ಬೆಂಗಳೂರು: ಕೃಷಿ ಸಚಿವ ಬಿಸಿ ಪಾಟೀಲ್ ಮನೆಯಲ್ಲೇ ಲಸಿಕೆ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ.
ಮನೆಯಲ್ಲೇ ಲಸಿಕೆ ಹಾಕಿಸಲು ಕಾರಣರಾದ ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ಕೊಟ್ಟಿದ್ದೇವೆ. ಇನ್ಮುಂದೆ ಇಂಥ ಘಟನೆ ಮರುಕಳಿಸಿದಂತೆ ನೋಡಿಕೊಳ್ಳುತ್ತೇವೆ. ಪ್ರಕರಣ ನಮ್ಮ ಅರಿವಿಗೆ ಬಾರದೇ ನಡೆದಿದೆ ಎಂದು ಆರೋಗ್ಯ ಸಚಿವ ಸುಧಾಕರ್ ವರದಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಬಿಸಿ ಪಾಟೀಲ್ ಪ್ರಕರಣದ ಬಗ್ಗೆ ವರದಿಯನ್ನು ನೀಡುವಂತೆ ರಾಜ್ಯ ಆರೋಗ್ಯ ಇಲಾಖೆಗೆ ಸೂಚಿಸಿದ್ದರು.
This is not allowed in the protocol. We have asked for a report from the State government: Rajesh Bhushan, Health Secretary, on being asked about a Karnataka MLA receiving vaccine shot at his residence today pic.twitter.com/zUgkwnKGUb
— ANI (@ANI) March 2, 2021
ಬಿಸಿ ಪಾಟೀಲ್ ಮತ್ತು ಅವರ ಪತ್ನಿ ವನಜಾ ಹಿರೆಕೆರೂರಿನ ತಮ್ಮ ಮನೆಯಲ್ಲಿಯೇ ವೈದ್ಯರನ್ನು ಕರೆಸಿ ಲಸಿಕೆ ಪಡೆದಿದ್ದರು. ಮನೆಯಲ್ಲೇ ಲಸಿಕೆ ಹಾಕಿಸಿಕೊಳ್ಳಲು ಕೊರೊನಾ ಲಸಿಕೆ ಮಾರ್ಗಸೂಚಿಯಲ್ಲಿ ಅವಕಾಶವಿಲ್ಲ. ಈ ಕಾರಣಕ್ಕೆ ಬಿಸಿ ಪಾಟೀಲ್ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಕೇಂದ್ರ ಆರೋಗ್ಯ ಇಲಾಖೆ ಕಾರಣ ಕೇಳಿ ವರದಿ ನೀಡುವಂತೆ ಸೂಚಿಸಿತ್ತು.