ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್‍ನಲ್ಲಿ ಪ್ರಮುಖ ದಂಧೆಕೋರನಿಗಾಗಿ ಬೆಂಗಳೂರಿನ ಕ್ರೈಂ ಬ್ರ್ಯಾಂಚ್ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ. ಆ ದಂಧೆಕೋರ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಆಗ ದೊಡ್ಡ ದೊಡ್ಡ ರಾಜಕಾರಣಿಗಳು, ಅವರ ಮಕ್ಕಳು, ದೊಡ್ಡ ದೊಡ್ಡ ಸಿನಿಮಾ ಸ್ಟಾರ್ ಗಳಿಗೆ ಮಾರಿಹಬ್ಬ ಕಾದಿದೆ ಎಂದು ಮೂಲಗಳು ತಿಳಿಸಿವೆ.
Advertisement
ಡ್ರಗ್ಸ್ ಕೇಸ್‍ನ ತನಿಖೆ ಆರಂಭ ಆಗ್ತಿದ್ದಂತೆ ಸುಳಿವು ಪಡೆದಿದ್ದ ಆ ಪ್ರಮುಖ ಡ್ರಗ್ಸ್ ಡೀಲರ್ ಮೊಬೈಲ್ ಸ್ವಿಚ್‍ಆಫ್ ಮಾಡ್ಕೊಂಡಿದ್ದು, ಪೊಲೀಸರೊಂದಿಗೆ ಕಣ್ಣಾಮುಚ್ಚಾಲೆ ಆಡ್ತಿದ್ದಾನೆ. ಈತನ ಹೆಸರನ್ನು ಪೊಲೀಸರು ಇದೂವರೆಗೆ ಎಫ್‍ಐಆರ್ ನಲ್ಲಿ ಸೇರಿಸಿಲ್ಲ. ಆದರೆ ಈತನ ಬಂಧನವಾದ್ರೆ ಇಡೀ ಡ್ರಗ್ಸ್ ಕೇಸ್‍ಗೆ ಊಹಿಸಲಾಗದ ಹೊಸ ತಿರುವೇ ಸಿಗಲಿದೆ. ಡ್ರಗ್ಸ್ ಪಾರ್ಟಿ, ಕ್ಯಾಸಿನೋ ಅಂತೆಲ್ಲ ವಿದೇಶಕ್ಕೆ ಹೋಗ್ತಿದ್ದವರಿಗೆ ಶಾಕ್ ಕಾದಿದೆ. ಈ ಕೇಸ್‍ನಲ್ಲಿ ಬಿಜೆಪಿ ಸಂಸದನ ಮಗನನ್ನೂ ವಿಚಾರಣೆಗೆ ಕರೆಯುವ ನಿರೀಕ್ಷೆ ಇದೆ. ಅಲ್ಲದೇ ಜೆಡಿಎಸ್‍ನ ಮಾಜಿ ಸಂಸದ ಶಿವರಾಮೇಗೌಡ ಪುತ್ರನಿಗೂ ನೋಟಿಸ್ ಜಾರಿ ಆಗಿದೆ.
Advertisement
Advertisement
ಒಟ್ಟಿನಲ್ಲಿ ಈಗ ಸ್ಟಾರ್ ನಟ-ನಟಯರಿಗೆ ನಡುಕ ಶುರು ಆಗಿದೆ. ಇದೂವರೆಗೆ ನಡೆಸಿರೋ ತನಿಖೆ ವೇಳೆ ಡ್ರಗ್ಸ್ ದಂಧೆಕೋರರು ನೀಡಿರುವ ಹೇಳಿಕೆ ಆಧರಿಸಿ ಇನ್ನಷ್ಟು ಸ್ಟಾರ್ ನಟ-ನಟಿಯರಿಗೆ ಬೆಂಗಳೂರಿನ ಕ್ರೈಂಬ್ರ್ಯಾಂಚ್ ಪೊಲೀಸರು ನೋಟಿಸ್ ನೀಡುವ ನಿರೀಕ್ಷೆ ಇದೆ. ಪ್ರಸಿದ್ಧ ಹೀರೋ-ಹೀರೋಯಿನ್‍ಗಳ ವಿರುದ್ಧ ಕಾಲ್ ರೆಕಾರ್ಡ್ಸ್ ಸೇರಿದಂತೆ ಡಿಜಿಟಿಲ್ ಎವಿಡೆನ್ಸ್ ನ್ನು ಸಿಸಿಬಿ ಕಲೆ ಹಾಕುತ್ತಿದೆ. ಈ ಡಿಜಿಟಲ್ ಎವಿಡೆನ್ಸ್ ಕೈ ಸೇರಿದ ಕೂಡಲೇ ಆ ನಟ-ನಟಿಯರಿಗೆ ಸಮನ್ಸ್ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
Advertisement
ಇತ್ತ ಡ್ರಗ್ ಕೇಸ್ ತನಿಖೆ ಮಾಡ್ತಿರೋ ಪೊಲೀಸರಿಗೆ ಈ ಬಗ್ಗೆ ಸ್ಫೋಟಕ ಸುಳಿವು ಸಿಕ್ಕಿದೆ. ರಾಜಧಾನಿಯ ಹೊರವಲಯದಲ್ಲಿರುವ ಇರುವ ಫಾರ್ಮ್‍ಹೌಸ್‍ಗಳಲ್ಲಿ ಸ್ಮೈಲ್ ಪಾರ್ಟಿ ಹೆಸರಲ್ಲಿ ಡ್ರಗ್ಸ್ ಪಾರ್ಟಿ ಇರ್ತಿತ್ತು. ಸಿನಿಮಾ, ಸೀರಿಯಲ್, ಉದ್ಯಮಿಗಳು, ರಾಜಕಾರಣಿಗಳು, ಅವರ ಮಕ್ಕಳು ಕೂಡ ಆ ಪಾರ್ಟಿಗೆ ಬರ್ತಿದ್ರು. ತಡರಾತ್ರಿ 11 ಗಂಟೆ ಸುಮಾರಿಗೆ ಶುರವಾಗ್ತಿದ್ದ ಪಾರ್ಟಿ ಬೆಳಗ್ಗೆ 4ರಿಂದ 5 ಗಂಟೆವರೆಗೂ ನಡೀತಿತ್ತು. ಇವೆಲ್ಲದರ ಬಗ್ಗೆ ಸದ್ಯಕ್ಕೆ ಸಿಸಿಬಿ ಅರೆಸ್ಟ್ ಮಾಡಿರೋ ಆರೋಪಿಯೊಬ್ಬನ ಮೊಬೈಲ್‍ನಲ್ಲಿ ಸಾಕ್ಷ್ಯ ಸಿಕ್ಕಿದೆ. ಈ ವೀಡಿಯೋ ಒಳಗೊಂಡು ಇತರೆ ಸಾಕ್ಷ್ಯಗಳನ್ನ ಆಧರಿಸಿ ಪಾರ್ಟಿಗಳ ಆಯೋಜಕರು, ಫಾರ್ಮ್‍ಹೌಸ್‍ಗಳ ಮಾಲೀಕರು, ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರಿಗೆ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ಮಾಡ್ಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.