ಬಿಹಾರ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ- ಅ.28ರಿಂದ ಮೂರು ಹಂತದಲ್ಲಿ ಮತದಾನ

Public TV
3 Min Read
eclection commissioner arora

– ನವೆಂಬರ್ 10ಕ್ಕೆ ಫಲಿತಾಂಶ, ಗರಿಗೆದರಿದ ರಾಜಕೀಯ ಚಟುವಟಿಕೆ
– ಸೋಂಕಿತರಿಗೂ ಮತದಾನಕ್ಕೆ ಅವಕಾಶ
– ಆನ್‍ಲೈನ್ ಮೂಲಕ ನಾಮಪತ್ರ ಸಲ್ಲಿಕೆ ವ್ಯವಸ್ಥೆ

ನವದೆಹಲಿ: ನವೆಂಬರ್ 29ರಂದು ಅಂತ್ಯವಾಗಲಿರುವ ಬಿಹಾರ ವಿಧಾನಸಭೆಗೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ದಿನಾಂಕ ಪ್ರಕಟಿಸಿದೆ. ಅಕ್ಟೋಬರ್ 28ರಿಂದ ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 10ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

NitishTejashwi

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚುನಾವಣಾ ಆಯೋಗದ ಪ್ರಧಾನ ಆಯುಕ್ತ ಸುನೀಲ್ ಅರೋರಾ ಕೊರೊನಾ ಸಂಕಷ್ಟದ ನಡುವೆ ಎಲ್ಲ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಬಿಹಾರ ವಿಧಾನಸಭಾ ಚುನಾವಣೆ ಮೂರು ಹಂತಗಳಲ್ಲಿ ನಡೆಯಲಿದ್ದು, ಅಕ್ಟೋಬರ್ 28ರಂದು ಮೊದಲ ಹಂತದಲ್ಲಿ 16 ಜಿಲ್ಲೆಯ 71 ಕ್ಷೇತ್ರಗಳಿಗೆ, 31 ಸಾವಿರ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಎರಡನೇ ಹಂತದ ಚುನಾವಣೆ ನವೆಂಬರ್ 3ರಂದು ನಡೆಯಲಿದ್ದು, 17 ಜಿಲ್ಲೆಯ 94 ಕ್ಷೇತ್ರಗಳಿಗೆ 42 ಸಾವಿರ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಮೂರನೇ ಹಂತದ ಚುನಾವಣೆ ನವೆಂಬರ್ 7ರಂದು 15 ಜಿಲ್ಲೆಯ 78 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು 33 ಸಾವಿರ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮೂರು ಹಂತದ ಮತದಾನದ ಬಳಿಕ ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ಕೊರೊನಾ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆಯಾಗಿರುವ ಹಿನ್ನಲೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ. ಕೊರೊನಾದಿಂದ ದೇಶದಲ್ಲಿ ಪರಿಸ್ಥಿತಿ ಸರಿಯಾಗಿಲ್ಲ, ಆದರೆ ಮೊದಲಿಗೆ ಹೋಲಿಸಿದರೆ ಉತ್ತಮವಾಗಿದೆ. ಈ ಹಿಂದೆ 17ಕ್ಕೂ ಹೆಚ್ಚು ದೇಶಗಳು ಚುನಾವಣೆ ಮುಂದೂಡಿದ್ದವು. ಭಾರತದಲ್ಲೂ ಈ ಹಿಂದೆ ಹಲವು ಚುನಾವಣೆಗಳನ್ನು ಮುಂದೂಡಲಾಗಿತ್ತು ಸದ್ಯ ಪ್ರಜಾಪ್ರಭುತ್ವ ವ್ಯವಸ್ಥೆ ಸರಿದೂಗಿಸುವ ನಿಟ್ಟಿನಲ್ಲಿ ಚುನಾವಣೆ ನಡೆಸಲಾಗುತ್ತಿದೆ ಎಂದು ಸುನೀಲ್ ಅರೋರಾ ಹೇಳಿದರು.

ಜನರ ಆರೋಗ್ಯಕ್ಕೂ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು, ಸುರಕ್ಷಿತವಾಗಿ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ 7 ಲಕ್ಷ ಯುನಿಟ್ ಸ್ಯಾಟಿಟೈಸರ್, 46 ಲಕ್ಷ ಮಾಸ್ಕ್, ಗ್ಲೌಸ್, 6 ಲಕ್ಷ ಪಿಪಿಇ ಕಿಟ್, ಫೇಸ್ ಶೀಲ್ಡ್ ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದರು.

election commission 1577343347

ಕೊರೊನಾ ಹಿನ್ನೆಲೆ ಹಲವು ನಿಯಮಗಳನ್ನು ಬದಲಿಸಲಾಗಿದೆ. ನಾಮ ಪತ್ರವನ್ನು ಈ ಬಾರಿ ಆನ್ ನೈಲ್ ಮೂಲಕ ಸಲ್ಲಿಕೆಗೆ ಸೂಚಿಸಿದ್ದು, ಬಳಿಕ ಅದರ ಪ್ರಿಂಟ್ ಚುನಾವಣಾ ಅಧಿಕಾರಿಗಳಿಗೆ ನೀಡಬೇಕು ಠೇವಣಿ ಹಣವನ್ನು ಆನ್ ಲೈನ್ ಮೂಲಕವೇ ಸಂದಾಯ ಮಾಡುವುದು ಕಡ್ಡಾಯವಾಗಿದೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆ ವರೆಗೆ ಮತದಾನ ನಡೆಯಲಿದ್ದು, ಈ ಬಾರಿ ಮತದಾನಕ್ಕೆ ಒಂದು ಗಂಟೆ ಅವಧಿ ಹೆಚ್ಚಿಸಲಾಗಿದೆ. ಕೊನೆಯ ಒಂದು ಗಂಟೆ ಅವಧಿಯಲ್ಲಿ ಕೊರೊನಾ ಸೋಂಕಿತರು ಮತದಾನ ಮಾಡಬಹುದು ಎಂದು ಆಯೋಗ ಹೇಳಿದೆ.

unnamed 1

ಪ್ರಚಾರ ಕಾರ್ಯಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಚುನಾವಣಾ ರ್ಯಾಲಿಗಳಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ, ಮನೆ ಪ್ರಚಾರಕ್ಕೆ ಐದಕ್ಕಿಂತ ಹೆಚ್ಚು ಮಂದಿ ಹೋಗುವಂತಿಲ್ಲ ಎಂದು ಆಯೋಗ ತಿಳಿಸಿದೆ. 80 ವರ್ಷ ಮೇಲ್ಪಟ್ಟ ಹಿರಿಯ ನಾಯಕರು ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಬಹುದಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಕ್ರಿಮಿನಲ್ ಹಿನ್ನಲೆ ಇರುವ ಅಭ್ಯರ್ಥಿಗಳು ಮಾಹಿತಿ ನೀಡಬೇಕು. ದಿನ ಪತ್ರಿಕೆಗಳಲ್ಲಿ ಮೂರು ಬಾರಿ ಜಾಹೀರಾತು ನೀಡಬೇಕು ಮತ್ತು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು ಎಂದು ಆಯೋಗ ಸೂಚಿಸಿದೆ.

Share This Article
Leave a Comment

Leave a Reply

Your email address will not be published. Required fields are marked *