ಬೆಂಗಳೂರು: ಕೊರೊನಾ ಸಂಖ್ಯೆ ಹೆಚ್ಚಾದ ಕಾರಣ ಸಿನಿಮಾ ಮಂದಿರಗಳಿಗೆ ಶೇ.50 ರಷ್ಟು ಸೀಟ್ ಭರ್ತಿಗೆ ಅವಕಾಶ ನೀಡಬೇಕೆಂಬ ಬಿಬಿಎಂಪಿ ಸರ್ಕಾರಕ್ಕೆ ನೀಡಿದ ಪ್ರಸ್ತಾವನೆಯ ಕುರಿತಾಗಿ ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
Advertisement
ಬೇರೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳೋಣ, ಮಾಸ್ಕ್, ಸ್ಯಾನಿಟೈಸರ್ನ್ನು ಬಳಸಿ. ದಯವಿಟ್ಟು ಸಿನಿಮಾ ಮಂದಿರವನ್ನು ಶೇ.50ಗೆ ಇಳಿಕೆ ಮಾಡುವುದು ಬೇಡ. ಸಿನಿಮಾವನ್ನು ನಂಬಿ ಸಾವಿರಾರು ಕುಟುಂಬಗಳಿವೆ. ದಯವಿಟ್ಟು ಶೇ.50ಕ್ಕೆ ಇಳಿಕೆ ಮಾಡಬೇಡಿ, ಶೇ.100 ಜನ ಸೇರುವುದಕ್ಕೆ ಅವಕಾಶವನ್ನು ಕೊಡಿ ಎಂದು ಮನವಿ ಮಾಡಿದ್ದಾರೆ.
Advertisement
Advertisement
ಆರೋಗ್ಯ ಮುಖ್ಯ ಆದರೆ ಹಾಗಂತ ಬೇರೆಲ್ಲ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನಸೇರುವುದನ್ನು ಕಡಿಮೆ ಮಾಡಿ. ಸಿನಿಮಾಮಂದಿರಗಳಲ್ಲಿ ಹೆಚ್ಚು ಅಂದ್ರೆ 800 ರಿಂದ 900 ಜನರು ಸೇರುತ್ತಾರೆ. ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳೋಣ ಎಂದಿದ್ದಾರೆ.
Advertisement
ಲಾಕ್ಡೌನ್ ಸಮಯದಲ್ಲಿ ಎಲ್ಲರೂ ಮನೆಯಲ್ಲಿದ್ದಾಗ ಸಿನಿಮಾಗಳೇ ನಮಗೆ ಮನರಂಜನೆ ಕೊಟ್ಟಿದ್ದು, ಸಿನಿಮಾಕ್ಕೆ ಪ್ರೋತ್ಸಾಹ ಮಾಡಿ. ನಮ್ಮ ಆರೋಗ್ಯವನ್ನು ನೋಡಿಕೊಳ್ಳೊಣ. ಆದರೆ ಸಿನಿಮಾ ಮಂದಿರಕ್ಕೆ ಶೇ.100 ಭರ್ತಿಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.
ಖಂಡಿತವಾಗಿ ಸಿನಿಮಾವನ್ನು ಸಿನಿಮಾ ಮಂದಿರಕ್ಕೆ ಕುಟುಂಬ ಸಮೇತರಾಗಿ ಬಂದು ಸಿನಿಮಾವನ್ನು ನೋಡಿ. ಮಾಸ್ಕ್, ಸ್ಯಾನಿಟೈಸರ್ನ್ನು ಬಳಸಿ. ಸೇಫ್ ಆಗಿ ಬಂದು ಸಿನಿಮಾವನ್ನು ನೋಡಿಕೊಂಡು ಹೋಗಿ ಎಂದು ಅಭಿಮಾನಿಗಳಲ್ಲಿ ಪವರ್ ಸ್ಟಾರ್ ಮನವಿ ಮಾಡಿದ್ದಾರೆ.