ಬೆಂಗಳೂರು: ಬಿಗ್ ಮನೆಯಲ್ಲಿ ಹೊಸಹೊಸ ಘಟನೆಗಳು ನಡೆಯುತ್ತಿರುವಾಗಲೇ ಲೈಕ್ ಮತ್ತು ಡಿಸ್ ಲೈಕ್ ಸರದಿ ಬಂದಿದೆ. ಯಾರು ಯಾರನ್ನು ಇಷ್ಟ ಪಡುತ್ತಾರೆ, ಯಾರನ್ನು ಡಿಸ್ ಲೈಕ್ ಮಾಡುತ್ತಾರೆ ಎಂಬ ಟಾಸ್ಕ್ ಕೊಟ್ಟಂತೆ ಬಿಗ್‍ಬಾಸ್ ಸ್ಪರ್ಧಿಯೊಬ್ಬರು ಯುದ್ಧಕ್ಕೆ ಹೊರಟಂತೆ ನನ್ನ ಕಾಳಿಗೆ ಬಿದ್ದು ಆರ್ಶೀವಾದ ಪಡೆದಿದ್ದಾರೆ ಎಂದು ಅಶ್ವಥ್ ಅವರು ಗೀತಾ ಅವರನ್ನು ಲೈಕ್ ಮಾಡಿದ್ದಾರೆ. ಈ ಹಿಂದೆ ಗೀತಾ ಅವರು ಟಾಸ್ಕ್ ಮಾಡಲು ಹೊರಡುವ ಮುಂದೆ ಅಶ್ವಥ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದರು.
ಬಿಗ್ ಮನೆಗೆ ಬಂದು ಕೆಲದಿನಗಳು ಕಳೆದಂತೆ ಸ್ಪರ್ಧಿಗಳು ಒಬ್ಬರೊನ್ನೊಬ್ಬರು ಅರ್ಥಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಶಂಕರ್ ಅಶ್ವಥ್ ಲೈಕ್ ಕೊಡುವ ಮೊದಲು ಸ್ಪರ್ಧಿಯ ಗುಣವನ್ನು ಸರಿಯಾಗಿ ಅರ್ಥೈಸಿಕೊಂಡು ಅವರನ್ನು ಮಗುವಿಗೆ ಹೊಲಿಕೆ ಮಾಡಿ ಲೈಕ್ ಕೊಟ್ಟಿದ್ದಾರೆ. ಶಂಕರ್ ಅವರ ಪ್ರಕಾರ ಗೀತಾ ಅವರ ಮನಸ್ಸು ಮಗುವಿನಂತೆ ಪರಿಶುದ್ಧವಾಗಿ ಇದೆಯಂತೆ ಹಾಗಾಗಿ ಅಶ್ವಥ್ ಗೀತಾ ಅವರಿಗೆ ಲೈಕ್ ಕೊಟ್ಟು ಪ್ರೋತ್ಸಾಹ ನೀಡಿದ್ದಾರೆ.
ಅಶ್ವಥ್ ಅವರು ಮಗುವಿನ ಮನಸ್ಸಿನ ಗೀತಾ ಅವರಿಗೆ ಲೈಕ್ ಕೊಟ್ಟರೆ, ಮಂಜು ಅವರು ರಾತ್ರಿ ಗೊರಕೆ ಹೊಡೆಯುವ ಕಾರಣದಿಂದ ನನಗೆ ತೊಂದರೆಯಾಗುತ್ತಿದೆ ಎಂದು ಕಾರಣ ಹೇಳಿ ಡಿಸ್‍ಲೈಕ್ ಕೊಟ್ಟಿದ್ದಾರೆ. ಅಷ್ಟೆ ಅಲ್ಲದೆ ಅಶ್ವಥ್ ಅವರ ಪ್ರಕಾರ ಮಂಜು ಅವರೇ ಈ ಬಾರಿಯ ವಿನ್ನರ್ ಆಗುತ್ತಾರೆ ಎಂಬ ಭವಿಷ್ಯವನ್ನು ನುಡಿದ್ದಾರೆ. ಆದರೆ ಅಶ್ವಥ್ ಅವರ ಭವಿಷ್ಯ ನಿಜವಾಗುತ್ತೋ, ಸುಳ್ಳಾಗೊತ್ತೋ ಅನ್ನೋದನ್ನು ನೋಡಲು 100 ನೇ ದಿನದವರೆಗೆ ಕಾಯಲೇ ಬೇಕು.