ಪಾಟ್ನಾ: ಬಿಹಾರದಲ್ಲಿ ಜೊತೆಯಾಗಿ ಚುನಾವಣೆ ಎದುರಿಸುತ್ತಿರುವ ಬಿಜೆಪಿ ಮತ್ತು ಜೆಡಿಯು ನಡುವಿನ ಮಾತುಕತೆ ಬಹುತೇಕ ಪೂರ್ಣಗೊಂಡಿದ್ದು 50:50 ಅನುಪಾತದಲ್ಲಿ ಸೀಟ್ ಹಂಚಿಕೆಗೆ ಎರಡು ಪಕ್ಷಗಳು ಒಪ್ಪಿಗೆ ಸೂಚಿಸಿವೆ.
ಒಟ್ಟು 243 ಸ್ಥಾನಗಳ ಪೈಕಿ ಜೆಡಿಯುಗೆ 122, ಬಿಜೆಪಿಗೆ 121 ಸ್ಥಾನ ಹಂಚಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement
ಅಕ್ಟೋಬರ್ 28, ನವೆಂಬರ್ 3 ಮತ್ತು 7ರಂದು ಚುನಾವಣೆ ನಡೆಯಲಿದೆ. ಫಲಿತಾಂಶ ನವೆಂಬರ್ 10ಕ್ಕೆ ಪ್ರಕಟವಾಗಲಿದೆ. ಮೊದಲ ಹಂತದ ಮತದಾನಕ್ಕೆ ಗುರುವಾರದಿಂದ ನಾಮಪತ್ರ ಸಲ್ಲಿಕೆಯಾಗಲಿದೆ. 243ರ ಪೈಕಿ 71 ಕ್ಷೇತ್ರಗಳಿಗೆ ಅ.28 ರಂದು ಚುನಾವಣೆ ನಡೆಯಲಿದೆ.
Advertisement
Advertisement
Advertisement
ಸಿಎಂ ನಿತೀಶ್ ಕುಮಾರ್ ಸತತ 4ನೇ ಬಾರಿ ಜಯಗಳಿಸುವ ವಿಶ್ವಾಸದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಲಾಲೂ ಪ್ರಸಾದ್ ಯಾದವ್ ಮುಖ್ಯ ಪಾತ್ರವಹಿಸಿದ್ದರು. ಆದರೆ ಈ ಬಾರಿ ಲಾಲೂ ಜೈಲಿನಲ್ಲಿದ್ದು ಪುತ್ರ ತೇಜಸ್ವಿ ಯಾದವ್ ಪಕ್ಷದ ಹೊಣೆ ಹೊತ್ತಿದ್ದಾರೆ.
2015ರ ಚುನಾವಣೆಯಲ್ಲಿ ಆರ್‌ಜೆಡಿ 81 ಸ್ಥಾನ ಗೆದ್ದಿದ್ದರೆ, ಜೆಡಿಯು71, ಕಾಂಗ್ರೆಸ್ 27 ಸ್ಥಾನ ಗೆದ್ದುಕೊಂಡಿತ್ತು. ಮಹಾಘಟಬಂಧನ ಸರ್ಕಾರ ಪತನಗೊಂಡ ಬಳಿಕ ನಿತೀಶ್ ಕುಮಾರ್ ಅವರಿಗೆ ಬಿಜೆಪಿ ಬೆಂಬಲ ನೀಡಿತು.