ಬಿಗ್‍ಬಾಸ್ ಮನೆಯ ಸ್ಪರ್ಧಿಗಳು ವಾರಂತ್ಯದಲ್ಲಿ ಬರುವ ಸೂಪರ್ ಸಂಡೇ ವಿತ್ ಸುದೀಪಾದಲ್ಲಿ ಎಲಿಮಿನೇಟ್ ಆಗಿ ಒಬ್ಬ ಸದಸ್ಯ ಮನೆಯಿಂದ ಆಚೆ ಬರಬೇಕಿತ್ತು. ಆದರೆ ಈ ವಾರ ಒಂದು ಟ್ವೀಸ್ಟ್ ಇರಲಿದೆ. ನಿಮ್ಮಲ್ಲಿಯೇ ಒಬ್ಬರು ಇದ್ದಕ್ಕಿದ್ದಂತೆ ಆಚೆ ಹೋಗಲಿದ್ದಾರೆ ಎಂದು ಹೇಳಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಶುಭಾ ಕಾಣೆಯಾಗಿದ್ದಾರೆ.
ಈ ವಾರ ಪ್ರಶಾಂತ್ ಸಂಬರಗಿ, ಶುಭಾ ಪೂಂಜಾ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ದಿವ್ಯಾ ಉರುಡುಗ ನಾಮಿನೇಷನ್ ಲಿಸ್ಟ್‌ನಲ್ಲಿದ್ದಾರೆ. ಇವರಲ್ಲಿ ಒಬ್ಬರು ವೇದಿಕೆ ಏರದೇ ನೇರವಾಗಿ ಎಲಿಮಿನೇಟ್ ಆಗುತ್ತಿದ್ದಾರೆ. ಹೀಗೆ ಎಲಿಮಿನೇಟ್‍ಆಗುವ ಸ್ಪರ್ಧಿ ಯಾವಾಗ ಬೇಕಾದರೂ, ಹೇಗೆ ಬೇಕಾದರೂ ಬಿಗ್ ಬಾಸ್ ಮನೆಯಿಂದ ಹೊರ ಹೋಗಬಹುದು ಎಂದು ಸುದೀಪ್ ಹೇಳಿದ್ದರು.
View this post on Instagram
ಈ ವಿಚಾರದ ಬಗ್ಗೆ ಬಿಗ್‍ಬಾಸ್ ಮನೆಯಲ್ಲಿ ಚರ್ಚೆ ಆಗಿತ್ತು. ಕಳೆದ ಸೀಸನ್‍ನಲ್ಲಿ ಹರೀಶ್ ರಾಜ್ ಅವರನ್ನು ಕ್ರೇನ್ ಮೂಲಕ ಬಿಗ್ ಬಾಸ್ ಮನೆಯಿಂದ ಹೊರಗೆ ಕರೆತರಲಾಗಿತ್ತು ಎಂದು ಚಕ್ರವರ್ತಿ ಹಳೆಯ ಸೀಸನ್ ಘಟನೆಯನ್ನು ವಿವರಿಸಿದರು. ಈ ಬಾರಿಯೂ ಅದೇರೀತಿ ಆಗಬಹುದು ಎಂದು ಕೆಲವರು ಅನುಮಾನ ಹೊರ ಹಾಕಿದರು. ಯಾವಾಗ ಯಾವ ಕ್ಷಣದಲ್ಲಿ ಯಾರು ಮನೆಯಿಮದ ಆಚೆ ಹೋಗುತ್ತೇವೆ ಎನ್ನುವ ಭಯದಲ್ಲಿ ಸ್ಪರ್ಧಿಗಳಿದ್ದಾರೆ. ಆದರೆ ಇದೀಗ ಶುಭಾ ಬಿಗ್‍ಬಾಸ್ ಮನೆಯಿಂದ ಕಾಣೆಯಾಗಿದ್ದಾರೆ. ಇದು ಸ್ಪರ್ಧಿಗಳ ಆತಂಕಕ್ಕೆ ಕಾರಣವಾಗಿದೆ.
ಶುಭಾ ಕಾಣುತ್ತಿಲ್ಲ. ಹಾಗಂತ ಅವರು ಎಲಿಮಿನೇಷನ್ ಆಗಿಲ್ಲ. ಬದಲಿಗೆ ಅಡಗಿ ಕೂತಿದ್ದಾರೆ. ಸುದೀಪ್ ಕಡೆಯಿಂದ ವಿಶೇಷ ಆದೇಶ ಬಂದ ಬೆನ್ನಲ್ಲೇ ಶುಭಾ ಅವರು ನಾನು ಮನೆಯಲ್ಲಿ ಅಡಗುತ್ತೇನೆ. ಈ ಮೂಲಕ ಸ್ಪರ್ಧಿಗಳಿಗೆ ಶಾಕ್ ನೀಡುತ್ತೇನೆ ಎಂದು ಶಮಂತ್ ಬಳಿ ಹೇಳಿಕೊಂಡಿದ್ದರು. ಈಗ ಹಾಗೆಯೇ ಮಾಡಿದ್ದಾರೆ. ಅವರು ಕಾಣೆ ಆಗಿದ್ದಾರೆ ಎಂದು ತಿಳಿದ ಮನೆ ಮಂದಿ ಶುಭಾಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕೆಲವರು ಶುಭಾ ಅವರೇ ಎಲಿಮಿನೇಟ್ ಆಗಿದ್ದಾರೆ ಎನ್ನುವ ಭಯದಲ್ಲಿದ್ದಾರೆ. ಶುಭಾಗಾಗಿ ಮನೆಂದಿ ಹುಡುಕುತ್ತಿದ್ದಾರೆ ಆದರೆ ಶುಭಾ ಪೂಂಜಾ ಮಾತ್ರ ಅಡಗಿ ಕುಳಿತು ಸ್ಪರ್ಧಿಗಳನ್ನು ಆಟವಾಡಿಸುತ್ತಿದ್ದಾರೆ.