ಸಿಡ್ನಿ: 2020ರ ಬಿಗ್ ಬ್ಯಾಷ್ ಲೀಗ್‍ನ 23ನೇ ಪಂದ್ಯದಲ್ಲಿ ಬ್ಯಾಟ್ಸ್ ಮ್ಯಾನ್ ಸಿಕ್ಸರ್ ಗೆ ಅಟ್ಟಿದ ಚೆಂಡು ಪ್ರೇಕ್ಷಕನ ಬಿಯರ್ ಗ್ಲಾಸ್ ಸೇರಿದೆ. ಚೆಂಡು ಗ್ಲಾಸ್ ನಲ್ಲಿ ಬೀಳುತ್ತಿದ್ದಂತೆ ಖುಷಿಗೊಂಡ ಪ್ರೇಕ್ಷಕ ಬಾಲ್ ತೆಗೆಯದೇ ಮತ್ತೊಂದು ಗುಟುಕು ಏರಿಸಿದ್ದಾನೆ. ಐಸಿಸಿ ವೀಡಿಯೋ ಶೇರ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಮೆಲ್ವರ್ನ್ ಸ್ಟಾರ್ಸ್ ಮತ್ತು ಹೊಬಾರ್ಟ್ ಹರಿಕೆನ್ಸ್ ತಂಡಗಳ ನಡುವೆ ಮ್ಯಾಚ್ ನಡೆದಿತ್ತು. ಹೋಬಾರ್ಟ್ ತಂಡದ ಬ್ಯಾಟಿಂಗ್ ವೇಳೆ 16ನೇ ಓವರ್ ನಲ್ಲಿ ಡೇವಿಡ್ ಮಲನ್ ಅದ್ಭುತವಾದ ಸಿಕ್ಸ್ ಬಾರಿಸಿದರು. ಈ ಬಾಲ್ ನೇರವಾಗಿ ಗ್ಯಾಲರಿಯಲ್ಲಿ ಕುಳಿತಿದ್ದ ವೀಕ್ಷಕರ ಬಿಯರ್ ಗ್ಲಾಸ್ ನಲ್ಲಿ ಬಿತ್ತು. ಇದಕ್ಕೂ ಮುಂಚೆ ಯುವಕನೋರ್ವ ಈ ಬಾಲ್ ಕ್ಯಾಚ್ ಹಿಡಿಯಲು ಪ್ರಯತ್ನಿಸಿದ್ದ. ಆದ್ರೆ ಆತನ ಕೈಗೆ ತಾಕಿದ ಬಾಲ್ ಬಿಯರ್ ಗ್ಲಾಸ್ ಸೇರಿಕೊಂಡಿತು.
ಇತ್ತ ಫೀಲ್ಡರ್ ಬಾಲ್ ನೀಡುವಂತೆ ಹೇಳಿದಾಗ ಅಭಿಮಾನಿ ಗ್ಲಾಸ್ ನಲ್ಲಿದ್ದ ಬಾಲ್ ತೆಗೆಯದೇ ಒಂದು ಗುಟುಕು ಬಿಯರ್ ಕುಡಿದಿದ್ದಾನೆ. ಬಿಯರ್ ಖಾಲಿಯಾಗ್ತಿದ್ದಂತೆ ಬಾಲ್ ಎಸೆದಿದ್ದಾನೆ. ಬಿಯರ್ ಕುಡಿದಿದನ್ನ ನೋಡಿದ ಗ್ಯಾಲರಿಯಲ್ಲಿದ್ದ ಜನ ಚಪ್ಪಾಳೆ ಹೊಡೆದು ಜೋರಾಗಿ ಕೂಗಿದ್ದಾರೆ.
An early contender for catch of the year ????pic.twitter.com/ILD8Fj3yhO
— ICC (@ICC) January 2, 2021
ಈ ಪಂದ್ಯವನ್ನ ಹೋಬಾರ್ಟ್ ತಂಡ 21 ರನ್ ಗಳ ಅಂತರದಿಂದ ಗೆದ್ದು ಕೊಂಡಿತು. ಮೊದಲು ಬ್ಯಾಟ್ ಮಾಡಿದ್ದ ಹೋಬಾರ್ಟ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್ ಪೇರಿಸಿತ್ತು. ಡೇವಿಡ್ ಮಲಾನ್ 75 ರನ್ ಸೇರಿಸಿ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೋಬಾರ್ಟ್ ನೀಡಿದ ಮೊತ್ತವನ್ನ ಬೆನ್ನತ್ತಿದ ಮೆಲ್ವರ್ನ್ ಸ್ಟಾರ್ಸ್ 20 ಓವರ್ ಗಳಲ್ಲಿ 143 ರನ್ ಗಳಿಸಲು ಮಾತ್ರ ಶಕ್ತವಾಯ್ತು. ಮೆಲ್ಬರ್ನ್ ತಂಡದ ಆಟಗಾರ ಗ್ಲೆನ್ ಮ್ಯಾಕ್ಸವೆಲ್ 37 ಎಸೆತದಲ್ಲಿ 70 ರನ್ ಗಳಿಸಿ ತಂಡದ ಚೇತರಿಕೆಗೆ ಕಾರಣರಾಗಿದ್ದರು. 70 ರನ್ ನಲ್ಲಿ 4 ಫೋರ್ ಮತ್ತು 5 ಸಿಕ್ಸ್ ಸೇರಿವೆ.