ಬಿಗ್‍ಬಾಸ್ ಮನೆ ತುಪ್ಪದ ವಿಷ್ಯ ಬ್ಯಾಡವೋ ಶಿಷ್ಯ..

Public TV
1 Min Read
bigg boss 8

ಬಿಗ್‍ಬಾಸ್ ಮನೆಯಲ್ಲಿ ತುಪ್ಪದ ವಿಷ್ಯಕ್ಕೆ ಗಲಾಟೆ ನಡೆದಿದೆ. ರುಚಿಯಾದ ತುಪ್ಪ ಎಲ್ಲರ ಮನದಲ್ಲಿ ಕೊಂಚ ಬಿಸಿ ಬಿಸಿ ಮಾಡಿದ್ದಂತೂ ಸುಳ್ಳಲ್ಲ. ತುಪ್ಪಕ್ಕಾಗಿ ಮನೆ ಮಂದಿ ಕಿತ್ತಾಡಿಕೊಂಡಿದ್ದಾರೆ.

bigg boss5 mediumಹೌದು ಬಿಗ್‍ಬಾಸ್ ಮನೆಯಲ್ಲಿ ರೇಶನ್ ಒಂದು ಅಳತೆಯಲ್ಲಿ ಬರುತ್ತದೆ. ಬೇಕಾ ಬಿಟ್ಟಿಯಾಗಿ ಖರ್ಚು ಮಾಡುವಂತಿಲ್ಲ. ಮಾಡಿದರೆ ಅವರೆ ಮುಂದೆ ಮತ್ತೆ ರೇಶನ್ ಬರುವವರೆಗೂ ಅದೇ ಸಾಮಾಗ್ರಿಗಳಲ್ಲಿ ಅಡುಗೆ ಮಾಡಿಕೊಂಡು ಹೋಗಬೇಕು. ಆದರೆ ಒಂಟಿ ಮನೆಯ ಸದಸ್ಯರು ತುಪ್ಪ ಖಾಲಿ ಆಗಿದೆ ಎಂದು ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದಾರೆ.

bigg boss2 medium

ಪ್ರಶಾಂತ್ ಸಂಬರಗಿ ಮನೆಯವರಿಗಾಗಿ ತಪ್ಪು ಉಪಯೋಗಿಸಿ ಹೊಸ ಅಡುಗೆ ಮಾಡಿದ್ದಾರೆ. ಶುಭಾ ಪೂಂಜಾ, ನಿಧಿ, ಚಂದ್ರಕಲಾ ಮೋಹನ್ ಮನೆಯಲ್ಲಿರುವ ತುಪ್ಪ ಖಾಲಿ ಆಗಿದೆ ಎಂದು ಹೇಳಿದ್ದಾರೆ. ಈ ವೇಳೆ ಮನೆ ಮಂದಿ ಎಲ್ಲ ಪ್ರಶಾಂತ್ ಮಾಡಿಕೊಟ್ಟಿರುವ ತಿಂಡಿಯನ್ನು ತಿಂದು ಮತ್ತೆ ತುಪ್ಪವನ್ನು ಖಾಲಿ ಮಾಡಿದ್ದೀರಾ ಎಂದು ಬೆರಳು ಮಾಡಿ ತೋರಿಸಿದ್ದಾರೆ. ಒಬ್ಬರು ಒಂದೊಂದು ರೀತಿಯಾಗಿ ಮಾತನಾಡಿದ್ದಾರೆ. ಸಂಬರಗಿ ಮಾತ್ರ ನಾನು ತಪ್ಪವನ್ನು ಬಳಕೆಯೆ ಮಾಡಿಲ್ಲ ಎಂದು ಜಾರಿಕೊಂಡ್ರು.

bigg boss3 medium

ಮನೆಯಲ್ಲಿ ಎಲ್ಲರಿಗೂ ಅಡುಗೆಯನ್ನು ಮಾಡುತ್ತಾರೆ ಅದನ್ನು ಎಲ್ಲರೂ ತಿನ್ನಬೇಕು. ನಾವು ನಮಗೆ ಬೇಕಾದದ್ದನ್ನು ಹೋಗಿ ಮಾಡಿಕೊಂಡು ತಿನ್ನ ಬಾರದು. ಎಲ್ಲರೂ ಹೊಂದಿಕೊಂಡು ಹೋಗೋಣ ಎಂದು ಮನೆಯ ಕ್ಯಾಪ್ಟನ್ ಅರವಿಂದ್ ಹೇಳಿದ್ದಾರೆ. ಮನೆಯ ಸದಸ್ಯರೆಲ್ಲ ಈ ವಿಚಾರವಾಗಿ ಒಪ್ಪಿಕೊಂಡಿದ್ದಾರೆ.

ನಿಧಿ, ಶುಭಾ ವಾದ ಮನೆಗೆ ಬರುವ ರೇಶನ್ ಬಳಕೆ ಸರಿಯಾಗಿ ಆಗಬೇಕು, ಎಲ್ಲರಿಗೂ ಸಿಗಬೇಕು ಎನ್ನುತ್ತಾರೆ. ಆದರೆ ಮನೆಮಂದಿ ಮಾತ್ರ ಈ ವಿಚಾರವನ್ನು ಅರ್ಥ ಮಾಡಿಕೊಳ್ಳದೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಮಾತಾಡಿದ್ದರಿಂದ ಡೊಡ್ಡ ಮನೆಯಲ್ಲಿ ಡೊಡ್ಡದಾಗಿಯೇ ಒಂದು ಗಲಾಟೆ ಆಗಿದೆ.

bigg boss8 medium

ಆದರೆ ನಿನ್ನೆ ಪೂರ್ತಿಯಾಗಿ ಮನೆ ಮಂದಿ ಮಾತನಾಡಿಕೊಂಡಿದ್ದೇಲ್ಲ ತುಪ್ಪದ್ದೇ ವಿಚಾರ. ತುಪ್ಪ ಖಾಲಿಯಾಗಿದೆ ಎಂದು ಮನೆಯಲ್ಲಿ ಒಂದು ಡ್ರಾಮಾವೇ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *