ನವದೆಹಲಿ: ಬಿಹಾರದಲ್ಲಿಂದು ಅಂತಿಮ ಮತ್ತು ಮೂರನೇ ಹಂತದ ಮತದಾನ ಮುಗಿದಿದ್ದು ಚುನಾವಣೋತ್ತರ ಸಮೀಕ್ಷೆಯಲ್ಲಿ ಆಡಳಿತರೂಢ ಸರ್ಕಾರದ ವಿರೋಧಿ ಅಲೆ ವ್ಯಕ್ತವಾಗಿದೆ.
ಇಂದು 78 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಶೇ.56ರಷ್ಟು ಮತದಾನ ಆಗಿದೆ. ಪ್ರಧಾನಿ ಮೋದಿ ಚಾರ್ಮ್ ನಡುವೆಯೂ ಈ ಬಾರಿ ಆಡಳಿತ ವಿರೋಧಿ ಅಲೆಗೆ ತತ್ತರಿಸಿರುವ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಭಾರೀ ಹಿನ್ನಡೆ ಅನುಭವಿಸುವ ಸಾಧ್ಯತೆಯಿದೆ.
Advertisement
#TCPoll#BiharElection2020
Seat Projection
BJP – JDU+ 55 ± 11 Seats
RJD – Cong+ 180 ± 11 Seats
Others 8 ± 4 Seats
— Today's Chanakya (@TodaysChanakya) November 7, 2020
Advertisement
10 ಲಕ್ಷ ಉದ್ಯೋಗದ ಭರವಸೆ ನೀಡಿದ್ದ ತೇಜಸ್ವಿ ಯಾದವ್ ಕಡೆಗೆ ಮತದಾರರು ಒಲವು ತೋರಿದಂತೆ ಕಾಣುತ್ತಿದೆ. ಆರ್‌ಜೆಡಿ+ ಕಾಂಗ್ರೆಸ್ ಮಹಾಘಟಬಂಧನ್‍ಗೆ ಸಾಧಿಸಲಿದ್ದು, ತೇಜಸ್ವಿ ಯಾದವ್ ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂದು ಎಕ್ಸಿಟ್ ಪೋಲ್‍ಗಳು ಹೇಳುತ್ತಿವೆ. ಅದರಲ್ಲೂ ಟುಡೇಸ್ ಚಾಣಕ್ಯ ಎನ್‍ಡಿಎ+ 55ಗೆ ಸ್ಥಾನ ಮಹಾಘಟಬಂಧನ್‍ಗೆ 180 ಸ್ಥಾನವನ್ನು ನೀಡಿದೆ.
Advertisement
#TCPoll#BiharElection2020
Vote Projection
BJP – JDU+ 34% ± 3%
RJD – Cong+ 44% ± 3%
Others 22% ± 3%
— Today's Chanakya (@TodaysChanakya) November 7, 2020
Advertisement
ಯಾವ ಸಮೀಕ್ಷೆ ಏನು ಹೇಳಿದೆ?
ಟುಡೇಸ್ ಚಾಣಕ್ಯ – ಎನ್‍ಡಿಎ 55, ಯುಪಿಎ 180, ಇತರೇ 8
ಸಿವೋಟರ್ಸ್ – ಎನ್‍ಡಿಎ 116, ಯುಪಿಎ 120, ಎಲ್‍ಜೆಪಿ 01, ಇತರೇ 06
ಎಬಿಪಿ ನ್ಯೂಸ್ – ಎನ್‍ಡಿಎ 104 – 128, ಯುಪಿಎ 108-131, ಎಲ್‍ಜೆಪಿ 01-03, ಇತರೇ 04-08
Check who is going to form the new government in Bihar as per #IndiaTodayAxisPoll
Latest #ExitPoll updates: https://t.co/lU6Zh1IqPW#BiharExitPoll #BiharElection2020 #VoteOnBihar #BiharPolls pic.twitter.com/yXgramFZV0
— IndiaToday (@IndiaToday) November 7, 2020
ಜನ್‍ಕಿಬಾತ್ – ಎನ್‍ಡಿಎ 91 – 117, ಯುಪಿಎ 118-138, ಎಲ್‍ಜೆಪಿ 05-08, ಇತರೇ 03-06
ಪೀಪಲ್ಸ್ ಪಲ್ಸ್ – ಎನ್‍ಡಿಎ 09 -110, ಯುಪಿಎ 100-115, ಎಲ್‍ಜೆಪಿ 03-05, ಇತರೇ 08-18
ಪೋಲ್ ಆಫ್ ಪೋಲ್ – ಎನ್‍ಡಿಎ 112, ಯುಪಿಎ 122, ಎಲ್‍ಜೆಪಿ 04, ಇತರೇ 05
Check who is the most popular choice for the post of CM in Bihar in #IndiaTodayAxisPoll
Read more: https://t.co/lU6Zh1IqPW#BiharExitPoll #BiharElection2020 #VoteOnBihar #BiharPolls pic.twitter.com/oq0ZPLBdwe
— IndiaToday (@IndiaToday) November 7, 2020
ಒಟ್ಟು 243 ಸ್ಥಾನಗಳಿದ್ದು ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದೆ. 2015ರ ಚುನಾವಣೆಯ ಸಂದರ್ಭದಲ್ಲಿ ಜೆಡಿಯು, ಆರ್‌ಜೆಡಿ , ಕಾಂಗ್ರೆಸ್ ಸೇರಿಕೊಂಡು ಮಹಾಘಟಬಂಧನ್ ಮಾಡಿಕೊಂಡಿತ್ತು. ಪರಿಣಾಮ 243 ಕ್ಷೇತ್ರಗಳ ಪೈಕಿ ಆರ್‌ಜೆಡಿ 80, ಜೆಡಿಯು 71, ಬಿಜೆಪಿ 53, ಕಾಂಗ್ರೆಸ್ 27, ಇತರರು 12 ಸ್ಥಾನಗಳಲ್ಲಿ ಜಯಗಳಿಸಿದ್ದರು. ಚುನಾವಣೆಯಲ್ಲಿ ಮಹಾಘಟಬಂಧನ್ ಯಶಸ್ವಿಯಾದ ಕಾರಣ ಎರಡು ಪಕ್ಷಗಳ ಬೆಂಬಲ ಪಡೆದು ನಿತೀಶ್ ಕುಮಾರ್ ಸಿಎಂ ಪಟ್ಟವನ್ನು ಏರಿದ್ದರು. ಆದರೆ ಮಹಾಮೈತ್ರಿಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತಗಿದ್ದರಿಂದ 2017ರಲ್ಲಿ ಜೆಡಿಯು, ಬಿಜೆಪಿ ಮೈತ್ರಿ ಅಧಿಕಾರಕ್ಕೆ ಬಂದಿತ್ತು.
#Nov10WithTimesNow | POLL OF POLLS by different agencies for 2020 Bihar Assembly polls. pic.twitter.com/03PSQ2KfYT
— TIMES NOW (@TimesNow) November 7, 2020