ಬೀದರ್: ಗಡಿ ಜಿಲ್ಲೆ ಬೀದರಿನಲ್ಲಿ ಕೊರೊನಾ ಮರಣ ಕೇಕೆ ಮುಂದುವರಿದಿದೆ. ಬೀದರ್‍ನಲ್ಲಿ ಇಂದು 5 ಜನರ ಬಲಿಯೊಂದಿಗೆ ಮತ್ತೆ 51 ಜನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದೆ.
ಬೀದರಿನಲ್ಲಿ 4 ಹಾಗೂ ಬಸವಕಲ್ಯಾಣದಲ್ಲಿ ಒಬ್ಬರನ್ನು ಕೊರೊನಾಗೆ ಇಂದು ಬಲಿಯಾಗಿದ್ದಾರೆ. ಬೀದರ್, ಬಸವಕಲ್ಯಾಣ, ಭಾಲ್ಕಿ, ಔರಾದ್‍ನಲ್ಲಿ ಸೇರಿ ಒಟ್ಟು 51 ಜನಕ್ಕೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಅಸ್ತಮಾ, ಉಸಿರಾಟ, ಜ್ವರ, ಹೃದಯ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಐವರು ಇಂದು ಸಾವನ್ನಪ್ಪಿದ್ದಾರೆ.
ಇಂದು 51 ಜನಕ್ಕೆ ಪಾಸಿಟಿವ್ ಬಂದಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 850ಕ್ಕೆ ಏರಿಕೆಯಾಗಿದೆ. ಇದರಲ್ಲಿ 561 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾದ್ದಾರೆ. 240 ಜನಕ್ಕೆ ಸೋಂಕು ಸಕ್ರಿಯವಾಗಿದ್ದು ಜಿಲ್ಲೆಯಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ಈ ಚೀನಾ ಮಹಾಮಾರಿ ದಿನೇ ದಿನೇ ಬಲಿಯನ್ನು ಪಡೆಯುತ್ತಿರುವ ವೇಗ ನೋಡಿ ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ.