ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಬ್ಲಾಕ್ ಡೆವಲಪ್‍ಮೆಂಟ್ ಕೌನ್ಸಿಲ್ ಸ್ಥಾನವನ್ನು ಗೆದ್ದಿರುವ ವಿಚಾರ ತಿಳಿದ ವಧು, ಮದುವೆ ಸಮಾರಂಭವನ್ನು ಅರ್ಧದಲ್ಲಿಯೇ ಬಿಟ್ಟು, ಮತ ಎಣಿಕೆ ಕೇಂದ್ರಕ್ಕೆ ಧಾವಿಸಿ ತನ್ನ ವಿಜೇತ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ.
ಈ ಘಟನೆ ಭಾನುವಾರ ನಡೆದಿದ್ದು, ಪೂನಂ ಶರ್ಮಾ(28) ಎಂಬವರು ಹೂವಿನ ಹಾರವನ್ನು ವರನೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದ ವೇಳೆ ಈ ಸಿಹಿ ಸುದ್ದಿ ತಿಳಿದುಬಂದಿದೆ. ವಿಶೇಷವೆಂದರೆ ಪೂನಂ ಅವರ ವಿವಾಹವನ್ನು ಮೇ 2ರಂದು ನಿಗದಿ ಪಡಿಸಲಾಗಿತ್ತು ಮತ್ತು ಪಂಚಾಯತ್ ಚುನಾಣೆಯ ಎಣಿಕೆಯನ್ನೂ ಕೂಡ ಮೇ 2 ರಂದೇ ನಿಗದಿ ಪಡಿಸಲಾಗಿತ್ತು.
Advertisement
Advertisement
ಪೂನಂ ಶರ್ಮಾ ಮದುವೆ ಮಂಟಪದಿಂದ 20 ಕಿ.ಮೀ ದೂರದಲ್ಲಿರುವ ಎಣಿಕೆ ಕೇಂದ್ರಕ್ಕೆ ಭಾನುವಾರ ರಾತ್ರಿ 9.30ಕ್ಕೆ ತಲುಪಿ ಪ್ರಮಾಣಪತ್ರವನ್ನು ಸ್ವೀಕರಿಸಿದರು. ಈ ವೇಳೆ ಅವರು ವಧುವಿನ ಉಡುಪು ಗುಲಾಬಿ ಬಣ್ಣದ ಮಾಸ್ಕ್ ಧರಿಸಿರುವುದನ್ನು ಕಂಡು ಅಲ್ಲಿದ್ದವರು ಕಂಡು ಬೆರಗಾದರು. ಅಲ್ಲದೆ ಪ್ರಮಾಣ ಪತ್ರವನ್ನು ಅಧಿಕಾರಿಗಳಿಂದ ಸ್ವೀಕರಿಸುತ್ತಿರುವ ಫೋಟೋವನ್ನು ಸೆರೆ ಹಿಡಿಯಲಾಗಿದೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ನಾನು ಈಗ ಬಿಡಿಸಿ ಸದಸ್ಯೆಯಾಗಿರುವುದು ನನ್ನ ಮದುವೆಗೆ ಸಿಕ್ಕ ಅತ್ಯುತ್ತಮ ಉಡುಗೊರೆಯಾಗಿದೆ. ಈ ಕ್ಷಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ವರ್ಮಾಲಾ ಮೊದಲು ನಾನು 31 ಮತಗಳಿಂದ ಚುನಾವಣೆಯಲ್ಲಿ ಗೆದ್ದಿದ್ದೇನೆ. ನನ್ನ ಸೋದರ ಅಳಿಯಂದಿರು ನನಗೆ ಪ್ರಮಾಣಪತ್ರವನ್ನು ಸ್ವೀಕರಿಸಲು ಮದುವೆ ಮಂಟಪದಿಂದ ಹೊರಗಡೆ ಹೋಗಲು ಅವಕಾಶ ಮಾಡಿಕೊಟ್ಟರು. ನನ್ನ ಗೆಲುವಿನಿಂದ ಹಳ್ಳಿಯವರೆಲ್ಲ ಸಂತಸದಿಂದ ಇದ್ದಾರೆ ಎಂದು ಹೇಳಿದರು.
Advertisement
ನಂತರ ಗೆದ್ದ ಬ್ಯಾಡ್ಜ್‌ನೊಂದಿಗೆ ಎಣಿಕೆ ಕೇಂದ್ರದಿಂದ ಪೂನಂ ಶರ್ಮಾ ಮಂಟಪಕ್ಕೆ ಹಿಂದಿರುಗಿದರು. ನಂತರ ಉಳಿದ ಮದುವೆಯ ಶಾಸ್ತ್ರಗಳನ್ನು ಮುಂದುವರೆಸಲಾಯಿತು.