ಬೆಂಗಳೂರು: ಮದ್ಯ ಪ್ರಿಯರಿಗೆ ಅಬಕಾರಿ ಇಲಾಖೆ ಗುಡ್‍ನ್ಯೂಸ್ ಕೊಟ್ಟಿದ್ದು, ಬಿಯರ್ ಮಾರಾಟಕ್ಕಾಗಿ 1 ಗಂಟೆ ಹೆಚ್ಚುವರಿ ಅವಧಿ ವಿಸ್ತರಣೆ ಮಾಡಲಾಗಿದೆ.
6 ತಿಂಗಳಿಗೆ ಬಿಯರ್ ಬಾಟಲ್‍ಗಳ ಎಕ್ಸ್‌ಪೈರಿ ಡೇಟ್ ಮುಗಿಯುವ ಹಿನ್ನೆಲೆ ಮದ್ಯದಂಗಡಿಗಳಲ್ಲಿ ಇರುವ ಬಿಯರ್ ಸ್ಟಾಕ್ ಕ್ಲಿಯರೆನ್ಸ್ ಗಾಗಿ ಅಬಕಾರಿ ಇಲಾಖೆ ಹೊಸ ಆದೇಶ ಹೊರಡಿಸಿದೆ. ಮೇ 17ರವರೆಗೂ ಮಾತ್ರ ಹೆಚ್ಚುವರಿ 1 ಗಂಟೆ ಅನುಮತಿ ನೀಡಲಾಗಿದೆ. ಇದರಿಂದಾಗಿ ಎಂಆರ್‌ಪಿ, ಎಂಎಸ್‍ಐಎಲ್‍ಗಳಿಗೆ ಅಷ್ಟೇ ಅಲ್ಲದೆ ಕ್ಲಬ್, ಲಾಡ್ಜ್, ಬಾರ್‌ಗಳ ಬಿಯರ್ ಸ್ಟಾಕ್ ಕ್ಲಿಯರೆನ್ಸ್ ಅವಕಾಶ ಸಿಕ್ಕಂತಾಗಿದೆ.
Advertisement
Advertisement
ಸಿಎಲ್-4, ಸಿಎಲ್-7, ಸಿಎಲ್-6ಎ, ಸಿಎಲ್-7ಎ, ಸಿಎಲ್-7ಬಿ, ಸಿಎಲ್-9, ಸಿಎಲ್-16, ಸಿಎಲ್-17, ಸಿಎಲ್-18 ಮತ್ತು ವೈನ್‍ಟ್ಯಾವರಿನ್ ಸನ್ನದುಗಳಲ್ಲಿ ಮಾರಾಟವಾಗದೆ ಉಳಿದಿರುವ ಮದ್ಯ ಮತ್ತು ಬಿಯರ್ ಅನ್ನು ಮೇ 17ರವರೆಗೆ ಮಾರಾಟ ಮಾಡಬೇಕಿದೆ. ಈ ಹಿಂದೆ ಬೆಳಗ್ಗೆ 9ರಿಂದ 7 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಈಗ ಒಂದು ಗಂಟೆ ಹೆಚ್ಚುವರಿ ನೀಡಿರುವುದರಿಂದ ರಾತ್ರಿ 8 ಗಂಟೆವರೆಗೆ ಮದ್ಯ ಲಭ್ಯವಾಗಲಿದೆ.
Advertisement
ಅನುಮತಿ ನೀಡಿದರೂ ಅಬಕಾರಿ ಇಲಾಖೆಯು ಕೆಲವು ಷರತ್ತುಗಳನ್ನ ಹಾಕಿದೆ. ಅದರ ಅಡಿಯಲ್ಲೇ ಮದ್ಯ ಮಾರಬೇಕೆಂದು ಖಡಕ್ ಎಚ್ಚರಿಕೆ ನೀಡದೆ. ಆರ್‍ವಿಬಿಗಳನ್ನು ಹೊಂದಿ, ಈಗಾಗಲೇ ದಾಸ್ತಾನಿರುವ ಕೇವಲ ಸೀಲ್ ಮಾಡಿರುವ ಬಾಟಲ್‍ಗಳನ್ನು ಮಾತ್ರ ನಿಗದಿಪಡಿಸಿರುವ ಎಂಆರ್‌ಪಿ ದರದಲ್ಲೇ ಗ್ರಾಹಕರಿಗೆ ಮಾರಾಟ ಮಾಡಬೇಕು. ಕೇವಲ ಬಾಟಲ್ ಬೀರ್ ಸನ್ನದಿನಲ್ಲಿ ಇರುವ ಬೀಯರ್ ದಾಸ್ತಾನನ್ನು ಸಿಎಲ್-7 ಸನ್ನದುಗಳಿಗೆ ಸಾಗಾಟ ಮಾಡಬಹುದಾಗಿದೆ.
Advertisement
ಕೇವಲ ಬಾಟಲ್ ಬೀರ್ ಸನ್ನದಿನಲ್ಲಿ ಇರುವ ರೆಸ್ಟೋರೆಂಟ್‍ಗಳಲ್ಲಿ ಗ್ರಾಹಕರಿಗೆ ಊಟ, ತಿಂಡಿಯನ್ನು ಕೇವಲ ಪಾರ್ಸೆಲ್ ರೂಪದಲ್ಲಿ ಮಾತ್ರ ನೀಡಬಹುದಾಗಿದೆ. ಬೀಯರ್ ಮಾರಾಟಕ್ಕೆ ಯಾವುದೇ ಅನುಮತಿ ಇಲ್ಲ. ಮದ್ಯದ ಅಂಗಡಿಯ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಮಾಸ್ಕ್ ಧರಿಸಬೇಕು.