– ಮನೋರಂಜನ್ ರವಿಚಂದ್ರನ್ ಅಭಿನಯದ ಮುಗಿಲ್ ಪೇಟೆ
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ ಮುಗಿಲ್ ಪೇಟೆ ಸಿನಿಮಾ ಸದ್ದು ಮಾಡುತ್ತಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ. ಇದೇ ವೇಳೆ ಮನೋರಂಜನ್‍ಗೆ ಜೋಡಿಯಾಗಿ ಹೊಸ ನಟಿ ಕಯಾದು ಲೋಹರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಅವರಿಗೆ ಇದು ಮೊದಲ ಸಿನಿಮಾ ಆಗಿದೆ.
View this post on Instagram
ರವಿಚಂದ್ರನ್ ರೀತಿಯಲ್ಲೇ ಮನೋರಂಜನ್ ಸಹ ಕ್ರಿಯೇಟಿವಿಟಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದೀಗ ಮುಗಿಲ್ ಪೇಟೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಆದರೆ ಈ ಸಿನಿಮಾದ ನಾಯಕಿಯ ಕುರಿತು ಇದೀಗ ಚರ್ಚೆ ಶುರುವಾಗಿದ್ದು, ಇದಕ್ಕೆ ಕಾರಣ ಕಯಾಲು ಹಾಕಿರುವ ಹಾಟ್ ಫೋಟೋಗಳು. ಹೌದು ಬೀಚ್‍ನಲ್ಲಿ ಎಂಜಾಯ್ ಮಾಡುತ್ತಿರುವ ಚಿತ್ರಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನು ಕಂಡ ಪಡ್ಡೆ ಹುಡುಗರು ನಿಬ್ಬೆರಗಾಗಿದ್ದಾರೆ.
View this post on Instagram
ಪುಣೆ ಮೂಲದ ಕಯಾದು, ಇತ್ತೀಚೆಗೆ ಚೀಚ್‍ಗೆ ತೆರಳಿದ ಫೋಟೋಗಳನ್ನು ಹಂಚಿಕೊಂಡಿದ್ದು, ಬಿಕಿನಿ ತೊಟ್ಟು ಸೂರ್ಯನ ಕಿರಣಗಳಿಗೆ ಮೈವೊಡ್ಡಿದ್ದಾರೆ. ಈ ಫೋಟೋಗಳನ್ನು ಕಂಡ ಪಡ್ಡೆ ಹುಡುಗರು, ಪುಳಕಿತರಾಗಿದ್ದಾರೆ, ಕಣ್ಣರಳಸಿ ನೋಡುತ್ತಿದ್ದಾರೆ. ಮಾಡೆಲ್ ಆಗಿರುವ ಕಯಾದು ಅವರಿಗೆ ಮುಗಿಲ್ ಪೇಟೆ ಚೊಚ್ಚಲ ಸಿನಿಮಾ ಆಗಿದೆ. ಹೀಗಾಗಿ ಸಂಪೂರ್ಣವಾಗಿ ಸಿನಿಮಾ ತೊಡಗಿಸಿಕೊಂಡಿದ್ದಾರೆ.
ಮುಗಿಲ್ ಪೇಟೆ ಸಿನಿಮಾ ಚಿತ್ರೀಕಣ ಅಂತಿಮ ಹಂತ ತಲುಪಿದ್ದು, ಕೊನೇ ಹಂತದ ಕೆಲಸಗಳಲ್ಲಿ ತೊಡಗಿದೆ. ಇನ್ನೇನು ಬಿಡುಗಡೆ ಸಿದ್ಧವಾಗುತ್ತಿದೆ. ಇದೇ ಸಂದರ್ಭದಲ್ಲಿ ನಟಿ ಕಯಾದು ಅವರು ಸಖತ್ ಹಾಟ್ ಫೊಟೋಗಳನ್ನು ಹಾಕಿದ್ದಾರೆ.