ಬಿಪಿಎಲ್ ಕಾರ್ಡ್ ಹೊಂದಲು ಇರಬೇಕಾದ ಅರ್ಹತೆ ಏನು? ಯಾರಿಗೆ ಸಿಗಲ್ಲ? – ಇಲ್ಲಿದೆ ಪೂರ್ಣ ಮಾಹಿತಿ

Public TV
2 Min Read
ration cards

ಬೆಂಗಳೂರು: ಮನೆಯಲ್ಲಿ ಬೈಕು, ಫ್ರಿಡ್ಜ್, ಟಿವಿ ಇದ್ದರೆ ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸಲಾಗುವುದು ಎಂದು ಹೇಳಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಈಗ ಯೂಟರ್ನ್ ಹೊಡೆದಿದ್ದು ಯಾವುದೇ ಹೊಸ ನಿಯಮವನ್ನು ಹೇರುವುದಿಲ್ಲ ಎಂದು ಹೇಳಿದ್ದಾರೆ. ಹೊಸ ನಿಯಯ ಹೇರದ ಕಾರಣ ಮಧ್ಯಮ ವರ್ಗದವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಹೊಸ ನಿಯಮ ಇರದಿದ್ದರೂ ಬಿಪಿಎಲ್ ಕಾರ್ಡ್‍ನಲ್ಲಿ ಪಡಿತರ ಪಡೆಯಲು ಹಳೆ ನಿಯಮ ಏನು ಎಂಬ ಪ್ರಶ್ನೆ ಮೂಡುವುದು ಸಹಜ. ಹೀಗಾಗಿ ಇಲ್ಲಿ ಬಿಪಿಎಲ್ ಕಾರ್ಡ್ ಹೊಂದಲು ಬೇಕಾಗಿರುವ ಅರ್ಹತೆಯ ವಿವರವನ್ನು ನೀಡಲಾಗಿದೆ.

ration card3

ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013 ಜನವರಿ 2014 ರಿಂದ ಜಾರಿಗೆ ಬಂದ ನಂತರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯನ್ನು ಪಡಿತರ ಚೀಟಿಗಳನ್ನು ಆದ್ಯತಾ ಹಾಗೂ ಆದ್ಯತೇತರ ಪಡಿತರ ಚೀಟಿಗಳೆಂದು ವರ್ಗೀಕರಿಸಲಾಗಿತ್ತದೆ. ಇದಲ್ಲದೇ ಎಎವೈ ವರ್ಗೀಕರಣದ ಪಡಿತರ ಚೀಟಿಗಳು ಸಹ ಮುಂದುವರೆದಿರುತ್ತದೆ. ಆದ್ಯತಾ ಹಾಗೂ ಎಎವೈ ಪಡಿತರ ಚೀಟಿಗಳನ್ನು ಹೊಂದಿದ ಕುಟುಂಬಗಳನ್ನು ಒಟ್ಟಾಗಿ ಅರ್ಹತಾ ಕುಟುಂಬಗಳೆಂದು ಕರೆಯಲಾಗುತ್ತದೆ.

ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013 ಜಾರಿಗೆ ಬಂದ ನಂತರ ಈ ಕಾಯ್ದೆಯ ಸೆಕ್ಷನ್ 10ರನ್ವಯ, ಮೇಲೆ ತಿಳಿಸಿದಂತೆ 14 ಹೊರಗಿಡುವ ಮಾನದಂಡಗಳನ್ನೇ ಅನುಸರಿಸಿ, ಈ ಹಿಂದೆ ಇದ್ದ ಬಿಪಿಎಲ್ ಅಥವಾ ಆರ್ಥಿಕವಾಗಿ ಸದೃಢವಲ್ಲದ ಕುಟುಂಬಗಳಿಗೆ ಹೆಚ್ಚಿನ ಆದ್ಯತಾ ಕುಟುಂಬಗಳೆಂದು ಪರಿಗಣಿಸಲಾಗುತ್ತಿದೆ.

ration card

ಸಾರ್ವಜನಿಕರಲ್ಲಿ ಮಾನದಂಡಗಳನ್ನು ಹೆಚ್ಚು ನೈಜ ಹಾಗೂ ವಸ್ತುನಿಷ್ಠ ಸ್ವರೂಪನ್ನಾಗಿಸುವ ಸಲುವಾಗಿ ಈ ಸೆಕ್ಷನ್10(1)ರಲ್ಲಿ ಪ್ರದತ್ತವಾದ ಅಧಿಕಾರದನ್ವಯ, ಪ್ರಸ್ತುತ ಚಾಲ್ತಿಯಲ್ಲಿರುವ ಮಾರ್ಗ ಸೂಚಿಗಳು/ಹೊರಗಿಡುವ ಮಾನದಂಡಗಳನ್ನು ರಾಜ್ಯ ಸರ್ಕಾರವು ಸರಳಿಕರಿಸಿದೆ.

ಯಾರು ಬಿಪಿಎಲ್ ಕಾರ್ಡ್‍ಗೆ ಅರ್ಹರಲ್ಲ?
1) ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆ, ಮಂಡಳಿ, ನಿಗಮ, ಸ್ವಾಯುತ್ತ ಸಂಸ್ಥೆಗಳು ಇತ್ಯಾದಿ: ಒಳಗೊಂಡಂತೆ ಆದಾಯ ತೆರಿಗೆ / ಸೇವಾ ತೆರಿಗೆ/ ವ್ಯಾಟ್/ ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು.

ration card 5

2) ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು.

3) ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು.

4) ಪ್ರತಿ ತಿಂಗಳು 150 ಯುನಿಟ್‍ಗಳಿಗಿಂತಲೂ ಹೆಚ್ಚಿನ ವಿದ್ಯುತ್‍ಚ್ಛಕ್ತಿಯನ್ನು ಬಳಕೆ ಮಡುವ ಕುಟುಂಬಗಳು.

ಈ ಮೇಲೆ ತಿಳಿಸಿದ ಆದ್ಯತೇತರ ಕುಟುಂಬಗಳನ್ನು ಹೊರತುಪಡಿಸಿ, ಉಳಿದ ಕುಟುಂಬಗಳು ಆದ್ಯತಾ ಪಡಿತರ ಚೀಟಿಯನ್ನು ಪಡೆಯಲು ಅರ್ಹ ಕುಟುಂಬವೆಂದು ಪರಿಗಣಿಸಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *