ಬಿಜೆಪಿ ರಾಜ್ಯಾಧ್ಯಕ್ಷರ ಸೊಸೆ ಅನುಮಾನಾಸ್ಪದವಾಗಿ ಸಾವು

Public TV
1 Min Read
BJP DEATH

– ಪಾರ್ಟಿಯಲ್ಲಿ ಕುಸಿದು ಬಿದ್ದು ಸಾವು
– ಪಾರ್ಟಿಯಲ್ಲಿ 1 ಗಂಟೆಗೂ ಹೆಚ್ಚು ಸಮಯ ಡ್ಯಾನ್ಸ್

ಹೈದರಾಬಾದ್: ಆಂಧ್ರಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಕನ್ನಾ ಲಕ್ಷ್ಮೀ ನಾರಾಯಣ ಅವರ ಸೊಸೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಾ ಲಕ್ಷ್ಮೀನಾರಾಯಣ ಅವರ ಸೊಸೆ 32 ವರ್ಷದ ಸುಹಾರಿಕಾ ಮೃತಪಟ್ಟಿದ್ದಾರೆ. ಸುಹಾರಿಕಾ ತನ್ನ ಸ್ನೇಹಿತರ ಪಾರ್ಟಿಯ ನಂತರ ಕುಸಿದು ಸಾವನ್ನಪ್ಪಿದ್ದಾರೆ. ಈ ಘಟನೆ ರಾಯದುರ್ಗ್ ಪೊಲೀಸ್ ಠಾಣೆ ವ್ಯಾಪ್ತಿಯ ಮೀನಾಕ್ಷಿ ಟವರ್ಸ್ ನಲ್ಲಿ ನಡೆದಿದೆ.

Is the reason for choosing Kanna Lakshmi Narayana as AP BJP chief 1280x720 1

ಗುರುವಾರ ಸುಹಾರಿಕಾ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಭಾಗವಹಿಸಿದ್ದನು. ಪಾರ್ಟಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಡ್ಯಾನ್ಸ್ ಮಾಡಿದ್ದಾರೆ ಎನ್ನಲಾಗಿದೆ. ಪಾರ್ಟಿ ನಂತರ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿಯೇ ಸುಹಾರಿಕಾ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮಾಹಿತಿ ತಿಳಿದು ಪೊಲೀಸರು ಆಸ್ಪತ್ರೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ನಂತರ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Capture 6

ಈಗಾಗಲೇ ಸುಹಾರಿಕಾ ತಾಯಿ, ಪತಿ ಮತ್ತು ಇತರ ಸ್ನೇಹಿತರು, ಸಂಬಂಧಿಕರ ಹೇಳಿಕೆಗಳನ್ನು ದಾಖಲಿಸಿದ್ದೇವೆ. ಸದ್ಯಕ್ಕೆ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಇನ್ಸ್ ಪೆಕ್ಟರ್ ಎಸ್. ರವೀಂದ್ರ ತಿಳಿಸಿದ್ದಾರೆ.

ಮೃತ ಸುಹಾರಿಕಾ 10 ವರ್ಷಗಳ ಹಿಂದೆ ಕನ್ನಾ ಲಕ್ಷ್ಮೀನಾರಾಯಣ ಅವರ ಕಿರಿಯ ಪುತ್ರ ಫಣೀಂದ್ರ ಅವರನ್ನು ಮದುವೆಯಾಗಿದ್ದರು. ವಿವಾಹದ ನಂತರ ಪತಿ ಮತ್ತು ಪತ್ನಿ ಸೇರಿ ಸುನೀಂದ್ರ ಎಂಟರ್ ಪ್ರೈಸಸ್ ಎಂಬ ಉದ್ಯಮವನ್ನು ಹೈದರಾಬಾದ್‍ನಲ್ಲಿ ನಡೆಸುತ್ತಿದ್ದರು.

Police I

Share This Article
Leave a Comment

Leave a Reply

Your email address will not be published. Required fields are marked *