ಬೆಂಗಳೂರು: ಕಮಲ ಕ್ರಾಂತಿಯ ಗುಪ್ತ್ ಗುಪ್ತ್ ನಡೆಯ ಅಸಲಿಯತ್ತು ಕುತೂಹಲ ಕೆರಳಿಸಿದೆ. ಬಿಜೆಪಿ ಹೈಕಮಾಂಡ್ನ ಆ ಪ್ರಭಾವಿ ನಾಯಕ ಬೆಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಅವರು ಕೊಡುವ ಆ ವರದಿಯೇ ಎಲ್ಲ ಗೊಂದಲಗಳಿಗೆ ತೆರೆ ಎಳೆದುಬಿಡುತ್ತಾ ಎಂಬ ಚರ್ಚೆ ಶುರುವಾಗಿದೆ.
ಬಿಜೆಪಿಯಲ್ಲಿ ಜೂನ್ 15ರ ನಂತರ ಭಿನ್ನಮತ ಅನ್‍ಲಾಕ್ ಆಗಬಹುದು. ಅಂದ್ರೆ ಬಹಿರಂಗವಾಗಿ ಸಿಡಿಯಬಹುದು. ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ಹೈಕಮಾಂಡ್ ಮೀನಿನ ಹೆಜ್ಜೆ ಇಟ್ಟಿದೆ. ಇಲ್ಲಿ ತನಕ ತುಟಿಬಿಚ್ಚದ ಹೈಕಮಾಂಡ್ ಗುಪ್ತ್ ಗುಪ್ತ್ ವರದಿ ಸಂಗ್ರಹ ಮಾಡುತ್ತಿದೆ ಎನ್ನಲಾಗಿದೆ.
Advertisement
Advertisement
ಯಡಿಯೂರಪ್ಪ ಕಳೆದ ಭಾನುವಾರ ರಾಜೀನಾಮೆಗೆ ಸಿದ್ಧ ಎಂಬ ಸ್ಫೋಟಕ ಹೇಳಿಕೆ ಕೊಟ್ಟ ಬೆನ್ನಲ್ಲೇ ಆಲರ್ಟ್ ಆಗಿದೆ ಬಿಜೆಪಿ ಹೈಕಮಾಂಡ್. ಮಂಗಳವಾರ ಬೆಂಗಳೂರಿಗೆ ಬಂದಿದ್ದ ಬಿಜೆಪಿ ಹೈಕಮಾಂಡ್ನ ಆ ಪ್ರಭಾವಿ ನಾಯಕ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾಗೆ ಹತ್ತಿರ ಇರುವ ನಾಯಕರಾಗಿದ್ದಾರೆ. ಚಾಮರಾಜಪೇಟೆಯ ಸಂಘದ ಕಚೇರಿಯಲ್ಲಿ ಬರೋಬ್ಬರಿ ಮುಕ್ಕಾಲು ದಿನ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕಮಲ ಕ್ರಾಂತಿಯ ಮುನ್ಸೂಚನೆ ನೀಡಿದೆಯಾ ಬಿಜೆಪಿ ಹೈಕಮಾಂಡ್?
Advertisement
Advertisement
ಆರ್‌ಎಸ್‌ಎಸ್‌ನ ಕೆಲವು ಮುಖಂಡರು, ಬಿಜೆಪಿಯ ಕೆಲ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ರಾಜ್ಯದಲ್ಲಿ ಆಗ್ತಿರುವ ಬೆಳವಣಿಗೆಗಳು, ನಾಯಕತ್ವದ ಗೊಂದಲದ ಬಗ್ಗೆ ವರದಿ ಪಡೆದಿದ್ದಾರಂತೆ. ಅಷ್ಟೇ ಅಲ್ಲದೇ ಯಡಿಯೂರಪ್ಪ ಹೇಳಿಕೆಯ ಹಿಂದಿನ ಮರ್ಮವೇನು? ಯಡಿಯೂರಪ್ಪ ಸಂದೇಶ ಕೊಟ್ಟಿದ್ದು ಏಕೆ ಎಂಬುದರ ಬಗ್ಗೆಯೂ ವರದಿ ಪಡೆದಿರುವ ಆ ನಾಯಕ ಮುಕ್ಕಾಲು ದಿನ 10ಕ್ಕೂ ಹೆಚ್ಚು ಸಂಘದ ಮುಖಂಡರು, ಬಿಜೆಪಿ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಪ್ರಭಾವಿ ವ್ಯಕ್ತಿಯ ವರದಿ ಪಡೆದ ಬಳಿಕ ಬಿಜೆಪಿ ಹೈಕಮಾಂಡ್ ಎಲ್ಲವನ್ನೂ ಗುಟ್ಟಾಗಿ ಇಟ್ಟಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಿಂಗ್ ಮುಂದಿನ ವಾರ ಭೇಟಿ ನೀಡಿ ವರದಿ ಕೊಟ್ಟ ಬಳಿಕ ಏನಾದ್ರೂ ಬೆಳವಣಿಗೆ ಆಗುತ್ತಾ? ರಾಜ್ಯದಲ್ಲಿ ಸರ್ಕಾರದಲ್ಲಿ ಮತ್ತು ಪಕ್ಷದಲ್ಲಿ ಬದಲಾವಣೆಗೆ ಆ ಪ್ರಭಾವಿ ನಾಯಕನ ವರದಿಯೇ ಮುಖ್ಯವಾಗುತ್ತಾ ಎನ್ನುವ ಕುತೂಹಲಕ್ಕೆ ಕಾಲವೇ ತೆರೆ ಎಳಿಯಬೇಕಿದೆ.