ವಾಷಿಂಗ್ಟನ್: ಬೀಚ್‍ನಲ್ಲಿ 41 ಕೆ.ಜಿ ತೂಕದ ಲೋಹದ ಚೆಂಡು ಬಹಮಾಸ್ ಕಡಲ ತೀರದಲ್ಲಿ ಪತ್ತೆಯಾಗಿದೆ.
ಬ್ರಿಟನ್ ಮೂಲದ ಮಹಿಳೆ ಮನೋನ್ ಕ್ಲಾರ್ಕ್ ಸಮುದ್ರ ದಡದಲ್ಲಿ ಬಿದ್ದಿದ್ದ ಲೋಹದ ಚೆಂಡನ್ನು ನೋಡಿ ಮರಳಿನಿಂದ ಹೊರಗೆ ತೆಗೆಯುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ 41 ಕೆ.ಜಿ ತೂಕ ಇರುವುದರಿಂದ ಒಬ್ಬರ ಕೈಯಲ್ಲಿ ತೆಗೆಯಲು ಸಾಧ್ಯವಾಗಿಲ್ಲ ಎಂದು ಒಂದು ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
Advertisement
Part of Russian spacecraft found on beach in Bahamas.https://t.co/CsYm97euZI pic.twitter.com/A97Sk5AXTX
— Sciency Thoughts (@ThoughtsSciency) February 27, 2021
Advertisement
ಚೆಂಡಿನ ಮೇಲೆ ರಷ್ಯನ್ ಭಾಷೆಯಲ್ಲಿ ಬರೆದಿರುವ ಬರಹವಿದೆ. ಈ ಚೆಂಡು ಬರೋಬ್ಬರಿ 41 ಕೆ.ಜಿ ತೂಕವನ್ನು ಹೊಂದಿದೆ. ಈ ಲೋಹದ ಚೆಂಡು ಇಲ್ಲಿ ಹೇಗೆ ಬಂತು ಎಂಬ ಕುರಿತಾಗಿ ಯಾವುದೇ ಮಾಹಿತಿ ತಿಳಿದುಬಂದಿಲ್ಲ.
Advertisement
Advertisement
ಇದು ಯಾವುದೋ ರಾಕೆಟ್‍ನ ಹೈಡ್ರಾಜೈನ್ ಪ್ರೊಪೆಲ್ಲಂಟ್ ಟ್ಯಾಂಕ್‍ನದ್ದಾಗಿರಬಹುದು ಎಂದು ಶೇ.99ರಷ್ಟು ಗ್ಯಾರಂಟಿ ಇದೆ ಎಂದು ಗಗನಯಾತ್ರಿಯೊಬ್ಬರು ಹೇಳಿದ್ದಾರೆ. 41 ಕೆ.ಜಿ ತೂಕದ ಲೋಹದ ಚೆಂಡಿನ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.