ಬಿಗ್‍ಬಾಸ್ ಮನೆಯಲ್ಲಿ ಚಕ್ರವರ್ತಿ ಇನ್ಮುಂದೆ ಸರ್ವಾಧಿಕಾರಿ

Public TV
2 Min Read
chakravarthy chandrachud

ಬಿಗ್‍ಬಾಸ್ ಕನ್ನಡ ಸೀಸನ್ 8ರ ಮನೆಯಲ್ಲಿ ವೈಲ್ಡ್‍ಕಾರ್ಡ್ ಮೂಲಕವಾಗಿ ಎಂಟ್ರಿಕೊಟ್ಟು ಸಖತ್ ಸುದ್ದಿಯಲ್ಲಿರುವ ಚಕ್ರವರ್ತಿ ಚಂದ್ರಚೂಡ್ ಅವರು ಕಳಪೆ ಪ್ರದರ್ಶನ ತೋರಿ ಜೈಲು ಸೇರಿದ್ದಾರೆ. ಅವರ ವರ್ತನೆ ಮನೆಯ ಸದಸ್ಯರಿಗೆ ಹಿಡಿಸಿಲ್ಲ. ಆದರೆ ಚಕ್ರವರ್ತಿಯವರು ಜೈಲಿನಲ್ಲಿ ಇದ್ದುಕೊಂಡು ನಿಜವಾದ ಆಟ ಆಡುವ ಎಂದು ಪ್ಲ್ಯಾನ್ ಹಾಕಿದ್ದಾರೆ.

bigg boss 14

ಬಿಗ್‍ಬಾಸ್ ಮನೆ ಪ್ರವೇಶ ಮಾಡಿದಕೂಡಲೇ ಎಲ್ಲರೂ ಯೋಚನೆ ಮಾಡುವ ಶೈಲಿ ಬದಲಾಯ್ತು, ಮನೆಯ ಸದಸ್ಯರು ಬೇರೆ ಬೇರೆ ಆಗಿ ಗ್ರೂಪ್ ಮಾಡಿಕೊಂಡರು. ಎಲ್ಲರ ನಡುವೆ ಮನಸ್ತಾಪ ಶುರುವಾಯ್ತು. ಚಕ್ರವರ್ತಿ ಬಂದನಂತರ ಮನೆಯ ವಾತಾವರಣವೇ ಬದಲಾಯ್ತು ಅಂತ ಕೂಡ ಮನೆಯ ಸದಸ್ಯರು ಹೇಳಿದ್ದಾರೆ. ಒಟ್ಟಿನಲ್ಲಿ ಅತಿ ಕಡಿಮೆ ಸಮಯದಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರ ವರ್ತನೆ ಅನೇಕರಿಗೆ ಇಷ್ಟವಾಗಿಲ್ಲ. ಚಕ್ರವರ್ತಿ ಅವರು ಬಂದ ಕೆಲವೇ ದಿನಗಳಲ್ಲಿ ಅವರ ಆಟವನ್ನು ಶುರು ಮಾಡಿದ್ದಾರೆ.

chakravarthy chandrachud2

ಚಕ್ರವರ್ತಿ ಅವರು ಜಗಳ ಆಡಿದ್ದಾರೆ, ನೇರವಾಗಿ ಬೇರೆಯವರ ಮನಸ್ಸಿಗೆ ಬೇಸರ ಆಗುವಂತೆ ಕಾಮೆಂಟ್ ಕೂಡ ನೀಡಿದ್ದರು ಎಂದು ಸ್ಪರ್ಧಿಗಳು ಹೇಳಿದ್ದಾರೆ. ಜೈಲಿಗೆ ಸೇರಿದ್ದು ಚಕ್ರವರ್ತಿಗೆ ಸಿಟ್ಟು ತರಿಸಿದೆ. ಸರ್ವಾಧಿಕಾರಿ ಆಗಿ ಮುಂದೆಯೂ ಇರ್ತೀನಿ, ವಾರ ವಾರ ಜೈಲಿಗೆ ಬರ್ತೀನಿ, ಎಲ್ಲರಿಗೂ ಉತ್ತರ ಕೊಡ್ತೀನಿ ಅಂತ ಚಕ್ರವರ್ತಿ ಹೇಳಿದ್ದಾರೆ.

ಚಕ್ರವರ್ತಿ ಅವರು ಜೈಲಿನಲ್ಲಿ ತರಕಾರಿ ಹೆಚ್ಚಿಕೊಡಬೇಕಿದೆ. ಅವರಿಗೆ ನೀಡಿದ್ದ ಜೈಲಿನ ಟೋಪಿಯ ಅಳತೆ ಸರಿ ಇಲ್ಲವಂತೆ, ಮುಂದಿನ ಬಾರಿ ಟೋಪಿಯ ಸೈಜ್ ಬೇರೆ ಕೊಡಬೇಕು ಎಂದು ಚಕ್ರವರ್ತಿ ಹೇಳಿದ್ದಾರೆ. ಒಟ್ಟಿನಲ್ಲಿ ಕಳಪೆ ಪಟ್ಟ ನೀಡಿರೋದು ಚಕ್ರವರ್ತಿ ಚಂದ್ರಚೂಡ್ ಅವರಿಗೆ ಬೇಸರ ತರಿಸಿದೆ. ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್, ಮಂಜು ಪಾವಗಡ, ದಿವ್ಯಾ ಉರುಡುಗ ಮುಂತಾದವರು ಚಕ್ರವರ್ತಿಗೆ ಕಳಪೆ ಪಟ್ಟ ನೀಡಿದ್ದರು. ದಿವ್ಯಾ ಅವರು ಬಿಟ್ಟಿ ಸಲಹೆ ನೀಡ್ತಾರೆ ಅಂತ ಕಾಮೆಂಟ್ ಮಾಡಿದ್ದು ಚಕ್ರವರ್ತಿ ಕೋಪವನ್ನು ತಾರಕಕ್ಕೇರಿಸಿದೆ.

ನಾನು ತರಕಾರಿ ಕಟ್ ಮಾಡಿಕೊಟ್ಟ್ರೆ ಇವರಿಗೆ ಊಟಾ ಎಂದರೆ ನಾನು ಕಟ್ ಮಾಡಿಕೊಡುವುದಿಲ್ಲ. ನನ್ನ ಜೈಲುವಾಸಕ್ಕೆ ಕಾರಣವಾಗಿರುವ ಪ್ರತಿಯೊಬ್ಬರಿಗೂ ನಿದ್ದೆ ಕೆಡಿಸುತ್ತೇನೆ ಇದು ನನ್ನ ಶಪಥ. ಜೈಲಿಗೆ ಹಾಕಿದ್ರೆ ಪ್ರತಿವಾರ ವಿಚಿತ್ರ ಮಾಡುತ್ತೇನ. ಪ್ರತಿವಾರ ಇನ್ನು ಚಳುವಳಿ ನಡೆಯುತ್ತದೆ ಎಂದು ಚಕ್ರವರ್ತಿ ಹೇಳಿದ್ದಾರೆ. ಈ ವೇಳೆ ಮನೆ ಮಂದಿ ನಕ್ಕು ಸುಮ್ಮನಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *