– 2022ರ ಚುನಾವಣೆಗೆ ‘ಸೈಕಲ್’ ಏರಿದ ಅಖಿಲೇಶ್
ಲಕ್ನೋ: ರಾಷ್ಟ್ರೀಯ ಪಕ್ಷಗಳು ಸೇರಿದಂತೆ ದೊಡ್ಡವರ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ. ಪ್ರಾದೇಶಿಕ ಪಕ್ಷವಾಗಿರುವ ಬಿಎಸ್‍ಪಿ ಜೊತೆಗೂ ತಾವು ಹೋಗಲ್ಲ ಎಂಬುದನ್ನ ಅಖಿಲೇಶ್ ಯಾದವ್ ಸ್ಪಷ್ಟಪಡಿಸಿದ್ದಾರೆ.
Advertisement
2022ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ನೇತೃತ್ವದ ಪ್ರಗತಿಶೀಲ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಉತ್ಸಾಹ ತೋರಿಸಿದ್ದಾರೆ. ಚುನಾವಣೆಯಲ್ಲಿ ಜಸ್ವಂತ್ ನಗರದ ವಿಧಾನಸಭಾ ಕ್ಷೇತ್ರಗಳನ್ನ ಬಿಟ್ಟುಕೊಡಲು ಸಿದ್ಧ ಎಂಬುದನ್ನ ಅಖಿಲೇಶ್ ಇಂದಿನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಚುನಾವಣೆ ತಯಾರಿಯನ್ನು ಅಖಿಲೇಶ್ ಆರಂಭಿಸಿದ್ದಾರೆ.
Advertisement
Advertisement
ಅಖಿಲೇಶ್ ಯಾದವ್ 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮತ್ತು 2019ರ ಲೋಕಸಭೆ ಎಲೆಕ್ಷನ್ ನಲ್ಲಿ ಬಿಎಸ್‍ಪಿ ಜೊತೆ ಮೈತ್ರಿ ರಚಿಸಿಕೊಂಡು ಉತ್ತರಪ್ರದೇಶದ ಜನತೆ ಮುಂದೆ ಹೋಗಿತ್ತು. ಆದ್ರೆ ಎರಡೂ ಚುನಾವಣೆಗಳಲ್ಲಿ ಪಕ್ಷ ತನ್ನ ಕಳಪೆ ಪ್ರದರ್ಶನ ತೋರಿಸಿತ್ತು. ಹೀಗಾಗಿ ಚಿಕ್ಕಪ್ಪ ಶಿವಪಾಲ್ ಜೊತೆಯಲ್ಲಿ 2022ರ ಚುನಾವಣೆ ಅಖಾಡಕ್ಕೆ ಇಳಿಯಲು ಅಖಿಲೇಶ್ ಯಾದವ್ ಮುಂದಾಗಿದ್ದಾರೆ. ಆದ್ರೆ ಅಖಿಲೇಶ್ ಪ್ರಸ್ತಾಪಕ್ಕೆ ಶಿವಪಾಲ್ ಯಾದವ್ ಪ್ರತಿಕ್ರಿಯಿಸಿಲ್ಲ.
Advertisement
ಬಿಹಾರ ಎಫೆಕ್ಟ್: ಬಿಹಾರ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳದ ತೇಜಸ್ವಿ ಯಾದವ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆರ್ ಜೆಡಿ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಅಧಿಕಾರದಿಂದ ವಂಚಿತವಾಗಿದೆ. ಬಿಹಾರದ 70 ವಿಧಾನಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ ಕಾಂಗ್ರೆಸ್ 19ರಲ್ಲಿ ಗೆದ್ದಿತ್ತು.