ನವದೆಹಲಿ: ಒಂದೆಡೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ನಡೆಯುತ್ತಿದ್ದರೆ, ಇನ್ನೊಂದೆಡೆ ಸಿಡಿ ವಿಚಾರಗಳು ಮತ್ತೊಮ್ಮೆ ಮುನ್ನೆಲೆಗೆ ಬರುತ್ತಿವೆ. ನಿನ್ನೆಯಷ್ಟೇ ಸಚಿವ ಮುರುಗೇಶ್ ನಿರಾಣಿ ಮೇಲೆ ಸಾಮಾಜಿಕ ಕಾರ್ಯಕರ್ತ ಅಲಂ ಪಾಷ ಅವರು 500 ಸಿಡಿಗಳಿವೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಶಾಸಕ ರೇಣುಕಾಚಾರ್ಯ ದೆಹಲಿಗೆ ದೌಡಾಯಿಸಿದ್ದಾರೆ.
Advertisement
ಹೌದು. ರೇಣುಕಾಚಾರ್ಯ ಅವರು ದಿಢೀರ್ ಆಗಿ ನಿನ್ನೆ ರಾತ್ರಿ ದೆಹಲಿಗೆ ತೆರಳಿದ್ದು, ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇಂದು ಉಸ್ತುವಾರಿ ಅರುಣ್ ಸಿಂಗ್ ಭೇಟಿ ಸಾಧ್ಯತೆ ಇದ್ದು, ಈ ಮೂಲಕ ಸಿ.ಡಿ ಭೀತಿಯಲ್ಲಿ ದೆಹಲಿಗೆ ದೌಡಾಯಿಸಿದ್ರಾ ಎಂ.ಪಿ ರೇಣುಕಾಚಾರ್ಯ ಎಂಬ ಪ್ರಶ್ನೆ ಮೂಡಿದೆ.
Advertisement
Advertisement
ಇದೇ ವೇಳೆ ಸಿಡಿ ಸಂಬಂಧ ಪಬ್ಲಿಕ್ ಟಿವಿ ಪ್ರಶ್ನಿಸಿದಾಗ, ಸಿಡಿ ಬಗ್ಗೆ ನಂಗೇನೂ ಗೊತ್ತಿಲ್ಲ. ಈ ಬಗ್ಗೆ ಹೈಕಮಾಂಡ್ ಭೇಟಿ ಮಾಡುವಷ್ಟು ದೊಡ್ಡವನಲ್ಲ. ಕ್ಷೇತ್ರದ ಕಾರ್ಯಕ್ಕೆ ದೆಹಲಿಗೆ ಬಂದಿದ್ದೇನೆ. ನಂಗೇ ಯಾವುದೇ ಮಾಹಿತಿ ಇಲ್ಲ ಎಂದು ಹೇಳುವ ಮೂಲಕ ಪ್ರತಿಕ್ರಿಯಿಸಲು ನಿರಾಕರಿಸಿದರು. ಇದನ್ನೂ ಓದಿ: ಸಚಿವ ಮುರುಗೇಶ್ ನಿರಾಣಿ ಬಳಿ ಸುಮಾರು 500 ಸಿ.ಡಿಗಳು ಇವೆ: ಅಲಂ ಪಾಷಾ
Advertisement
ಆದರೆ ರೇಣುಕಾಚಾರ್ಯ ಅವರು ಹೈಕಮಾಂಡ್ ನಾಯಕರಿಂದ ಸಿಡಿ ಬಿಡುಗಡೆ ತಡೆ ತರಲು ಪ್ಲ್ಯಾನ್ ಮಾಡಿಕೊಂಡು ದೆಹಲಿಗೆ ಬಂದಿದ್ದಾರೆ. ಬಿಜೆಪಿ ನಾಯಕರ ಬಳಿಯೇ ಸಿ.ಡಿ ಇರುವ ಬಗ್ಗೆ ಮಾಹಿತಿ ಇದ್ದು, ಹೈಕಮಾಂಡ್ ಮೂಲಕ ಒತ್ತಡ ಹಾಕಿ ಸಿ.ಡಿ ವಿಚಾರಕ್ಕೆ ಬ್ರೇಕ್ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.
ಇನ್ನು ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ನಾನು ನನ್ನ ಕ್ಷೇತ್ರದ ಕಾರ್ಯಗಳಿಗಾಗಿ ದೆಹಲಿಗೆ ಬಂದಿದ್ದೇನೆ. ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇನೆ. ಉಸ್ತುವಾರಿಯನ್ನು ಸಾಧ್ಯವಾದರೆ ಭೇಟಿ ಮಾಡುತ್ತೇನೆ ಎಂದು ಶಾಸಕರು ಇದೇ ವೇಳೆ ಹೇಳಿದ್ದಾರೆ. ಇದನ್ನೂ ಓದಿ: ನಿರಾಣಿ ಬೆನ್ನಲ್ಲೇ ಅರವಿಂದ ಬೆಲ್ಲದ್ ವಾರಾಣಸಿ ಭೇಟಿ
ನಾಯಕತ್ವದ ಬದಲಾವಣೆ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಈವರೆಗೂ ಹೈಕಮಾಂಡ್ ನಾಯಕರು ಏನೂ ಹೇಳಿಲ್ಲ. ಹೈಕಮಾಂಡ್ ನಾಯಕರು ಸೂಕ್ತ ನಿರ್ಧಾರ ತೆಗೆದುಕೊಳ್ತಾರೆ. ಸಿಎಂ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.