ನವದೆಹಲಿ: ಚುನಾವಣಾ ಪ್ರಚಾರ ಪಶ್ಚಿಮ ಬಂಗಾಳದಲ್ಲಿ ಜೋರಾಗಿದೆ. ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪ ಪೋಸ್ಟ್ ವಾರ್‍ಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ ಒಂದು ಘಟನೆ ನಡೆದಿದೆ.
Advertisement
ಬಿಜೆಪಿ ನಾಯಕನ ಮನೆಯಲ್ಲಿ ರಾಶಿ ರಾಶಿ ಹಣ ಪತ್ತೆಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹಣವನ್ನು ಬಂಗಾಳ ಬಿಜೆಪಿ ನಾಯಕರೊಬ್ಬರ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಕೆಲವು ಪೊಲೀಸರು ಸುದ್ದಿಗೋಷ್ಠಿಯಲ್ಲಿ ಕುಳಿತು ಸ್ಪಷ್ಟನೆ ನೀಡುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದ್ದವು.
Advertisement
Telangana: Khammam police today arrested five persons for cheating public in guise of exchanging Rs. 2,000 denomination currency notes and offering 20% commission.
320 bundles of Rs. 2000 denomination fake notes (around Rs 6.4 crores) seized. pic.twitter.com/ptulXGi1Qb
— ANI (@ANI) November 2, 2019
Advertisement
ಫೇಸ್‍ಬುಕ್, ಟ್ವಿಟ್ಟರ್ ಬಳಕೆದಾರರು ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋಗೆ ನೆಟ್ಟಿಗರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದರು. ಆದರೆ ಈ ಫೋಟೋ 2019ರಲ್ಲಿ ತೆಗೆಯಲಾಗಿದೆ. ತೆಲಂಗಾಣ ಪೊಲೀಸರು ಖಮ್ಮಮ್‍ನಲ್ಲಿ ನಕಲಿ ನೋಟು ಜಾಲವನ್ನು ಭೇದಿಸಿ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆ ಫೋಟೋ ಇದಾಗಿದೆ. ಗೂಗಲ್ ರಿವರ್ಸ್ ಸರ್ಚ್ ಇಂಜಿನ್ ಬಳಸಿಕೊಂಡು ನೋಡಿದಾಗ ಅಸಲಿ ಕಥೆ ಬಯಲಾಗಿದೆ. ಇದು 2019ರಲ್ಲಿ ನಡೆದಿರುವ ಒಂದು ನಕಲಿ ಜಾಲದ ರೈಡ್‍ನ ಫೋಟೋ ಎಂದು ತಿಳಿದು ಬಂದಿದೆ.
Advertisement