ಬಿಗ್ ಬಿಗೆ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ ರಶ್ಮಿಕಾ ಮಂದಣ್ಣ

Public TV
1 Min Read
collage app

ಬೆಂಗಳೂರು: ಕೊಡಗಿನ ಬೆಡಿ ರಶ್ಮಿಕಾ ಮಂದಣ್ಣ ಮಿಷನ್ ಮಜ್ನು ಚಿತ್ರದ ಮೂಲಕವಾಗಿ ಬಾಲಿವುಡ್‍ಗೆ ಎಂಟ್ರಿಕೊಟ್ಟಿದ್ದಾರೆ. ಆದರೆ ಈಗ ಮತ್ತೊಬ್ಬ ಬಿಗ್‍ಸ್ಟಾರ್ ಜೊತೆ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ನಟ ಸಿಧಾರ್ಥ್ ಮಲ್ಹೋತ್ರಾ ನಾಯಕನಾಗಿ ನಟಿಸಿರುವ ಮಿಷನ್ ಮಜ್ನು ಚಿತ್ರದ ಮೂಲಕ ಮಂದಣ್ಣ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಇದೇ ಬೆನ್ನಲ್ಲೇ ಅಮಿತಾಭ್ ಮುಂದಿನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಸ್ವತಃ ರಶ್ಮಿಕಾ ಹೇಳಿ ಸುದ್ದಿಯಾಗಿದ್ದರು. ಇದೀಗ ಬಾಲಿವುಡ್ ಬಿಗ್ ಬಿ ಅಮಿತಾ ಬಚ್ಚನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.

rashmika 1

ಕ್ವೀನ್, ಸೂಪರ್ 30 ಗಳಂತಹ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ವಿಕಾಸ್ ಬಹ್ಲ್ ಚಿತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಅಪ್ಪ ಮಗಳ ಕಥಾಹಂದರವನ್ನು ಹೊಂದಿದೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ಕಣಿಸಿಕೊಳ್ಳುತ್ತಾರೆ. ಅಮಿತಾಬ್‍ಗೆ ರಶ್ಮಿಕಾ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ತಾತ್ಕಾಲಿಕವಾಗಿ ಈ ಸಿನಿಮಾಗೆ ಡೆಡ್ಲಿ ಎಂದು ಹೆಸರಿಡಲಾಗಿದೆ. ರಿಲಾಯನ್ಸ್ ಎಂಟರ್‍ಟೈನ್‍ಮೆಂಟ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ 2021ರ ಮಾರ್ಚ್‍ಗೆ ಸೆಟ್ಟೆರಲಿದೆ. ನೀನಾ ಗುಪ್ತಾ ಮತ್ತು ಇತರರು ಸೇರಿದಂತೆ ದೊಡ್ಡ ಸಮೂಹವೇ ಚಿತ್ರದಲ್ಲಿ ಇರಲಿದೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.

Amithab Bachchan

ತೆಲುಗು ಮತ್ತು ಕನ್ನಡ ಭಾಷೆಯ ಚಿತ್ರಗಳಲ್ಲಿ ಕೆಲಸ ಮಾಡಿದ ರಶ್ಮಿಕಾ ಮಂದಣ್ಣ 2016 ರಲ್ಲಿ ಕಿರಿಕ್ ಪಾರ್ಟಿ (ಕನ್ನಡ) ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಕೆಲವು ಯಶಸ್ವಿ ಚಲನಚಿತ್ರಗಳಾದ ಯಜಮಾನ(ಕನ್ನಡ), ಗೀತಾ ಗೋವಿಂದಂ (ತೆಲುಗು) ಮತ್ತು ದೇವದಾಸ್(ತೆಲುಗು) ಸಿನಿಮಾಗಳ ಮೂಲಕವಾಗಿ ಉತ್ತಮ ಹೆಸರನ್ನು ಮಾಡಿದ್ದಾರೆ. ಇದೀಗ ಬಾಲಿವುಡ್‍ನಲ್ಲಿ ರಶ್ಮಿಕಾ ಮಿಂಚಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *