ಬಿಗ್‍ಬಾಸ್ ಮನೆಯ ದಿವ್ಯಾ ಹಾಗೂ ಅರವಿಂದ್ ಅವರನ್ನು ಮನೆ ಮಂದಿ ಕಾಲೆಳೆಯುತ್ತಿರುತ್ತಾರೆ. ಇಬ್ಬರ ನಡುವೆ ಇರುವ ಸ್ನೇಹ ಅಥವಾ ಪ್ರೀತಿಯ ಕುರಿತಾಗಿ ರಾಜೀವ್ ಹಾಗೂ ಶುಭಾ ಪೂಂಜಾ ಅವರು ದಿವ್ಯಾ ಉರುಡುಗ ಜೊತೆ ಚರ್ಚೆ ಮಾಡಿದ್ದಾರೆ. ದಿವ್ಯಾ ಬಳಿ ಅರವಿಂದ್ ‘ಆ’ ಒಂದು ವಿಚಾರದ ಕುರಿತಾಗಿ ಮಾತನಾಡಲಿದ್ದಾರೆ ಅಂತೆ.
ಇವರಿಬ್ಬರ ಆತ್ಮೀಯತೆ ಬಗ್ಗೆ ಮನೆಯ ಸದಸ್ಯರ ಬಳಿ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಲವ್‍ನಲ್ಲಿದ್ದಾರೆ ಎಂಬರ್ಥದಲ್ಲಿಯೂ ಹೇಳಿದ್ದರು. ದಿವ್ಯಾ ಉರುಡುಗ ಜೊತೆ ಶುಭಾ ಪೂಂಜಾ, ರಾಜೀವ್ ಚರ್ಚೆ ಮಾಡಿದ್ದಾರೆ. ಬಿಗ್ ಬಾಸ್ ಮುಗಿದ ನಂತರದಲ್ಲಿ ಅರವಿಂದ್ ಅವರು ದಿವ್ಯಾಗೆ ಒಂದಷ್ಟು ವಿಚಾರವನ್ನು, ಭಾವನೆಗಳನ್ನು ಹೇಳಿಕೊಳ್ಳಲಿದ್ದಾರೆ. ಆಮೇಲೆ ಯಾರ ಅಭಿಪ್ರಾಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಬಿಗ್ ಬಾಸ್‍ಗೆ ಬಂದಿದ್ದರೆ ಇದಾದ ನಂತರವೂ ಹಾಗೆ ನಡೆದುಕೊಳ್ಳಬೇಕು ಅಂತಿದ್ದರೆ ಹಳೆಯದೆಲ್ಲವನ್ನು ಬಿಟ್ಟುಬಿಡಬೇಕಾಗುತ್ತದೆ ಎಂದು ರಾಜೀವ್ ಅವರು ದಿವ್ಯಾಗೆ ಹೇಳಿದ್ದಾರೆ.
ಬ್ಯಾಕ್‍ಗ್ರೌಂಡ್ ಗೊತ್ತಿಲ್ಲದೆ, ಏನೂ ಗೊತ್ತಿಲ್ಲದೆ ಒಂದು ಹುಡುಗನನ್ನು ಲವ್ ಮಾಡೋದು ನಿಜವಾದ ಪ್ರೀತಿ. ಎಲ್ಲ ಗೊತ್ತಾದ ಮೇಲೆ ಪ್ರೀತಿ ಮಾಡೋದು ಲೆಕ್ಕಾಚಾರದ ಲವ್. ನನಗೆ ದಿವ್ಯಾ ಉರುಡುಗನಲ್ಲಿ ಈ ವಿಚಾರ ತುಂಬ ಇಷ್ಟ ಆಯ್ತು ಎಂದು ಶುಭಾ ಪೂಂಜಾ ಹೇಳಿದ್ದಾರೆ. ನನಗೆ ಪ್ರೌಢಿಮೆ ಇದೆ, ನಾನು ಸರಿಯಾದ ನಿರ್ಧಾರ ತೆಗೆದುಕೊಳ್ತೇನೆ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ.
ದಿವ್ಯಾ, ಅರವಿಂದ್ ಲವ್ ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಬೇರೆಯವರು ಈ ವಿಚಾರವನ್ನು ದಿವ್ಯಾ ಅಥವಾ ಅರವಿಂದ್ ಬಳಿ ವೈಯಕ್ತಿಕವಾಗಿ ಕೇಳಿದಾಗ ಲವ್ ಮಾಡುತ್ತಿರುವುದು ಸತ್ಯ ಎನ್ನುವ ರೀತಿಯಲ್ಲಿ ಮಾತನಾಡುತ್ತಾರೆ. ಹೀಗಾಗಿ ದಿವ್ಯಾ ಹಾಗೂ ಅರವಿಂದ್ ಲವ್ ವಿಚಾರದಲ್ಲಿ ಸ್ಪಷ್ಟನೆ ಸಿಗೋದು ಕಷ್ಟವಾಗಿದೆ. ಬಿಗ್‍ಬಾಸ್ ಮುಗಿದ ಮೇಲೆ ಅರವಿಂದ್ ದಿವ್ಯಾ ಬಳಿ ಆ ವಿಚಾರವನ್ನು ಹೇಳಿಕೊಳ್ಳುತ್ತಾರ? ಅಥವಾ ಬಿಗ್‍ಮನೆಯಲ್ಲಿಯೇ ಹೇಳಿಕೊಳ್ಳುತ್ತಾರ? ಎನ್ನುವುದನ್ನು ಕಾದುನೋಡಬೇಕಿದೆ.