ಬೆಂಗಳೂರು: ರಾಜ್ಯ ಬಿಜೆಪಿ ಕೋರ್ ಕಮಿಟಿ ಪುನಾರಚನೆಯಾಗಿದ್ದು, ಸಿಎಂ ಯಡಿಯೂರಪ್ಪ ಬಣಕ್ಕೆ ಹಿನ್ನೆಡೆಯಾಗಿದೆ. ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಅಶ್ವಥನಾರಾಯಣ್, ಸಚಿವ ಶ್ರೀರಾಮುಲುಗೆ ಸ್ಥಾನ ಸಿಕ್ಕಿದೆ.
ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಆಪ್ತ ನಿರ್ಮಲ್ ಕುಮಾರ್ ಸುರಾನಾಗೆ ಹೈಕಮಾಂಡ್ ಸ್ಥಾನ ಕಲ್ಪಿಸಿದೆ. ಇದೇ ವೇಳೆ, ಕೋರ್ ಕಮಿಟಿಯಿಂದ ಸಿಎಂ ಅಪ್ತರಾದ ಅರವಿಂದ ಲಿಂಬಾವಳಿ, ಸಿಎಂ ಉದಾಸಿಗೆ ಕೊಕ್ ನೀಡಲಾಗಿದೆ.
ನನ್ನ ಪಕ್ಷ ವಹಿಸಿದ ಜವಾಬ್ದಾರಿಯನ್ನು ಪಾಲಿಸುವುದೇ ನನ್ನ ಪರಮೋಚ್ಚ ಗುರಿ. ಪಕ್ಷದ ಸಂಘಟನೆಯೇ ನನ್ನ ಧ್ಯೇಯ. ಈ ದಿಸೆಯಲ್ಲಿ @BJP4India, @BJP4Karnatakaವು ನನ್ನನ್ನು ಬಿಜೆಪಿ ಕೋರ್ ಕಮಿಟಿ ಸದಸ್ಯನನ್ನಾಗಿ ಆಯ್ಕೆ ಮಾಡಿದೆ. ಈ ಜವಾಬ್ದಾರಿಯನ್ನು ಶಿರಸಾವಹಿಸಿ ನಿಭಾಯಿಸುತ್ತೇನೆ. pic.twitter.com/2dyqPOIDZl
— B Sriramulu (@sriramulubjp) March 25, 2021
ಉಳಿದಂತೆ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸದಾನಂದಗೌಡ, ಸಚಿವ ಆರ್ ಅಶೋಕ್, ಈಶ್ವರಪ್ಪ, ಪಕ್ಷದ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಕೋರ್ ಕಮಿಟಿಯಲ್ಲಿ ಮುಂದುವರೆದಿದ್ದಾರೆ.
ವಿಶೇಷ ಆಹ್ವಾನಿತರಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿಕೆ ಅರುಣಾ ಕೋರ್ ಕಮಿಟಿಗೆ ಸೇರ್ಪಡೆ ಆಗಿದ್ದಾರೆ.