ಬಿಜೆಪಿ ಟಿಕೆಟ್ ಕೊಡಿಸುವಂತೆ ಹೇಳಿದ ಅಭಿಮಾನಿಗೆ ಸೋನು ಸೂದ್ ಖಡಕ್ ಉತ್ತರ

Public TV
1 Min Read
SONU SOOD 1

ಮುಂಬೈ: ಸಂಕಷ್ಟದಲ್ಲಿದ್ದವರಿಗೆ ಸದಾ ಸಹಾಯ ಹಸ್ತ ಚಾಚುತ್ತಿರುವ ಬಾಲಿವುಡ್ ನಟ ಸೋನು ಸೂದ್ ಅವರು ಅಭಿಮಾನಿಯೊಬ್ಬನ ಪ್ರಶ್ನೆಗೆ ಖಡಕ್ ಉತ್ತರ ನೀಡಿರುವುದು ಸದ್ಯ ವೈರಲ್ ಆಗಿದೆ.

Sonu Sood

ಟ್ವಿಟ್ಟರ್ ಬಳಕೆದಾರನೊಬ್ಬ ಸೋನು ಸೂದ್ ಬಳಿ ನನಗೆ ಬಿಜೆಪಿ ಟಿಕೆಟ್ ಕೊಡಿಸಿ ಎಂದು ಕೇಳಿದ್ದಾನೆ. ಇದಕ್ಕೆ ನಟ ಉತ್ತರಿಸಿರುವ ಪರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿ ಸೋನು ಸೂದ್ ಅವರಿಗೆ ಟ್ವೀಟ್ ಮಾಡಿ, ಸರ್ ನಾನು ಬಿಹಾರದ ಭಾಗಲ್ಪುರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜನರ ಸೇವೆ ಮಾಡಲು ಬಯಸಿರುತ್ತೇನೆ. ಹೀಗಾಗಿ ದಯವಿಟ್ಟು ನೀವು ನನಗೆ ಬಿಜೆಪಿಯಿಂದ ಟಿಕೆಟ್ ಕೊಡಿಸಿ ಎಂದು ಹೇಳಿದ್ದಾನೆ.

ಅಭಿಮಾನಿಯ ಟ್ವೀಟ್ ಗೆ ಉತ್ತರಿಸಿರುವ ಸೋನು ಸೂದ್, ಬಸ್, ರೈಲು ಹಾಗೂ ವಿಮಾನ ಟಿಕೆಟ್ ಗಳನ್ನು ಹೊರತುಪಡಿಸಿ ಬೇರೆ ಟಿಕೆಟ್ ಗಳನ್ನು ಹೇಗೆ ವ್ಯವಸ್ಥೆ ಮಾಡುವುದು ಎಂದು ನನಗೆ ತಿಳಿದಿಲ್ಲ ಸಹೋದರ ಎಂದು ಖಡಕ್ಕಾಗಿ ತಿಳಿಸಿದ್ದಾರೆ. ಇದನ್ನೂ ಓದಿ; ಕೊಟ್ಟ ಮಾತಿನಂತೆ ನಡೆದ ಸೋನು ಸೂದ್ – ಯಾದಗಿರಿಯ ಕುಟುಂಬಕ್ಕೆ ಬಂತು ದಿನಸಿ

ಈ ಹಿಂದೆ ಯುವಕನೊಬ್ಬ ಸೋನು ಸೂದ್ ಬಳಿ ಐ-ಫೋನ್‍ಗಾಗಿ ಬೇಡಿಕೆ ಇಟ್ಟಿದ್ದನು. ನನಗೆ ಐ-ಫೋನ್ ಕೊಡಿಸಿ, ಈ ಬಗ್ಗೆ ನಾನು ನಿಮಗೆ 20 ಬಾರಿ ಟ್ವೀಟ್ ಮಾಡಿದ್ದೇನೆ ಎಂದು ಈಶಾನ್ ದ್ವಿವೇದಿ ಎಂಬ ಯುವಕ ಬರೆದುಕೊಂಡಿದ್ದನು. ಇದಕ್ಕೆ ಉತ್ತರ ಕೊಟ್ಟಿದ್ದ ನಟ, ನನಗೂ ಐ-ಫೋನ್ ಬೇಕು, ನಾನು ಇದಕ್ಕಾಗಿ 21 ಬಾರಿ ಟ್ವೀಟ್ ಮಾಡುವೆ ಎಂದು ಪ್ರತಿಕ್ರಿಯೆ ಕೊಟ್ಟಿದ್ದರು.

ಕೊರೊನಾ ವೈರಸ್ ಭೀತಿಯಿಂದ ಹೇರಿದ್ದ ಲಾಕ್‍ಡೌನ್ ಸಂದರ್ಭದಲ್ಲಿ ಅನೇಕ ಮಾನವೀಯ ಕಾರ್ಯಗಳು ನಡೆದಿವೆ. ಈ ಮಧ್ಯೆ ಬಾಲಿವುಡ್ ನಟ ಸೋನು ಸೂದ್ ಅವರ ಹೆದರು ಹೆಚ್ಚಾಗಿ ಕೇಳಿಬಂದಿತ್ತು. ವಲಸೆ ಕಾರ್ಮಿಕರಿಂದ ಹಿಡಿದು ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ವಾಪಸ್ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಷ್ಟು ಮಾತ್ರವಲ್ಲದೇ ಕಷ್ಟ ಎಂದು ಬಂದವರಿಗೆ ನಟ ಸಹಾಯ ಹಸ್ತ ಚಾಚುತ್ತಲೇ ಇದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *