ಬೀದರ್: ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅಪರೂಪದ ಪ್ರಾಣಿ ಬೀದರ್ ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ಬೀದರ್ ನಲ್ಲಿ ಅಪರೂಪದ ನೀಲ್‍ಗಾಯ್(ನೀಲಿ ಜಿಂಕೆ) ಪ್ರತ್ಯಕ್ಷವಾಗಿದೆ.
Advertisement
ಈ ಅಪರೂಪದ ಪ್ರಾಣಿ ಪ್ರತ್ಯಕ್ಷದಿಂದಾಗಿ ಜಿಲ್ಲೆಯ ಜನರು ಅಚ್ಚರಿಪಟ್ಟಿದ್ದಾರೆ. ನೀಲ್‍ಗಾಯ್ ಪ್ರಾಣಿ ಮಹಾರಾಷ್ಟ್ರ, ಬಿಹಾರ ಸೇರಿದಂತೆ ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಂದಿ ಬಿಜ್ಜಲಗಾಂವ್ ಗ್ರಾಮದ ಬಳಿ ಅಪರೂಪದ ನೀಲ್‍ಗಾಯ್ ಕಾಣಿಸಿಕೊಂಡಿದೆ.
Advertisement
Advertisement
ಗಡಿ ಭಾಗದಲ್ಲಿ ಹೆಚ್ಚಾಗಿ ಅರಣ್ಯ ಪ್ರದೇಶವಿರುವ ಕಾರಣ ಈ ಕಡೆ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸಿಬ್ಬಂದಿ ಹೊದಾಗ ಈ ಅಪರೂಪದ ಪ್ರಾಣಿ ಅವರ ಕಣ್ಣಿಗೆ ಬಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ನೀಲ್‍ಗಾಯ್ ಹೊಲ-ಗದ್ದೆಗಳಿಗೆ ಬಾರಿ ಪ್ರಮಾಣದಲ್ಲಿ ಹಾನಿ ಉಂಟು ಮಾಡುತ್ತದೆ ಎಂದು ಅರಣ್ಯ ಅಧಿಕಾರ ಹೇಳುತ್ತಿದ್ದು, ಇದು ರೈತರ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಅಕ್ಷತಾ ಪಾಂಡವಪುರಗೆ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಪ್ರಶಸ್ತಿ