೂಲಕ ಮತ್ತೆ ಆರ್ಭಟಿಸಿದೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬೀದರ್‍ನ ಓಲ್ಡ್ ಸಿಟಿಯ 66 ಹಾಗೂ 65 ವರ್ಷದ ವೃದ್ಧರು ಮಹಾಮಾರಿಗೆ ಬಲಿಯಾಗಿದ್ದಾರೆ. ಜೊತೆಗೆ 53 ಜನಕ್ಕೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಬೀದರ್‍ನಲ್ಲಿ 33, ಬಾಲ್ಕಿಯಲ್ಲಿ 8, ಔರಾದ್‍ನಲ್ಲಿ 6, ಹುಮ್ನಬಾದ್‍ನಲ್ಲಿ 5, ಬಸವಕಲ್ಯಾಣದಲ್ಲಿ 1 ಸೇರಿದಂತೆ 54 ಜನಕ್ಕೆ ಪಾಸಿಟಿವ್ ಧೃಡವಾಗಿದೆ. ಜಿಲ್ಲೆಯಲ್ಲಿ ಸಾವು ಹಾಗೂ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನ ಆತಂಕಗೊಂಡಿದ್ದಾರೆ.
ಕಂಟೈನ್ಮೆಂಟ್ ಝೋನ್ ಹಾಗೂ ಪ್ರಾಥಮಿಕ ಸಂಪರ್ಕದಿಂದಾಗಿ ಸೋಂಕು ಧೃಡವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1191ಕ್ಕೆ ಏರಿಕೆಯಾದೆ. ಇದರಲ್ಲಿ 670 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 466 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 55ಕ್ಕೆ ಏರಿಯಾಗಿದೆ.