ಮನೆಯಲ್ಲಿ ಬಿಗ್ಬಾಸ್ ಹೊಸ ಆಟವನ್ನು ಶುರು ಮಾಡಿದ್ದಾರೆ. ಬಿಗ್ಬಾಸ್ ಹೊಸ ಗೆಮ್ಪ್ಲ್ಯಾನ್ಗೆ ಸ್ಪರ್ಧಿಗಳು ಶಾಕ್ ಆಗಿದ್ದು, ಸ್ಪರ್ಧಿಗಳು ಕಣ್ಣು ಮುಚ್ಚಿ ಬಿಡುವುದರಲ್ಲಿ ಒಂದು ಚಮತ್ಕಾರವೇ ನಡೆದು ಹೋಗಿದೆ.
Advertisement
ಬಿಗ್ಬಾಸ್ ನೀಡಿದ ಹೊಸ ಟಾಸ್ಕ್ಗೆ ಸ್ಪರ್ಧಿಗಳು ಸುಸ್ತಾಗಿದ್ದಾರೆ. ನೀರು ಬರುತ್ತಿಲ್ಲ, ಅಡುಗೆ ಮನೆಯ ದಿನಸಿಸಾಮಾಗ್ರಿಗಳಿಲ್ಲ. ಜಿಮ್ ಖಾಲಿ ಖಾಲಿ, ಬಾತ್ರೂಮ್ ಕ್ಲೋಸ್, ಬಿಗ್ಬಾಸ್ ಮನೆಯನ್ನೇ ಖಾಲಿ ಖಾಲಿ ಮಾಡಿದ್ದಾರೆ. ಇದನ್ನು ನೋಡಿದ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಏನೂ ಇಲ್ಲದೆ ಹೇಗೆ ಇರುವುದು ಎಂದು ಸ್ಪರ್ಧಿಗಳು ಯೋಚನೆ ಮಾಡುತ್ತಿದ್ದಾರೆ.
Advertisement
Advertisement
ಕೆಲವೊಮ್ಮೆ ಜೀವನ ನಮ್ಮನ್ನು ಖಾಲಿ ತನಕ್ಕೆ ದೂಡಿಬಿಡುತ್ತದೆ. ಹೀಗಾಗಿ ಎಲ್ಲಾ ವಸ್ತುಗಳು ಮನೆಗೆ ತಿರುಗಿ ಪಡೆಯಬೇಕಾದರೆ ಬಿಗ್ಬಾಸ್ ನೀಡಿರುವ ಟಾಸ್ಕ್ ಗೆಲ್ಲುವ ಮೂಲಕವಾಗಿ ಅವುಗಳನ್ನು ಪಡೆದುಕೊಳ್ಳಬೇಕು. ವಿಫಲವಾದರೆ ಇಡೀ ವಾರ ಕೆಲವು ಸೌಲಭ್ಯಗಳು ಮನೆಯವರಿಗೆ ಸಿಗುವುದಿಲ್ಲ ಎಂದು ಬಿಗ್ಬಾಸ್ ಹೇಳಿದ್ದಾರೆ. ಬಿಗ್ಬಾಸ್ ಕೆಲವು ಟಾಸ್ಕ್ಗಳನ್ನು ನೀಡಿದ್ದಾರೆ. ಸ್ಪರ್ಧಿಗಳು ಮನೆಯ ವಸ್ತುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ.
Advertisement
ಬಿಗ್ಬಾಸ್ ಅಂದ್ರೆ ಸಮ್ನೆ ಅಲ್ಲಾ. ಬಿಗ್ಬಾಸ್ ಒಂದೊಂದು ಆಟವೂ ಒಂದು ಪಾಟವನ್ನು ಕಲಿಸುತ್ತದೆ. ಜೀವನದಲ್ಲಿ ಪ್ರತಿನಿತ್ಯ ಬಳಸುವ ಮತ್ತು ಅಗತ್ಯ ಇರುವ ವಸ್ತುಗಳನ್ನು ಮನುಷ್ಯ ಕಳೆದುಕೊಂಡರೆ ಹೇಗೆ ಆಗುತ್ತಾನೆ. ಕಳೆದುಕೊಂಡ ವಸ್ತುಗಳನ್ನು ಪಡೆದುಕೊಳ್ಳಲು ಏನೆಲ್ಲಾ ಸಾಹಸಗಳನ್ನು ಮಾಡುತ್ತಾನೆ ಎನ್ನುವುದನ್ನು ಬಿಗ್ಬಾಸ್ ಹೇಳಲು ಹೊರಟಂತಿದೆ. ಸ್ಪರ್ಧಿಗಳು ಬಿಗ್ಬಾಸ್ ನೀಡಿರುವ ಟಾಸ್ಕ್ನಲ್ಲಿ ಸ್ಪರ್ಧಿಗಳು ವಿನ್ ಆಗುತ್ತಾರಾ? ಮನೆಯ ಯಾವೆಲ್ಲಾ ವಸ್ತುಗಳನ್ನು ವಾಪಸ್ ಪಡೆಯಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ.