ಬಿಹಾರದಲ್ಲಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ಬಿಜೆಪಿಯಿಂದ ಟಿಕೆಟ್!

Public TV
3 Min Read
bjp flag

ನವದೆಹಲಿ: ಬಿಹಾರ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೊದಲ ಹಂತದ ಚುನಾವಣೆಗೆ ಎಲ್ಲ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪ್ರಚಾರ ಕಾರ್ಯಕ್ಕೆ ಧಮುಕಿವೆ. ಘಟಾನುಘಟಿ ಬಾಹುಬಲಿಗಳು ಚುನಾವಣಾ ರಂಗ ಪ್ರವೇಶಕ್ಕೆ ಸಿದ್ಧರಾಗಿದ್ದು, ಒಂದು ವೇಳೆ ತಮಗೆ ಟಿಕೆಟ್ ಸಿಗದಿದ್ರೆ ಕುಟುಂಬಸ್ಥರಿಗೆ ಟಿಕೆಟ್ ಸಿಗುವಂತೆ ತೆರೆಮರೆಯಲ್ಲಿ ಪ್ರಯತ್ನ ಮಾಡುತ್ತಿರೋದು ಬಿಹಾರ ರಾಜಕೀಯದಲ್ಲಿ ಕಾಣಸಿಗುವ ಇಂದಿನ ದೃಶ್ಯಗಳು.

BJP FLAG

ಶುಕ್ರವಾರ ಎಡಿಆರ್ (ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್) ವರದಿ ಹೊರಬಂದಿದ್ದು, ಬೆಚ್ಚಿಬೀಳುವ ಅಂಶಗಳನ್ನ ಹೊರಹಾಕಿವೆ. ಎಡಿಆರ್ ವರದಿ ಪ್ರಕಾರ 2005ರ ಬಳಿಕ ಅಪರಾಧ ಹಿನ್ನೆಲೆ ಅತಿ ಹೆಚ್ಚು ವ್ಯಕ್ತಿಗಳು ಬಿಜೆಪಿಯಿಂದ ಟಿಕೆಟ್ ಪಡೆದುಕೊಂಡಿದ್ದಾರೆ.

BJP Flage

ಎಡಿಆರ್ ತನ್ನ ವರದಿಯಲ್ಲಿ 2005ರ ಬಿಹಾರ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ 10,875 ಅಭ್ಯರ್ಥಿಗಳ ಮಾಹಿತಿಯನ್ನ ಸಂಗ್ರಹಿಸಿದೆ. ಇದರ ಜೊತೆಗೆ 2005ರಿಂದ ಗೆದ್ದಿರುವ ಸಂಸದ ಮತ್ತು ಶಾಸಕರ ಮಾಹಿತಿಯನ್ನ ಎಡಿಆರ್ ವಿಶ್ಲೇಷಣೆ ಮಾಡಿದೆ. 10,785 ಅಭ್ಯರ್ಥಿಗಳ ಪೈಕಿ 3,230 ಜನರು ತಮ್ಮ ಅಪರಾಧ ಪ್ರಕರಣಗಳಿರೋದನ್ನ ನಾಮಪತ್ರ ಸಲ್ಲಿಕೆ ವೇಳೆ ಘೋಷಣೆ ಮಾಡಿಕೊಂಡಿದ್ದಾರೆ. ಇವರಲ್ಲಿ 2,204 ಅಭ್ಯರ್ಥಿಗಳ ಮೇಲೆ ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿವೆ.

congresss bjp flag

2005ರಿಂದ ಬಿಹಾರದ ಚುನಾವಣೆಗಳಲ್ಲಿ ಗೆಲುವು ಕಂಡಿರುವ ಶೇ.57ರಷ್ಟು ಜನಪ್ರತಿನಿಧಿ(ಸಂಸದ ಮತ್ತು ಶಾಸಕರು)ಗಳ ಮೇಲೆ ಅಪರಾಧ ಪ್ರಕರಣಗಳಿವೆ. ಇದರಲ್ಲಿ ಶೇ.37ರಷ್ಟು ಗಂಭೀರ ಪ್ರಕರಣಗಳಿವೆ. ಈ ಎಲ್ಲ ಮಾಹಿತಿಗಳ ಜೊತೆ ಇವರೆಲ್ಲರ ಸಂಪತ್ತಿಗೆ ಬಗ್ಗೆಯೂ ಎಡಿಆರ್ ವಿಶ್ಲೇಷಣೆ ಮಾಡಿದೆ.

BJP Flag 1

ನಿಷ್ಕಳಂಕ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿ, ಕಳೆದ 15 ವರ್ಷದಲ್ಲಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ಚುನಾವಣೆ ಟಿಕೆಟ್ ನೀಡಿದೆ. 2005ರ ಚುನಾವಣಾ ಅಖಾಡದಲ್ಲಿದ್ದ ಬಿಜೆಪಿಯ 426 ಅಭ್ಯರ್ಥಿಗಳ ಪೈಕಿ 252 ಜನರು ತಮ್ಮ ಮೇಲಿರುವ ಅಪರಾಧ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಅಂದ್ರೆ ಬಿಜೆಪಿಯ ಒಟ್ಟು ಅಭ್ಯರ್ಥಿಗಳ ಪೈಕಿ ಶೇ.59ರಷ್ಟು ಜನರ ಮೇಲೆ ಕಳಂಕದ ಕಪ್ಪು ಚುಕ್ಕೆಯಿದೆ.

JDU RJD

ಎರಡನೇ ಸ್ಥಾನದಲ್ಲಿ ಆರ್ ಜೆಡಿ ಪಕ್ಷವಿದೆ. ಕಳೆದ 15 ವರ್ಷದಲ್ಲಿ ಆರ್ ಜೆಡಿಯ 502 ಅಭ್ಯರ್ಥಿಗಳ ಪೈಕಿ 280 ಜನರು ಅಂದ್ರೆ ಶೇ.52ರಷ್ಟು ಜನರು ಅಪರಾಧ ಹಿನ್ನೆಲೆ ಹೊಂದಿದ್ದಾರೆ. ಅದೇ ರೀತಿ ಜೆಡಿಯು ಪಕ್ಷದಿಂದ 454 ಮಂದಿ ಚುನಾವಣೆ ಎದುರಿಸಿದ್ದು, 234 ಅಭ್ಯರ್ಥಿಗಳ ಮೇಲೆ ಪ್ರಕರಣಗಳು ದಾಖಲಾಗಿವೆ. ನಾಲ್ಕನೇ ಸ್ಥಾನದಲ್ಲಿ ಕಾಂಗ್ರೆಸ್ ಇದ್ದು 394 ಅಭ್ಯರ್ಥಿಗಳ ಪೈಕಿ 170 ಜನರ ಮೇಲೆ ಕೇಸ್ ಗಳಿವೆ. ಇನ್ನುಳಿದಂತೆ ಎಲ್‍ಜೆಪಿಯ 330 ಅಭ್ಯರ್ಥಿಗಳಲ್ಲಿ 155 (ಶೇ.47) ಮಂದಿಗೆ ಅಪರಾಧ ಹಿನ್ನೆಲೆ ಇದೆ. ಎಡಿಆರ್ ಸರ್ವೇ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಎಸ್‍ಪಿ, ಬಿಎಸ್‍ಪಿ ಜನಪ್ರತಿನಿಧಿಗಳ ಮಾಹಿತಿಯನ್ನ ಹೊಂದಿದೆ.

Congress BJP Flag

ಗಂಭೀರ ಪ್ರಕರಣಗಳು: 2005ರಿಂದ ಬಿಹಾರದಲ್ಲಿ ನಡೆದಿರುವ ಚುನಾವಣೆಗೆ ಶೇ.35ರಷ್ಟು ಗಂಭೀರ ಪ್ರಕರಣಳಗಳನ್ನ ಹೊಂದಿರುವಂತಹ ನಾಯಕರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇನ್ನು ಕಾಂಗ್ರೆಸ್ ಶೇ.24, ಆರ್ ಜೆಡಿ ಶೇ.35, ಜೆಡಿಯು ಶೇ.35 ಮತ್ತು ಎಲ್‍ಜೆಪಿ ಶೇ.30ರಷ್ಟು ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ.

CongressFlags1

ಬಿಜೆಪಿಯ ಶೇ.63ರಷ್ಟು ಸಂಸದರು, ಶಾಸಕರ ಮೇಲೆ ಅಪರಾಧ ಪ್ರಕರಣಗಳು: ಹೌದು, 2005ರಿಂದ ಬಿಹಾರದಲ್ಲಿ ನಡೆದ ಚುನಾವಣೆಗಳಲ್ಲಿ ಜಯಶಾಲಿಯಾಗಿರುವ 246 (ಸಂಸದರು ಮತ್ತು ಶಾಸಕರು) ಜನಪ್ರತಿನಿಧಿಗಳ 154 ಚುನಾಯಿತ ನಾಯಕರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. ಇವರಲ್ಲಿ 84 ಮಂದಿ ವಿರುದ್ಧ ಗಂಭೀರ ಪ್ರಕರಣಗಳಿವೆ.

congress flag b

ಕಾಂಗ್ರೆಸ್ ನಿಂದ ಗೆದ್ದ 46 ಜನಪ್ರತಿನಿಧಿಗಳಲ್ಲಿ 25 ಮಂದಿ ಅಪರಾಧ ಪ್ರಕರಣಗಳು ದಾಖಲಾಗಿವೆ. 25ರಲ್ಲಿ 17 ಜನಪ್ರತಿನಿಧಿಗಳ ಹೆಸರು ಗಂಭೀರ ಪ್ರಕರಣಗಳಲ್ಲಿ ಕೇಳಿ ಬಂದಿವೆ. ಆರ್ ಜೆಡಿಯ 158ರಲ್ಲಿ 89(ಗಂಭೀರ 62), ಜೆಡಿಯು 296ರಲ್ಲಿ 149 (ಗಂಭೀರ 101) ಮತ್ತು ಎಲ್‍ಜೆಪಿಯ 27ರಲ್ಲಿ 19 (ಗಂಭೀರ 11) ಚುನಾಯಿತ ಪ್ರತಿನಿಧಿಗಳ ಮೇಲೆ ಅಪರಾಧ ಪ್ರಕರಣಗಳು ದಾಖಲಾಗಿವೆ.

bjp flag

ಕೋಟ್ಯಧಿಪತಿಗಳಿಗೆ ಕಾಂಗ್ರೆಸ್ಸಿನಿಂದ ಟಿಕೆಟ್: 2005ರಿಂದ ಚುನಾವಣೆ ಎದುರಿಸಿರುವ ಸಂಪತ್ತಿನ ಮಾಹಿತಿಯನ್ನ ಎಡಿಆರ್ ವಿಶ್ಲೇಷಣೆ ಮಾಡಿದ್ದು, ಕಾಂಗ್ರೆಸ್ ಅತಿ ಹೆಚ್ಚು ಧನಿಕರಿಗೆ ಟಿಕೆಟ್ ನೀಡಿದೆ. 394 ಅಭ್ಯರ್ಥಿಗಳ ಸರಾಸರಿ ಸಂಪತ್ತು 3.44 ಕೋಟಿ ರೂ. ಇದೆ. ಅದೇ ರೀತಿ ಬಿಜೆಪಿಯ 426 ಅಭ್ಯರ್ಥಿಗಳ ಸರಾಸರಿ ಸಂಪತ್ತು 2.93 ಕೋಟಿ, ಜೆಡಿಯು 3.68 ಕೋಟಿ ರೂ ಮತ್ತು ಆರ್ ಜೆಡಿ 1.70 ಕೋಟಿ ಸಂಪತ್ತು ಹೊಂದಿದೆ.

Share This Article
Leave a Comment

Leave a Reply

Your email address will not be published. Required fields are marked *