ಕಾರವಾರ: ರಾಜ್ಯದ ಹಲವೆಡೆ ವರುಣ ಅಬ್ಬರಿಸಿ ಬೊಬ್ಬಿರಿದಿದ್ದು, ಇದರಿಂದಾಗಿ ಹಲವೆಡೆ ಅನುಆಹುತಗಳು ಸಂಭವಿಸಿವೆ. ಅದೇ ರೀತಿ ಉತ್ತರ ಕನ್ನಡದ ಹೊನ್ನಾವರ ಸಮೀಪ ಬಿರುಗಾಳಿ ಸಹಿತ ಭಾರೀ ಮಳೆಗೆ ಆಳ ಸಮುದ್ರದಲ್ಲಿ ಬೋಟ್ ಮುಳುಗಡೆಯಾಗಿದ್ದು, 15 ಮೀನುಗಾರರನ್ನು ರಕ್ಷಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಹೊನ್ನಾವರ, ಶಿರಸಿ, ಸಿದ್ದಾಪುರ ಭಾಗದಲ್ಲಿ ಗಾಳಿ ಸಹಿತ ಅಬ್ಬರದ ಮಳೆ ಸುರಿದಿದ್ದು, ಗಾಳಿ ಅಬ್ಬರಕ್ಕೆ ಆಳ ಸಮುದ್ರದಲ್ಲಿ ಬೋಟ್ ಮುಳುಗಡೆಯಾಗಿ ಅದರಲ್ಲಿದ್ದ ಹದಿನೈದು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಹೊನ್ನಾವರ ಬಂದರಿನಿಂದ 40 ನಾಟಿಕಲ್ ಮೈಲು ದೂರದಲ್ಲಿ ಘಟನೆ ನೆಡೆದಿದ್ದು ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದ ದುರ್ಗಾ ಭೈರವಿ ಎನ್ನುವ ಬೋಟ್ ಮುಳುಗಡೆಯಾಗಿದೆ.
ಆಳ ಸಮುದ್ರದಲ್ಲಿ ಗಾಳಿ ರಭಸ ಹೆಚ್ಚಾಗಿದ್ದರಿಂದ ಮುಳುಗಡೆಯಾಗಿದೆ. ಮುಳುಗುತ್ತಿದ್ದ ಬೋಟ್ ನಲ್ಲಿದ್ದ ಹದಿನೈದು ಮೀನುಗಾರರನ್ನು ಮತ್ತೊಂದು ಮೀನುಗಾರಿಕಾ ಬೋಟ್‍ನವರು ರಕ್ಷಿಸಿದ್ದಾರೆ.