ಬಿಜೆಪಿ ಶಾಸಕನ ವಿರುದ್ಧ ಮಹಿಳೆ ಲೈಂಗಿಕ ಕಿರುಕುಳ ಆರೋಪ

Public TV
1 Min Read
couple 768x404 1

– ಮಗಳ ಡಿಎನ್‍ಎ ಶಾಸಕನೊಂದಿಗೆ ಹೊಂದಾಣಿಕೆ ಆಗುತ್ತೆ

ಡೆಹ್ರಾಡೂನ್: ಉತ್ತರಾಖಂಡದ ಬಿಜೆಪಿ ಶಾಸಕನೊಬ್ಬ ನನಗೆ ಎರಡು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಇದೀಗ ಆರೋಪಿ ಮಾಡಿರುವ ಮಹಿಳೆ ಮತ್ತು ಇತರ ನಾಲ್ವರ ವಿರುದ್ಧ ಡೆಹ್ರಾಡೂನ್‍ನ ನೆಹರು ಕಾಲೋನಿ ಪೊಲೀಸ್ ಠಾಣೆಯಲ್ಲಿ ಶಾಸಕರ ಪತ್ನಿ ದೂರು ದಾಖಲಿಸಿದ್ದಾರೆ. ದೂರಿನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

is dna one in a million 327116

ಆರೋಪ ಮಾಡಿರುವ ಮಹಿಳೆ ತನ್ನ ಮಗಳ ಡಿಎನ್‍ಎ ಬಿಜೆಪಿ ಶಾಸಕನ ಡಿಎನ್‍ಎ ಮಾದರಿಗೆ ಹೊಂದಾಣಿಕೆಯಾಗುತ್ತದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಮಹಿಳೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.

ಅದರಲ್ಲಿ ಬಿಜೆಪಿ ಶಾಸಕ ತನ್ನೊಂದಿಗೆ ಎರಡು ವರ್ಷಗಳಿಂದ ದೈಹಿಕ ಸಂಬಂಧವನ್ನು ಹೊಂದಿದ್ದಾರೆ. ಹೀಗಾಗಿ ನನ್ನ ಮಗಳ ಡಿಎನ್‍ಎ ಮಾದರಿ ಪತಿಯ ಡಿಎನ್‍ಎಗೆ ಹೊಂದಿಕೆಯಾಗಿಲ್ಲ. ಹಾಗಾಗಿ ಬಿಜೆಪಿ ಶಾಸಕನೊಂದಿಗೆ ಹೊಂದಾಣಿಕೆಯಾಗಬೇಕು ಎಂದು ಮಹಿಳೆ ಹೇಳಿದ್ದಾರೆ.

Dehradun SSP Aug15

ಶಾಸಕರ ಪತ್ನಿ ನೀಡಿರುವ ದೂರಿನ ಅನ್ವಯ ನಾವು ಎಫ್‍ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಅರುಣ್ ಮೋಹನ್ ಜೋಶಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *