ಬೆಂಗಳೂರು: ಮೆಟ್ರೋ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಅಟ್ಟಹಾಸ ಸಿಎಂ ಬಿಎಸ್ ಯಡಿಯೂರಪ್ಪ ಅವರ ಚಿಂತೆಗೆ ಕಾರಣವಾಗಿದ್ದು, ಸೋಂಕಿನ ನಿಯಂತ್ರಣಕ್ಕೆ ಬೆಂಗಳೂರಿನ ಅಷ್ಟ ದಿಕ್ಪಾಲಕರಿಗೆ ಸಿಎಂ ಡೆಡ್‍ಲೈನ್ ಕೊಟ್ಟು ಟಫ್ ಟಾಸ್ಕ್ ನೀಡಿದ್ದಾರೆ.
ರಾಜ್ಯದಲ್ಲಿ ಜೂನ್ ತಿಂಗಳಿಗೆ ಹೋಲಿಸಿದರೆ ಜುಲೈ ತಿಂಗಳಲ್ಲಿ ಕೊರೊನಾ ಸೋಂಕು ಅಬ್ಬರಿಸಿದೆ. ಜೂನ್‍ಗೆ ಹೋಲಿಸಿದರೆ ಜುಲೈ ತಿಂಗಳಲ್ಲಿ ಒಂದರಲ್ಲೇ 1,08,873 ಸೋಂಕು ಮಂದಿಗೆ ಸೋಂಕು ಹರಡಿದೆ. ಅಲ್ಲದೇ ಸೋಂಕಿನ ಜೊತೆಗೆ ಸಾವು ಕೂಡ ಏರಿಕೆಯಾಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ರೌದ್ರ ನರ್ತನ ಹೆಚ್ಚಾಗಿದ್ದು, ಸದ್ಯ ಕೊರೊನಾ ವೇಗಕ್ಕೆ ಬ್ರೇಕ್ ಹಾಕಲು ಸರ್ಕಾರ ಚಿಂತನೆ ನಡೆಸಿದೆ.
ಆಗಸ್ಟ್ ತಿಂಗಳಿನಲ್ಲೇ ಕೊರೊನಾ ನಿಯಂತ್ರಣ ಮಾಡಲೇ ಬೇಕು, ಮಾಡು ಇಲ್ಲವೇ ಮಾಡಿ ಎಂಬ ಹಂತಕ್ಕೆ ಸೋಂಕು ಹೆಚ್ಚಾಗಿದೆ. ಆದ್ದರಿಂದ ಆಗಸ್ಟ್ ವಾರ್‍ಗೆ ಎಲ್ಲ ಉಸ್ತುವಾರಿ ಸಚಿವರು ಸಿದ್ಧರಾಗಿ. ಲಾಕ್‍ಡೌನ್ ಮಾರ್ಗ ಬಿಟ್ಟು ಕೊರೊನಾ ನಿಯಂತ್ರಣಕ್ಕೆ ಬೇಕಾದ ಯೋಜನೆ ಸಿದ್ಧ ಮಾಡಿ. ನಗರದಲ್ಲಿ ಸೆಪ್ಟೆಂಬರ್ ಸ್ಫೋಟಕ್ಕೆ ಅವಕಾಶ ನೀಡಬಾರದಯ. ಆಗಸ್ಟ್ ಮುಗಿಯೋ ವೇಳೆಗೆ ಕೊರೊನಾ ನಿಯಂತ್ರಣ ಆಗಲೇಬೇಕು ಎಂದು ಎಲ್ಲಾ ಉಸ್ತುವಾರಿಗಳಿಗೆ ಸಿಎಂ ಖಡಕ್ ಸಂದೇಶ ರವಾನಿಸಿದ್ದಾರೆ.
ಆಗಸ್ಟ್ ತಿಂಗಳನಲ್ಲಿ ಕೊರೊನಾ ನಿಯಂತ್ರಣ ಆಗದಿದ್ದರೆ ಆ ವಲಯದ ಸಚಿವರೇ ಜವಾಬ್ದಾರಿ ವಹಿಸಿಕೊಳ್ಳಬೇಕು. ಟೆಸ್ಟ್, ಟ್ರೇಸ್, ಟ್ರಿಟ್ಮೆಂಟ್ ಮೇಲೆ ಹೆಚ್ಚು ಗಮನ ನೀಡಿ ಟೆಸ್ಟ್ ಪ್ರಮಾಣ ಮತ್ತಷ್ಟು ಹೆಚ್ಚಳ ಮಾಡಬೇಕು. ಸೋಂಕಿತ ಸಂಪರ್ಕ ಬೇಗ ಕಂಡು ಹಿಡಿದು ಐಸೋಲೇಷನ್ ಮಾಡುವುದು, ಸೋಂಕಿತರಿಗೆ ಉತ್ತಮ ಮಟ್ಟದ ಚಿಕಿತ್ಸೆ ನೀಡುವುದು. ಕಂಟೈನ್ಮೆಂಟ್ ಝೋನ್‍ನಲ್ಲಿ ಎಷ್ಟು ಕಠಿಣ ಕ್ರಮ ತೆಗೆದುಕೊಳ್ಳಿ. ಆದರೆ ಆಗಸ್ಟ್ ನಲ್ಲಿ ಕೊರೊನಾ ನಿಯಂತ್ರಣ ಆಗಲೇಬೇಕು ಎಂದು ಸೂಚಿಸಿದ್ದಾರೆ.