ಬಿಗ್ಬಾಸ್ ಮನೆಯ ವಾರದ ಕಟ್ಟೆ ಪಂಚಾಯ್ತಿಯಲ್ಲಿ ಇನ್ಟ್ರೆಸ್ಟಿಂಗ್ ವಿಚಾರಗಳು ಹೊರ ಬಂದಿವೆ. ಅಂತಹ ಇನ್ಟ್ರಸ್ಟಿಂಗ್ ವಿಚಾರದಲ್ಲಿ ಬಿಗ್ಬಾಸ್ ಮನೆಯ ಮದುವೆ ವಿಚಾರವು ಒಂದು.
Advertisement
ಬಿಗ್ಬಾಸ್ ಮನೆ ಮದುವೆ ಶಾಸ್ತ್ರ ಹೇಗಿರುತ್ತೆ!
Advertisement
ಒಂಟಿ ಮನೆಯಲ್ಲಿ ಮದುವೆ ನಡೆದರೆ ಹೇಗಿರುತ್ತೇ ಎಂದು ಸ್ವಲ್ಪ ಹೇಳಿ ಮಂಜು ಎಂದು ಸುದೀಪ್ ಹೇಳಿದ್ದಾರೆ. ಆಗ ಮಂಜು ತಮ್ಮದೆ ಆಗಿರುವ ಹಾಸ್ಯದ ಶೈಲಿಯಲ್ಲಿ ಸರ್ ಚಂಡೆಶ್ವರ ಅಂತಾ ಒಂದು ಟಾಸ್ಕ್ ನೀಡಿದ್ದರು. ಇಂತಹ ಸಮಯದಲ್ಲಿ ಮದುವೆ ಏನಾದರೂ ನಡೆಯುತ್ತಿದ್ದರೆ. ಒಂದು ಬಜರ್ ಆದರೆ ಮದುವೆ ನೂ ಬೇಡಾ ಏನೂ ಬೇಡಾ ಅಂತಾ ತಾಳಿಯನ್ನು ಎಸೆದು ಓಡಿ ಹೋಗುತ್ತೇವೆ ಸರ್ ಎಂದಿದ್ದಾರೆ. ಸುದೀಪ್ ಮಂಜು ಅವರ ಮಾತನ್ನು ಕೇಳಿ ನಕ್ಕು ಸಖತ್ ಎಂಜಾಯ್ ಮಾಡಿದ್ದಾರೆ.
Advertisement
Advertisement
ತಾಳಿ ಕಟ್ಟಿ ಆದ್ಮೆಲೆ ಮುಯ್ಯಿ ತಂದಿರೋರು ಮಂದೆ ಬನ್ನಿ ತರದೇ ಇರೋರು ಹಿಂದೆ ಹೋಗಿ ಎಂದು ಬಿಗ್ ಬಾಸ್ ಒಂದು ಧ್ವನಿಯಲ್ಲಿ ಹೇಳುತ್ತಾರೆ ಎಂದು ಮಂಜು ಹೇಳಿದಾಗ ಮನೆ ಮಂದಿ ನಕ್ಕಿದ್ದಾರೆ.
ಮದುವೆ ನಂತರ ಎಲ್ಲಾ ಕಂಟೆಸ್ಟಂಟ್ನ ಕ್ಯಾಮೆರಾ ಮುಂದೆ ನಿಂತು ಹೊಸದಾಗಿ ಮದುವೆಯಾದ ಜೋಡಿಗೆ ಬೇಡ್ರೂಮ್ ಬಿಟ್ಟುಕೊಡುತ್ತೆವೆ ಎಂದು ಹೇಳಲು ಸಾಧ್ಯವೆ ಇಲ್ಲ ಎಂದು ಕಿಚ್ಚ ನಗೆ ಚಟಾಕೆಯನ್ನು ಹಾರಿಸಿದ್ದಾರೆ.
ಬೆಡ್ ರೂಮ್ ಬಿಟ್ಟು ಕೊಡುತ್ತೇವೆ ಎಂದು ಹೇಳಲು ಸಾಧ್ಯವೆ ಇಲ್ಲ. ಏನೆ ಆದ್ರು ನಾವು ಅಲ್ಲೆ ಇರುತ್ತೇವೆ ಏನ್ ಬೇಕಾದ್ರು ಮಾಡಿ ಎಂದು ಹೇಳುತ್ತಿರಾ. ಶಮಂತ್ ಹಾಗೇ ಮಾಡಿದ್ದಾರೆ ನಿಮಗೆ ಎಂದು ಕಿಚ್ಚಾ ಹೇಳಿದ್ದಾರೆ. ಈ ವೇಳೆ ಮನೆ ಮಂದಿ ಹೌದು ಸರ್ ಎನ್ನುತ್ತಾ ಎಲ್ಲರೂ ನಕ್ಕಿದ್ದಾರೆ.
ಬಿಗ್ಬಾಸ್ ಮನೆ ನಿಯಮ ಅಂದ್ರೆ ಅಷ್ಟೊಂದು ಕಟ್ಟು ಪಾಡುಗಳಿಂದ ಕೂಡಿರುತ್ತದೆ. ಈ ಮನೆಯ ನಿಯಮಗಳನ್ನು ಪಾಲಿಸುತ್ತಾ ಮದುವೆ ಏನಾದರೂ ಮಾಡಿದರೆ, ಮಧ್ಯದಲ್ಲಿ ಬಿಗ್ಬಾಸ್ ಧ್ವನಿ ಏನಾದರೂ ಬಂದರೆ ಸ್ಫರ್ಧಿಗಳು ಹೇಗೆ ರಿಯ್ಯಾಕ್ಸನ್ ಮಾತ್ರ ಸಖತ್ ಮಜವಾಗಿರುತ್ತದೆ.