ಬಿಗ್‍ಬಾಸ್ ಮನೆಯಲ್ಲಿ ಅತ್ಯಂತ ಕ್ಯೂಟ್, ಕೂಲ್ ಆಗಿರುವ ಸ್ಪರ್ಧಿ ಎಂದರೆ ಶುಭಾ. ಮಗುವಿನಂತೆ ಹಟಾ ಮಾಡುತ್ತಾ, ಬಿಗ್‍ಬಾಸ್ ಜೊತೆಗೆ ಕಿತ್ತಾಟ ಮಾಡುವ ಶುಭಾ ಇಂದು ಬಿಗ್‍ಬಾಸ್‍ಗೆ ದಾರಿ ತೋರಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
Advertisement
ಬಿಗ್‍ಬಾಸ್ ಮನೆಗೆ ಎಂಟ್ರಿಕೊಟ್ಟಾಗ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಲಾಗಿತ್ತು. ಯಾವ ಸ್ಪರ್ಧಿ ಬರುತ್ತಾರೆ? ಯಾವ ಬಾಗಿಲಿನಿಂದ ಬರುತ್ತಾರೆ? ಎನ್ನುವುದನ್ನು ಸರಿಯಾಗಿ ಹೇಳಬೇಕು. ಬಿಗ್‍ಬಾಸ್ ಇದಕ್ಕೆ ನಾಲ್ಕೂ ಆಯ್ಕೆಗಳನ್ನೂ ನೀಡಿದ್ದರು. ಸರಿಯಾದ ಉತ್ತರ ನೀಡಿದ ಸ್ಪರ್ಧಿಗಳಿಗೆ ಲಕ್ಷುರಿ ಕೂಪನ್ ನೀಡಲಾಗಿತ್ತು. ಈ ಕೂಪನ್ ಬಳಸಿಕೊಂಡು ತಿನಿಸು, ಅಡಿಗೆ ಸಾಮಗ್ರಿಗಳನ್ನೂ ಪಡೆಯ ಬಹುದಾಗಿತ್ತು. ಹೀಗೆ ಈ ಆಟದಲ್ಲಿ ಗೆದ್ದ ವೈಷ್ಣವಿ, ನಿಧಿ ಸುಬ್ಬಯ್ಯ, ಶಮಂತ್ ಹೀಗೆ ಹಲವು ಸದಸ್ಯರಿಗೆ ಕೂಪನ್ ನೀಡಲಾಗಿತ್ತು. ಇದನ್ನು ಬಳಸಿಕೊಂಡು ಸ್ಪರ್ಧಿಗಳು ಕೆಲವು ತಿನಿಸುಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಮಟನ್, ಪಿಜಾ ತಿಂದಿರುವ ಸ್ಪರ್ಧಿಗಳು ಇದೀಗ ಚಿಕನ್ ಕೇಳಿರುವುದು ಸಖತ್ ಮಜವಾಗಿದೆ.
Advertisement
Advertisement
ಬಿಗ್‍ಬಾಸ್ ನಾವು ಲಕ್ಷುರಿ ಬಜೆಟ್ ಕೂಪನ್‍ಅಲ್ಲಿ ಮನೆಯವರಿ ಚಿಕನ್ ಕೇಳುತ್ತಿದ್ದೇವೆ. ಸ್ವಲ್ಪ ಜಾಸ್ತಿ ಚಿಕನ್ ಕಳುಹಿಕೊಡಿ ಬಿಗ್‍ಬಾಸ್. ಈಗಲೇ ಕಳುಹಿಸಿಕೊಟ್ಟರೇ ನಾವು ಮಧ್ಯಾಹ್ನಕ್ಕೆ ಮಾಡುತ್ತೇವೆ. ಚಿಕನ್ ಅಂಗಡಿ ದೂರ ಇಲ್ಲ ಬಿಡದಿ ಹತ್ರ ಹೀಗೆ ನೇರವಾಗಿ ಹೋಗಿ ಲೆಫ್ಟ್ ತಿರುಗಿದರೆ ಚಿಕನ್ ಅಂಗಡಿ ಇದೆ ಅಲ್ಲಿಂದ ತರಿಸಿಕೊಡಿ ಎಂದು ಶುಭಾ ತುಂಬಾ ಕ್ಯಾಟ್ ಆಗಿ ಬಿಗ್‍ಬಾಸ್‍ಗೆ ಆರ್ಡರ್ ಮಾಡುವುದರ ಜೊತೆಗೆ ಮನವಿಯನ್ನು ಮಾಡಿಕೊಂಡಿದ್ದಾರೆ. ಬಿಗ್‍ಬಾಸ್‍ಗೆ ದಾರಿ ತೋರಿಸುತ್ತಿರುವ ಶುಭಾ ಅವರನ್ನು ಕಂಡು ಅಲ್ಲೇ ಇದ್ದ ದಿವ್ಯಾ ಉರುಡುಗ ನಕ್ಕಿದ್ದಾರೆ.
Advertisement
ಶುಭಾ ಬಿಗ್‍ಬಾಸ್ ಎದುರಲ್ಲಿ ಆಗಾಗ ಹಟ ಮಾಡುತ್ತಲೇ ಇರುತ್ತಾರೆ. ಮಗುವಿನಂತೆ ಹಟ, ಜಗಳ, ಮುನಿಸು ಮಾಡುವ ಶುಭಾ ಅವರಿಂದ ಮನರಂಜನೆ ಪಕ್ಕಾ. ಆದರೆ ಆಟ ಎನ್ನುವ ವೆಚಾರಕ್ಕೆ ಬಂದ್ರೆ ಶುಭಾ ಅವರು ಕೊಂಚ ಪ್ರಯತ್ನ ಪಡಬೇಕು ಎಂದು ಆಗಾಗ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿಕೊಳ್ಳುತ್ತಾರೆ.