ಧಾರವಾಡ: ಸಂಬಂಧಿಕರ ಮದುವೆಗೆಂದು ಹೋದವರ ಮನೆ ಬೀಗ ಮುರಿದು ಕಳ್ಳತನ ಮಾಡಿದ ಘಟನೆ ಧಾರವಾಡ ನಗರದ ಪತ್ರೇಶ್ವರನಗರದಲ್ಲಿ ನಡೆದಿದೆ.
ಧಾರವಾಡ ನಗರದ ಪತ್ರೇಶ್ವರನಗರದ ಗೀತಾ ನಾಯ್ಕರ್ ಎಂಬುವವರ ಮನೆಯಲ್ಲಿ ಕಳೆದ ರಾತ್ರಿ ಕಳ್ಳತನ ನಡೆದಿದೆ. ಗೀತಾ ನಾಯ್ಕರ್ ಕಳೆದ ರಾತ್ರಿ ಧಾರವಾಡದ ನಗರೇಶ್ವರ ದೇವಸ್ಥಾನಕ್ಕೆ ಮದುವೆ ಸಮಾರಂಭದ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಬೆಳಗಿನ ಜಾವ 4 ಗಂಟೆಗೆ ಮನೆಗೆ ಬಂದಾಗ, ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ವೃತ್ತಿ ತೊರೆದು ಸಾವಯವ ತರಕಾರಿ ಬೆಳೆಯಲು ನಿಂತರು
ರಾತ್ರಿ ಗೀತಾ ಅವರ ಮನೆಯ ಅಕ್ಕ ಪಕ್ಕದ ಮನೆಗಳ ಬಾಗಿಲು ಲಾಕ್ ಹಾಕಿದ ಕಳ್ಳರು, ನಂತರ ಗೀತಾ ಅವರ ಮನೆಗೆ ನುಗ್ಗಿ ಮನೆಯಲ್ಲಿದ್ದ 13 ಲಕ್ಷ ಮೌಲ್ಯದ 300 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ಹಾಗೂ 1.50 ಲಕ್ಷ ನಗದು ಕದ್ದು ಪರಾರಿಯಾಗಿದ್ದಾರೆ. ಉಪನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.