ಬಿಗ್‍ಬಾಸ್ ಮನೆಯಲ್ಲಿ ಅರವಿಂದ್‍ಗೆ ಸ್ಲೆಡ್ಜಿಂಗ್ ಮಾಡಿದ್ಯಾರು?

Public TV
1 Min Read
arvindh

ಬೆಂಗಳೂರು: ಬಿಗ್ ಮನೆಯಲ್ಲಿ ಹೊಸ ಕ್ಯಾಪ್ಟನ್‍ನ ನೇಮಕವಾಗಿದೆ. ಅರವಿಂದ್ ಅವರಿಗೆ ಕ್ಯಾಪ್ಟನ್ ಪಟ್ಟ ಸಿಗುತ್ತಿದ್ದಂತೆ ಕೆಲವರು ಸಂತೋಷ ಪಟ್ಟರೆ ಕೆಲವರು ತಮ್ಮ ಅಸಮಾಧಾನವನ್ನು ತೋರ್ಪಡಿಸಿದರು. ಈ ನಡುವೆ ಅರವಿಂದ್ ನನ್ನನ್ನು ಸ್ಪರ್ಧಿಯೊಬ್ಬರು ಸ್ಲೆಡ್ಜಿಂಗ್ ಮಾಡಲು ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.

arvindh 3

ಜೋಡಿ ಟಾಸ್ಕ್‍ನಲ್ಲಿ ಜೋಡಿಯಾಗಿ ಸ್ಪರ್ಧಿಸಿದ್ದ ಅರವಿಂದ್ ಮತ್ತು ದಿವ್ಯ ಉರುಡುಗ ತಡರಾತ್ರಿ ಮಾತಿಗಿಳಿಯುತ್ತಿದ್ದಂತೆ, ಇಂದು ಕ್ಯಾಪ್ಟನ್ ಆಗಿರುವ ಖುಷಿಗೆ ಚೆನ್ನಾಗಿ ನಿದ್ದೆ ಮಾಡಿ, ನನಗೆ ನೀವು ಮನೆಯ ಕ್ಯಾಪ್ಟನ್ ಆಗಿರುವುದು ತುಂಬಾ ಖುಷಿ ಕೊಟ್ಟಿದೆ ಎಂದು ದಿವ್ಯ ಅರವಿಂದ್ ಜೊತೆ ಸಂತೋಷ ಹಂಚಿಕೊಂಡರು. ಈ ವೇಳೆ ಅರವಿಂದ್ ಖುಷಿ ಸದ್ಯಕ್ಕೆ ಏನಿಲ್ಲ. ಮುಂದಿನ ದಿನಗಳಲ್ಲಿ ಖುಷಿ ಆಗಬಹುದು. ನಾನು ಕ್ಯಾಪ್ಟನ್ ಆಗಿರುವುದರಿಂದ ಕೆಲವರು ಸಪ್ಪೆ ಮೋರೆ ಹಾಕಿಕೊಂಡು ಕೂತಿದ್ದಾರೆ ಎಂದರು.

arvindh 2

ನಂತರ ದಿವ್ಯ ಉರುಡುಗ ಅರವಿಂದ್ ನೀವು ಕ್ಯಾಪ್ಟನ್ ಆಗುತ್ತಿದ್ದಂತೆ, ನಿಧಿ ಸುಬ್ಬಯ್ಯ ಮಂಜ ಯೂ ಮೈ ಟೂ ಕ್ಯಾಪ್ಟನ್ ಎಂದು ಹೇಳಿದರು ಇದನ್ನು ನೋಡಿದರೆ ನಿಧಿಗೆ ನೀವು ಕ್ಯಾಪ್ಟನ್ ಆಗಿರುವುದು ಇಷ್ಟ ಆಗಿಲ್ಲ ಅನಿಸುತ್ತೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅರವಿಂದ್ ನಿಧಿ ನನಗೆ ಸ್ಲೆಡ್ಜಿಂಗ್ ಮಾಡಲು ಯತ್ನಿಸುತ್ತಿದ್ದಾಳೆ. ಅವಳಿಗೆ ಗೊತ್ತಿಲ್ಲ ನಾನು ಯಾರು ಅಂತ, ಅವಳು ಆ ರೀತಿ ಇರುವುದಕ್ಕೆ ಬಿಗ್ ಬಾಸ್ ಮನೆಯಲ್ಲಿ ಇರುವುದೆಂದು ಅಭಿಪ್ರಾಯ ಹಂಚಿಕೊಂಡರು.

ಪ್ರತಿ ದಿನ ನಡೆಯುವ ಟಾಸ್ಕ್ ಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಒಬ್ಬರಲ್ಲ ಒಬ್ಬರ ಅಸಲಿ ಮುಖ ಕಾಣಿಸುತ್ತಿದೆ. ಬಿಗ್ ಮನೆಯಲ್ಲಿರುವ ಕೆಲವರಿಗೆ ಕೆಲವರನ್ನು ಕಂಡರೆ ಇಷ್ಟವಾದರೆ ಕೆಲವರಿಗೆ ಹೊಟ್ಟೆಯುರಿ ಇದ್ದಂತಿದೆ. ಇದು ಮುಂದಿನ ದಿನಗಳಲ್ಲಿ ಹೇಗೆ ಮುಂದುವರಿಯುತ್ತದೆ ಎಂಬುದನ್ನು ಕಾದು ನೋಡ ಬೇಕಾಗಿದೆ.

Share This Article