ಮೈಸೂರು: ಕೋಮು ದ್ವೇಷ ಬಿತ್ತುವದಕ್ಕೆ ಬಿಜೆಪಿ ಲವ್ ಜಿಹಾದ್ ಪ್ರಸ್ತಾಪ ಮಾಡುತ್ತಿದೆ. ಬಿಜೆಪಿಯವರ ಆಗ್ರಹದಲ್ಲಿ ಕೋಮುದ್ವೇಷ ಬಿಟ್ಟರೆ ಬೇರೆ ಏನಿಲ್ಲ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯತೀಂದ್ರ, ಲವ್ ಜಿಹಾದ್ ಕಾನೂನಿಗೆ ನಮ್ಮ ತಂದೆ ವಿರೋಧ ಮಾಡಿರುವುದು ಸರಿ ಇದೆ. 18 ವರ್ಷ ಮೇಲ್ಪಟ್ಟವರು ಇಷ್ಟಪಟ್ಟವರನ್ನ ಮದುವೆಯಾಗಲು ಸಂಪೂರ್ಣ ಸ್ವತಂತ್ರರು ಎಂದು ತಂದೆ ಸಿದ್ದರಾಮಯ್ಯರ ಹೇಳಿಕೆಯನ್ನ ಸಮರ್ಥಿಸಿಕೊಂಡರು.
ನಮ್ಮ ತಂದೆ ಹಿಂದಿನಿಂದಲು ಕುರುಬರಿಗೆ ಎಸ್‍ಟಿ ಮೀಸಲಾತಿ ಪರವಾಗಿಯೇ ಇದ್ದಾರೆ. ಈಗ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಅವರದೇ ಸರ್ಕಾರವಿದ್ದರೂ ಹೋರಾಟ ಮಾಡುವ ಅಗತ್ಯವೇನಿದೆ. ನೇರವಾಗಿ ಕುರುಬರಿಗೆ ಎಸ್.ಟಿ. ಮೀಸಲಾತಿ ಜಾರಿಗೆ ತರಬಹುದು. ಇದೀಗ ಅದೇ ವಿಷಯವನ್ನಿಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ. ಬಿಜೆಪಿಗೆ ಹಣದಲ್ಲಿ ಚುನಾವಣೆ ಮಾಡಿ ಅಭ್ಯಾಸವಿದೆ. ಹಾಗಾಗಿ ನಮ್ಮ ಮೇಲೆ ಸುಳ್ಳು ಆರೋಪಗಳನ್ನ ಮಾಡುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಏನಾಗಿದೆ ಎಂಬುದನ್ನ ರಾಜ್ಯದ ಜನತೆ ನೋಡಿದ್ದಾರೆ ಎಂದು ಬಿಜೆಪಿ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಹಿಂದೂ, ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದವರು ಬಹಳ ಜನ ಇದ್ದಾರೆ: ಸಿದ್ದರಾಮಯ್ಯ