ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಬಂದಿರುವ ಟಿಕೆಟ್‍ನ್ನು ಯುವಕ ನಿರಾಕರಿಸಿದ್ದಾನೆ.
ಮಣಿಕುಟ್ಟನ್‍ಪಣಿಯಣ್ (31) ಎಂಬಿಎ ಪದವೀಧರನಿಗೆ ಬಿಜೆಪಿ ಕಡೆಯಿಂದ ಟಿಕೆಟ್ ಕೊಟ್ಟಿದ್ದು, ಇದನ್ನು ಯುವಕ ನಿರಾಕರಿಸಿದ್ದಾನೆ. ಯುವಕ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುವ ಮೂಲಕವಾಗಿ ಹೈಕಮಾಂಡ್‍ಗೆ ಶಾಕ್ ನೀಡಿದ್ದಾನೆ.
Advertisement
Advertisement
ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದ ಸಮುದಾಯಕ್ಕೆ ಮೀಸಲಾಗಿದ್ದ ಮನಂತವಾಡಿ ಕ್ಷೇತ್ರದಿಂದ ಮಣಿಕುಟ್ಟನ್‍ಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಮಣಿಕುಟ್ಟನ್ ಕೇರಳದ ಪಣಿಯಾ ಬುಡಕಟ್ಟು ಸಮುದಾಯದಲ್ಲಿ ಎಂಬಿಎ ಪದವಿಗಳಿಸಿದ ಮೊದಲ ವ್ಯಕ್ತಿ ಎಂದು ಬಿಜೆಪಿ ಹೇಳಿತ್ತು. ಆದರೆ ಅಭ್ಯರ್ಥಿ ಪಟ್ಟಿಯಲ್ಲಿರುವ ಮಣಿಕುಟ್ಟನ್ ಟಿಕೆಟ್ ನಿರಾಕರಿಸಿದ್ದಾನೆ.
Advertisement
Advertisement
ಕೇಂದ್ರದ ನಾಯಕರು ನನ್ನನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಆದರೆ ನಾನು ಒಂದು ಉದ್ಯೋಗ ಪಡೆದು, ನನ್ನ ಕುಟುಂಬದೊಂದಿಗೆ ಇರಲು ಬಯಸುತ್ತೇನೆ. ಬಿಜೆಪಿ ನನಗೆ ನೀಡಿರುವ ಅವಕಾಶವನ್ನು ನಾನು ಸಂತೋಷದಿಂದ ನಿರಾಕರಿಸುತ್ತೇನೆ ಎಂದು ಮಣಿಕುಟ್ಟನ್ ಹೇಳಿದ್ದಾನೆ.
ನಾನು ಸಾಮಾನ್ಯ ಪ್ರಜೆಯಾಗಿದ್ದು, ನನಗೆ ಟಿಕೆಟ್ ಘೋಷಣೆ ಮಾಡಿರುವುದು ಅಚ್ಚರಿಯಾಗಿದೆ. ನನಗೆ ಬಿಜೆಪಿ ಅಭ್ಯರ್ಥಿಯಾಗುವುದು ಇಷ್ಟವಿಲ್ಲ. ಆದರೆ ನಮ್ಮ ಸಮುದಾಯದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವುದು ತುಂಬಾ ಸಂತೋಷವಾಗಿದೆ. ಈಗಾಗಲೇ ನಾಯಕರಿಗೆ ಫೋನ್ ಮೂಲಕ ಈ ಕುರಿತಾಗಿ ಹೇಳಿದ್ದೇನೆ ಎಂದು ಯುವಕ ಸ್ಪಷ್ಟಪಡಿಸಿದ್ದಾರೆ.