ನವದೆಹಲಿ: ದೇಶದಲ್ಲಿ ಕಳೆದ 10 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ನಿರಂತರವಾಗಿ ಗಗನಮುಖಿಯಾಗಿದೆ. ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕೊರೊನಾ ಸಂಕಷ್ಟದ ನಡುವೆ ಜನರಿಗೆ ಬದುಕುವುದೇ ಕಷ್ಟವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದೆ. ತಕ್ಷಣವೇ ತೈಲದರ ಏರಿಕೆ ಹಿಂಪಡೆಯಿರಿ ಅಂತ ಆಗ್ರಹಿಸಿದ್ದಾರೆ. 10 ದಿನಗಳಲ್ಲಿ ಪೆಟ್ರೋಲ್ ದರ ಲೀಟರಿಗೆ 5.45 ರೂ. ಹಾಗೂ ಡೀಸೆಲ್ ಲೀಟರಿಗೆ 5.80 ರೂ. ಏರಿಕೆಯಾಗಿದೆ.
Advertisement
Advertisement
ಜೂನ್ 7ರಂದು ಒಂದು ಬ್ಯಾರೆಲ್‍ಗೆ 42 ಡಾಲರ್ ಇತ್ತು. ಆಗ ಭಾರತ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ದರವನ್ನು 64 ಪೈಸೆ ಹಾಗೂ ಡೀಸೆಲ್ ದರವನ್ನು 60 ಪೈಸೆ ಏರಿಕೆ ಮಾಡಿತ್ತು. ಇದರಿಂದಾಗಿ ಪೆಟ್ರೋಲ್ 74.61 ರೂ. ಹಾಗೂ ಡೀಸೆಲ್ 68.42 ರೂ. ನಿಗದಿಯಾಗಿತ್ತು. ಅಲ್ಲಿಂದ ಏರಿಕೆಯಾಗುತ್ತಲೇ ಬಂದ ಇಂಧನ ದರವು ಜೂನ್ 16 ವೇಳೆಗೆ ಪ್ರತಿ ಲೀಟರ್ ಪೆಟ್ರೋಲ್ 79.64 ರೂ. ಹಾಗೂ ಡೀಸೆಲ್ 73.50 ರೂ. ಆಗಿದೆ.
Advertisement
Advertisement
ಇಂಧನ ಏರಿಕೆ ಹಿನ್ನೆಲೆ ವಿಪಕ್ಷ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.